ದುರ್ಗಾ ಸಪ್ತಶತಿ ಪಠಣದ ಪ್ರಯೋಜನಗಳು: ಪಿತೃಪಕ್ಷದ ನಂತರ ಅಂದರೆ ಅಕ್ಟೋಬರ್ 15ರ ಮರುದಿನ ಅಶ್ವಿನ ಶುಕ್ಲಪಕ್ಷ ಪ್ರತಿಪದದಿಂದ ಶಾರದೀಯ ನವರಾತ್ರಿ ಪ್ರಾರಂಭವಾಗುತ್ತದೆ. ನವರಾತ್ರಿಯಲ್ಲಿ ಮಾತೃದೇವತೆಯ 9 ವಿಭಿನ್ನ ರೂಪಗಳನ್ನು ಪೂಜಿಸಲಾಗುತ್ತದೆ. ತಾಯಿ ದುರ್ಗಾದೇವಿ 9 ಅಥವಾ ಅದಕ್ಕಿಂತ ಹೆಚ್ಚು ರೂಪಗಳು ಇರಬಹುದು, ಆದರೆ ತಾಯಿ ಒಂದೇ ಮತ್ತು ಅವಳು ಬೇರೆಯಲ್ಲ. ‘ಈ ಜಗತ್ತಿನಲ್ಲಿ ನಾನೊಬ್ಬಳೇ ಇದ್ದೇನೆ, ಬೇರೆ ಯಾರೂ ಇಲ್ಲ!’ವೆಂದು ಸ್ವತಃ ತಾಯಿಯೇ ಹೇಳಿದ್ದಾಳೆ. ಗೋಚರ ಮತ್ತು ಅಗೋಚರ ರೂಪಗಳ ಎಲ್ಲಾ ನಿರ್ಜೀವ, ಸಜೀವ ಮತ್ತು ಜೀವಂತ ಪ್ರಪಂಚಗಳಲ್ಲಿ ನಾನು ಒಬ್ಬಳೇ. ಈ ಇಡೀ ಜಗತ್ತು ನನ್ನಿಂದ ಮಾತ್ರ ಸೃಷ್ಟಿಯಾಗಿದೆ ಅಂತಾ ತಾಯಿ ಹೇಳುತ್ತಾಳೆ.  


COMMERCIAL BREAK
SCROLL TO CONTINUE READING

ನವರಾತ್ರಿಯ ಸಮಯದಲ್ಲಿ ಮಾತೃ ದೇವಿಯ ವಿವಿಧ ರೂಪಗಳನ್ನು ಪೂಜಿಸುವಾಗ ದುರ್ಗಾ ಸಪ್ತಶತಿಯನ್ನು ಪಠಿಸಲಾಗುತ್ತದೆ. ದುರ್ಗಾ ಸಪ್ತಶತಿಯನ್ನು ಪಠಿಸುವ ಭಕ್ತನಿಗೆ ತಾಯಿಯು ಆಶೀರ್ವಾದ ನೀಡುತ್ತಾಳೆ.  ಆ ಭಕ್ತನು ಕಾಮ ಮತ್ತು ಕ್ರೋಧದಂತಹ ವಿಷಯಗಳ ಮೇಲೆ ವಿಜಯವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. 


ಇದನ್ನೂ ಓದಿ: ಜೀವನದಲ್ಲಿ ಎಂತಹ ಪರಿಸ್ಥಿತಿಯೇ ಎದುರಾಗಲಿ ಈ ಸಂಗತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ!


ತೊಂದರೆಗಳಿಂದ ಮುಕ್ತಿ: ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಎಲ್ಲವೂ ಇದ್ದರೆ ಕೌಟುಂಬಿಕ ಕಲಹದ ಬಗ್ಗೆ ಚಿಂತೆ, ಇಲ್ಲದಿದ್ದರೆ ಆಸ್ತಿ ವಿವಾದ ಹೀಗೆ ಭಯದಿಂದ ಒತ್ತಡಕ್ಕೆ ಒಳಗಾಗುತ್ತಾರೆ. ಕೆಲವರಿಗೆ ಪೂರ್ಣ ಪರಿಶ್ರಮದಿಂದ ಕೆಲಸ ಮಾಡಿದರೂ ಯಶಸ್ಸು ಸಿಗುವುದಿಲ್ಲ. ಇಂತಹವರು ದುರ್ಗಾ ಸಪ್ತಶತಿಯನ್ನು ಪಠಿಸಬೇಕು, ಅದು ಅವರನ್ನು ಎಲ್ಲಾ ತೊಂದರೆಗಳಿಂದ ಮುಕ್ತಗೊಳಿಸುತ್ತದೆ.


ಪ್ರತಿನಿತ್ಯ ಸಪ್ತಶತಿ ಪಾರಾಯಣ ಮಾಡಬೇಕಾದರೂ ಕಾರಣಾಂತರಗಳಿಂದ ಸಾಧ್ಯವಾಗದವರು ಅಕ್ಟೋಬರ್ 15ರಿಂದ ಶಾರದೀಯ ನವರಾತ್ರಿಯಿಂದ ಪಾರಾಯಣ ಆರಂಭಿಸಬೇಕು. ಮಾತೆಯ ಮೂರ್ತಿಯ ಮುಂದೆ ನಿತ್ಯ ಪಾರಾಯಣ ಮಾಡಬೇಕು. ದುರ್ಗೆಯನ್ನು ಪೂಜಿಸುವುದು ಮತ್ತು ಸಪ್ತಶತಿಯನ್ನು ಓದುವುದು ಅಥವಾ ಕೇಳುವುದು ಗೃಹಸ್ಥರಿಗೆ ವರದಾನವಾದಂತೆ. ದುರ್ಗಾ ಸಪ್ತಶತಿಯನ್ನು ಪಠಿಸುವ ಅಥವಾ ಕೇಳುವ ಮನೆಯಲ್ಲಿ, ಆ ಮನೆಯ ಶಕ್ತಿಯು ಅಲೌಕಿಕವಾಗುತ್ತದೆ ಮತ್ತು ನಕಾರಾತ್ಮಕತೆ ನಿವಾರಣೆಯಾಗುತ್ತದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: ಶನಿಯ ಸಾಡೇಸಾತಿಯಿಂದ ಮುಕ್ತಿ ನೀಡುತ್ತೇ ಈ ಒಂದು ಚಿಕ್ಕ ಉಪಾಯ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.