ಸ್ನೇಹ ಭಾವದ ಗ್ರಹಗಳಾದ ಸೂರ್ಯ-ಮಂಗಳರ ಮೈತ್ರಿ, ಈ ಜನರಿಗೆ ಸ್ಥಾನಮಾನ ಮತ್ತು ಸಾಕಷ್ಟು ಧನಪ್ರಾಪ್ತಿಯ ಯೋಗ!

Sun Mars Yuti In Kanya 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯಲ್ಲಿ ಸ್ನೇಹ ಭಾವದ ಗ್ರಹಗಳಾಗಿರುವ  ಸೂರ್ಯ ಮಂಗಳರ ಮೈತ್ರಿ ನೆರವೇರಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜನರ ಭಾಗ್ಯ ಸಾಕಷ್ಟು ಹೊಳೆಯಲಿದ್ದು, ಇವರಿಗೆ ಸಾಕಷ್ಟು ಧನಪ್ರಾಪ್ತಿಯಾಗಲಿದೆ. spiritual news in kannada
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಯನ್ನು ಪರಿವರ್ತಿಸುವ ಮೂಲಕ ಅನ್ಯ ಗ್ರಹಗಳ ಜೊತೆಗೆ ಮೈತ್ರಿಯನ್ನು ಮಾಡಿಕೊಳ್ಳುತ್ತವೆ. ಇದರ ಪ್ರಭಾವ ದ್ವಾದಶ ರಾಶಿಗಳು ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಗೋಚರಿಸುತ್ತದೆ. ಪ್ರಸ್ತುತ ಗ್ರಹಗಳ ರಾಜನಾಗಿರುವ ಸೂರ್ಯ ಹಾಗೂ ಗ್ರಹಗಳ ಸೇನಾಪತಿಯಾಗಿರುವ ಮಂಗಳರ ಮೈತ್ರಿ ಕನ್ಯಾ ರಾಶಿಯಲ್ಲಿ ನೆರವೇರಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಸಾಕಷ್ಟು ಧನಪ್ರಾಪ್ತಿಯಾಗಲಿದ್ದು, ಸಮಾಜದಲ್ಲಿ ಅವರ ಘನತೆ-ಗೌರವ ಹೆಚ್ಚಾಗಲಿದೆ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-ಭೂಮಿ ಪುತ್ರ ಮಂಗಳನ ಚಿತ್ರಾ ನಕ್ಷತ್ರ ಗೋಚರ, ಮೂರು ರಾಶಿಗಳಿಗೆ ಜನರಿಗೆ ಅದೃಷ್ಟದ ಬೀಗದ ಕೈ ನೀಡಲು ಧನಲಕ್ಷ್ಮಿಯೇ ಆಗಮಿಸಲಿದ್ದಾಳೆ!

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Sun Mars Yuti In Kanya 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯಲ್ಲಿ ಸ್ನೇಹ ಭಾವದ ಗ್ರಹಗಳಾಗಿರುವ  ಸೂರ್ಯ ಮಂಗಳರ ಮೈತ್ರಿ ನೆರವೇರಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜನರ ಭಾಗ್ಯ ಸಾಕಷ್ಟು ಹೊಳೆಯಲಿದ್ದು, ಇವರಿಗೆ ಸಾಕಷ್ಟು ಧನಪ್ರಾಪ್ತಿಯಾಗಲಿದೆ.   

2 /5

ಮೇಷ ರಾಶಿ: ನಿಮ್ಮ ಗೋಚರ ಜಾತಕದ ಶಷ್ಟಮ ಭಾವದಲ್ಲಿ ಈ ಮೈತ್ರಿ ನೆರವೇರುತ್ತಿದೆ. ಹೀಗಾಗಿ ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಲಾಭ ಸಿಗಲಿದೆ. ಮಂಗಳ ನಿಮ್ಮ ರಾಶಿಯ ಅಧಿಪತಿ ಮತ್ತು ಆತ ನಿಮ್ಮ ಜಾತಕದಲ್ಲಿ ವಿಪರೀತ ರಾಜಯೋಗ ನಿರ್ಮಿಸಿದ್ದಾನೆ. ಹೀಗಾಗಿ ಕೆಲಸ ಕಾರ್ಯಗಳಲ್ಲಿ ನಿಮಗೆ ನಿರೀಕ್ಷೆಗೆ ತಕ್ಕಂತೆ ಫಲ ಸಿಗಲಿದೆ. ನಿಮಗೆ ಬರಬೇಕಾದ ಹಣ ನಿಮ್ಮತ್ತ ಮರಳಲಿದೆ. ಕುಟುಂಬದಲ್ಲಿ ವಾತಾವರಣ ಸಂತಸದಿಂದ ಕೂಡಿರಲಿದೆ.   

3 /5

ವೃಶ್ಚಿಕ ರಾಶಿ: ನಿಮ್ಮ ಗೋಚರ ಜಾತಕದ ಲಾಭ ಸ್ಥಾನದಲ್ಲಿ ಈ ಮೈತ್ರಿ ನೆರವೇರಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ಹಳೆ ಹೂಡಿಕೆಗಳಿಂದ ಸಾಕಷ್ಟು ಧನಲಾಭ ಸಿಗಲಿದೆ. ಇಂಪೋರ್ಟ್-ಎಕ್ಸ್ಪೋರ್ಟ್ ವ್ಯವಹಾರ ನಡೆಸುವವರಿಗೆ ಇದರಿಂದ ವಿಶೇಷ ಲಾಭ ಸಿಗಲಿದೆ. ನಿಮ್ಮ ಗೋಚರ ಜಾತಕದ ವೃತ್ತಿ ಜೀವನದ ಭಾವಕ್ಕೆ ಸೂರ್ಯ ಅಧಿಪತಿಯಾದ ಕಾರಣ ಸರ್ಕಾರಿ ನೌಕರಿಯ ಸಿದ್ಧತೆಯಲ್ಲಿ ತೊಡಗಿರುವವರಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗಲಿದೆ. ಈಗಾಗಲೇ ಸರ್ಕಾರಿ ನೌಕರಿಯಲ್ಲಿ ನಿರತರಾದವರಿಗೆ ಉತ್ತಮ ಲಾಭ ಸಿಗಲಿದೆ. ಇತರೆ ನೌಕರವರ್ಗದ ಜನರಿಗೆ ಆಕಸ್ಮಿಕ ಧನಲಾಭದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.   

4 /5

ಕರ್ಕ ರಾಶಿ: ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಈ ಸೂರ್ಯ-ಮಂಗಳ ಮೈತ್ರಿ ರೂಪುಗೊಂಡಿದೆ. ಹೀಗಾಗಿ ಈ ಅವಧಿಯಲ್ಲಿ ನೀವು ನಿಮ್ಮ ಶತ್ರುಗಳ ಮೇಲೆ ಜಯಸಾಧಿಸುವಲ್ಲಿ ಯಶಸ್ವಿಯಾಗುವಿರಿ. ಸೂರ್ಯ ನಿಮ್ಮ ಗೋಚರ ಜಾತಕದ ಧನ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಸಿಲುಕಿಹಾಕಿಕೊಂಡ ಧನ ನಿಮಗೆ ಸಿಗಲಿದೆ. ಮಂಗಳ ನಿಮ್ಮ ಗೋಚರ ಜಾತಕದ ನೌಕರಿ, ಶಿಕ್ಷಣ ಭಾವಕ್ಕೆ ಅಧಿಪತಿ ಹಿತಾಗಿ ವ್ಯಾಪಾರದಲ್ಲಿ ನಿಮಗೆ ಉತ್ತಮ ಲಾಭಾಂಶ ಸಿಗಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)