ಬೆಂಗಳೂರು: ತಾಯಿ ಲಕ್ಷ್ಮಿಯನ್ನು ಸಂಪತ್ತಿನ ಅಧಿ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದವರ ಮನೆ ಯಾವಾಗಲೂ ಸಂಪತ್ತು ಮತ್ತು ಧಾನ್ಯಗಳಿಂದ ತುಂಬಿರುತ್ತದೆ. ಮಹಾಲಕ್ಷ್ಮಿ ವ್ರತವನ್ನು ವರ್ಷಕ್ಕೊಮ್ಮೆ ಆಚರಿಸಲಾಗುತ್ತದೆ, ಇದು 16 ದಿನಗಳವರೆಗೆ ಇರುತ್ತದೆ. ಈ ವ್ರತವು ಭಾದ್ರಪದ ಮಾಸದಲ್ಲಿ ಬರುತ್ತದೆ. ಈ ವರ್ಷ ಮಹಾಲಕ್ಷ್ಮಿ ವ್ರತವು ಸೆಪ್ಟೆಂಬರ್ 22 ರಿಂದ ಆರಂಭಗೊಂಡಿದೆ, ಇದು 6 ಅಕ್ಟೋಬರ್ 2023 ರವರೆಗೆ ಇರಲಿದೆ. 16 ದಿನಗಳ ಕಾಲ ಮಹಾಲಕ್ಷ್ಮಿ ವ್ರತವನ್ನು ಆಚರಿಸುವ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳನ್ನು ತಾಯಿ ಲಕ್ಷ್ಮಿ ಪೂರೈಸುತ್ತಾಳೆ ಎಂಬುದು ಧಾರ್ಮಿಕ ನಂಬಿಕೆ. ಎಲ್ಲಾ ಕೆಲಸಗಳಲ್ಲಿ ವ್ಯಕ್ತಿಗೆ ಯಶಸ್ಸು ಪ್ರಾಪ್ತಿಯಾಗುತ್ತದೆ. ಈ ಸಮಯದಲ್ಲಿ, ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಕೆಲವು ಉಪಾಯಗಳನ್ನು ಕೈಗೊಳ್ಳಬೇಕು. ಇದರಿಂದ ಜೀವನದಲ್ಲಿ ಸಂಪತ್ತು, ಸಂತೋಷ ಮತ್ತು ಐಶ್ವರ್ಯಕ್ಕೆ ಎಂದಿಗೂ ಕೊರತೆ ಎದುರಾಗುವುವುದಿಲ್ಲ. 


COMMERCIAL BREAK
SCROLL TO CONTINUE READING

ಮಹಾಲಕ್ಷ್ಮಿ ವ್ರತದ ಉಪಾಯಗಳು
- ನಿಮ್ಮ ವೃತ್ತಿಯಲ್ಲಿ ಯಾವುದೇ ಅಡೆತಡೆಗಳು ಇದ್ದಲ್ಲಿ, ಉದ್ಯೋಗ ಅಥವಾ ವ್ಯವಹಾರದಲ್ಲಿ ನೀವು ಬಯಸಿದ ಯಶಸ್ಸನ್ನು ಪಡೆಯದಿದ್ದರೆ, ಮಹಾಲಕ್ಷ್ಮಿ ವ್ರತದ ಸಮಯದಲ್ಲಿ ಪ್ರತಿದಿನ ಮಹಾಲಕ್ಷ್ಮಿ ವ್ರತದ ಕಥೆಯನ್ನು ಆಲಿಸಿ. ಈ ಸಮಯದಲ್ಲಿ, ನಿಮ್ಮ ಕೈಯಲ್ಲಿ 16 ಅಕ್ಕಿ ಕಾಳುಗಳನ್ನು ಇಟ್ಟುಕೊಳ್ಳಿ, ಈ ಅಕ್ಕಿಯ ಕಾಳುಗಳು ಅಖಂಡ ಕಾಳುಗಳಾಗಿರಲಿ. ಕಥೆ ಮುಗಿದ ನಂತರ, ಈ ಅಕ್ಕಿ ಕಾಳುಗಳನ್ನು ನೀರಿನಲ್ಲಿ ಹಾಕಿ ಮತ್ತು ಕೋಟೆಯದಾಗಿ ಈ ನೀರಿನಿಂದ ಚಂದ್ರನಿಗೆ ಅರ್ಘ್ಯ ನೀಡಿ.


- ಮಹಾಲಕ್ಷ್ಮಿ ಉಪವಾಸವನ್ನು ಆಚರಿಸಿ, ಸಂಜೆ ಲಕ್ಷ್ಮಿ ದೇವಿಯನ್ನು ಪೂಜಿಸಿ ಪಾಯಸವನ್ನು ನೈವೇದ್ಯ ಅರ್ಪಿಸಿ. ಇದಾದ ಬಳಿಕ ಪಾಯಸವನ್ನು 16 ಕನ್ಯೆಯರಿಗೆ ವಿತರಿಸಿ.


- ಅಪಾರ ಸಂಪತ್ತು ಮತ್ತು ಯಶಸ್ಸನ್ನು ಪಡೆಯಲು, ಮಹಾಲಕ್ಷ್ಮಿ ವ್ರತದ ಸಮಯದಲ್ಲಿ ಕಮಲಗಟ್ಟೆಯ  ಜಪಮಾಲೆಯೊಂದಿಗೆ 'ಓಂ ಶ್ರೀ ಕ್ಲೀನ್ ಮಹಾಲಕ್ಷ್ಮಿ ಮಹಾಲಕ್ಷ್ಮಿ ಮಹಾಲಕ್ಷ್ಮಿ ಏಹ್ಯೇಹಿ ಸರ್ವ ಸೌಭಾಗ್ಯಂ ದೇಹಿ ಮೇ ಸ್ವಾಹಾ' ಎಂಬ ಮಂತ್ರವನ್ನು ಪಠಿಸಿ. ಇದರಿಂದ ಮಲಗಿಕೊಂಡ ನಿಮ್ಮ ಭಾಗ್ಯ ಎಚ್ಚೆತ್ತುಕೊಳ್ಳುತ್ತದೆ.  ಅಲ್ಲದೆ, ದಾಂಪತ್ಯ ಜೀವನದಲ್ಲಿ ಸಂತೋಷ ತುಂಬುತ್ತದೆ.


- ಮಹಾಲಕ್ಷ್ಮಿ ವ್ರತದ ಯಾವುದೇ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸಿ. ಪೂಜೆಯ ಸಮಯದಲ್ಲಿ, ಲಕ್ಷ್ಮಿ ದೇವಿಯ ಮುಂದೆ ಹಳದಿ ಬಣ್ಣದ ಕವಡೆಗಳನ್ನು ಇರಿಸಿ ಮತ್ತು ಅವುಗಳನ್ನು ಪೂಜಿಸಿ, ನಂತರ ಮಹಾಲಕ್ಷ್ಮಿ ವ್ರತವು ಮುಗಿದ ನಂತರ, ಕವಡೆಗಳನ್ನು ಎತ್ತಿಕೊಂಡು ಕೆಂಪು ಬಟ್ಟೆಯಲ್ಲಿ ಕಟ್ಟಿ ಅವುಗಳನ್ನು ತಿಜೋರಿಯಲ್ಲಿರಿಸಿ. ಇದರಿಂದ ತಿಜೋರಿಯಲ್ಲಿರುವ ಹಣ ಹೆಚ್ಚುತ್ತಲೇ ಇರುತ್ತದೆ.


ಇದನ್ನೂ ಓದಿ-ಶೀಘ್ರದಲ್ಲೇ ರಾಹು-ಗುರುವಿನ ಮೈತ್ರಿ ಅಂತ್ಯ, ಈ ರಾಶಿಗಳ ಜನರ ಗೋಲ್ಡನ್ ಟೈಮ್ ಆರಂಭವಾಗಲಿದೆ!


- ಮಹಾಲಕ್ಷ್ಮಿ ವ್ರತದ ಸಮಯದಲ್ಲಿ, ಕಮಲಗಟ್ಟೆಯ ಜಪಮಾಲೆ ಹಿಡಿದು  ಲಕ್ಷ್ಮಿ ದೇವಿಯ ಬೀಜ ಮಂತ್ರವಾದ 'ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಯೇ ಪ್ರಸಿದ್ಧ್ ಪ್ರಸಿದ್ಧ್ ಶ್ರೀಂ ಹ್ರೀಂ ಶ್ರೀಂ ಓಂ ಮಹಾಲಕ್ಷ್ಮಿ ನಮಃ' ಎಂದು ಜಪಿಸಿ. ತಾಯಿ ಲಕ್ಷ್ಮಿ ನಿಮ್ಮ ಇಷ್ಟಾರ್ಥಗಳನ್ನು ಪೂರೈಸುವಳು.


ಇದನ್ನೂ ಓದಿ-ಸ್ನೇಹ ಭಾವದ ಗ್ರಹಗಳಾದ ಸೂರ್ಯ-ಮಂಗಳರ ಮೈತ್ರಿ, ಈ ಜನರಿಗೆ ಸ್ಥಾನಮಾನ ಮತ್ತು ಸಾಕಷ್ಟು ಧನಪ್ರಾಪ್ತಿಯ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ