ತುಲಾ ರಾಶಿಗೆ ಗ್ರಹಗಳ ರಾಜ ಸೂರ್ಯನ ಸಂಕ್ರಮಣ, ಈ ಜನರ ಜೀವನದಲ್ಲಿ ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದ ಚಿನ್ನದಂತಹ ಕಾಲ ಆರಂಭ!

Sun Transit To Libra 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಗ್ರಹಗಳ ರಾಜ ಸೂರ್ಯ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ 3 ರಾಶಿಗಳ ಜನರ ಜೀವನದಲ್ಲಿ ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದ ಆಕಸ್ಮಿಕ ಧನಲಾಭಯೋಗ ರೂಪುಗೊಳ್ಳಲಿದೆ. (Spiritual News In Kannada)

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಅಕ್ಟೋಬರ್ 18, 2023 ರಿಂದ ಗ್ರಹಗಳ ರಾಜ ಸೂರ್ಯನ ತುಲಾ ಸಂಕ್ರಮಣ ನೆರವೇರಲಿದೆ. ತುಲಾ ರಾಶಿಯ ಮೇಲೆ ಶುಕ್ರನ ಆಧಿಪತ್ಯವಿದೆ. ಹೀಗಿರುವಾಗ ಸೂರ್ಯ ಗೋಚರದ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಉಂಟಾಗಲಿದೆ. ವಿಶೇಷವಾಗಿ ಸೂರ್ಯನ ಈ ರಾಶಿ ಪರಿವರ್ತನೆ 3 ರಾಶಿಗಳ ಜನರಿಗೆ ತುಂಬಾ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಈ ಅವಧಿಯಲ್ಲಿ ಈ ಜನರ ಸ್ಥಾನಮಾನ, ಘನತೆ ಗೌರವ ಸಾಕಷ್ಟು ಹೆಚ್ಚಾಗಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ (Spiritual News In Kannada),

 

ಇದನ್ನೂ ಓದಿ-ಶೀಘ್ರದಲ್ಲೇ ಛಾಯಾ ಗ್ರಹಗಳಾದ ರಾಹು-ಕೇತುಗಳ ರಾಶಿ ಪರಿವರ್ತನೆ, ಈ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

Sun Transit To Libra 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಗ್ರಹಗಳ ರಾಜ ಸೂರ್ಯ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ 3 ರಾಶಿಗಳ ಜನರ ಜೀವನದಲ್ಲಿ ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದ ಆಕಸ್ಮಿಕ ಧನಲಾಭಯೋಗ ರೂಪುಗೊಳ್ಳಲಿದೆ.   

2 /5

ಮೇಷ ರಾಶಿ: ಸೂರ್ಯ ನಿಮ್ಮ ಗೋಚರ ಜಾತಕದ ಏಳನೇ ಮನೆಯಲ್ಲಿ ಸಂಚರಿಸಲಿರುವ ಕಾರಣ, ಸೂರ್ಯನ ಈ ತುಲಾ ಗೋಚರ ನಿಮ್ಮ ಪಾಲಿಗೆ ಸಾಕಷ್ಟು ಲಾಭಗಳನ್ನು ತಂದು ಕೊಡಲಿದೆ. ಬಾಳಸಂಗಾತಿಯ ಜೊತೆಗೆ ನಿಮ್ಮ ಸಂಬಂಧ ಸುಮಧುರವಾಗಿರಲಿದೆ. ಪಾಟ್ನರ್ ಶಿಪ್ ವ್ಯವಸಾಯದಲ್ಲಿದ್ದರೇ ನಿಮಗೆ ಉತ್ತಮ ಲಾಭವಾಗಲಿದೆ. ಖಾಸಗಿ ಈವನದಲ್ಲಿ ಕುಟುಂಬ ಸದಸ್ಯರ ಜೊತೆಗಿನ ನಿಮ್ಮ ಸಂಬಂಧ ಮತ್ತಷ್ಟು ನಿಕಟವಾಗಲಿದೆ. ಸೂರ್ಯ ದೇವ ನಿಮ್ಮ ಜಾತಕದ ಸಂತಾನ ಭಾವಕ್ಕೆ ಅಧಿಪತಿ. ಹೀಗಾಗಿ ಮಕ್ಕಳಿಗೆ ಸಂಬಂಧಿಸಿದ ಶುಭ ಸಮಾಚಾರ ನಿಮಗೆ ಪ್ರಾಪ್ತಿಯಾಗಲಿದೆ. ಮಕ್ಕಳ ಹೊಂದುವ ಬಯಕೆ ಇರುವವರ ಆಸೆ ಈಡೇರಲಿದೆ.   

3 /5

ಸಿಂಹ ರಾಶಿ: ಸೂರ್ಯ ನಿಮ್ಮ ರಾಶಿಗೆ ಅಧಿಪತಿ ಮತ್ತು ಆತ ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಾಹಸ-ಪರಾಕ್ರಮದಲ್ಲಿ ಹೆಚ್ಚಳ ಕಂಡುಬರಲಿದೆ. ವಿದೇಶಕ್ಕೆ ಸಂಬಂಧಿಸಿದ ಕೆಲಸದಲ್ಲಿ ನಿರತರಾದವರಿಗೆ ಇದು ತುಂಬಾ ಲಾಭದಾಯಕ ಸಾಬೀತಾಗಲಿದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗಲಿದೆ ಹಾಗೂ ವೃತ್ತಿ ಜೀವನದಲ್ಲಿ ಚಿನ್ನದಂತಹ ಅವಕಾಶಗಳು ಒದಗಿಬರುವ ಸಾಧ್ಯತೆ ಇದೆ. ನೌಕರವರ್ಗದ ಜನರಿಗೆ ಈ ಗೋಚರ ತುಂಬಾ ಶುಭ ಸಾಬೀತಾಗಲಿದೆ. ಕಚೇರಿಯಲ್ಲಿ ಕೆಲಸಕ್ಕೆ ಉತ್ತಮ ವಾತಾವರಣ ಇರಲಿದೆ. ಹೊಸ ನೌಕರಿಯ ಹುಡುಕಾಟದಲ್ಲಿರುವ ಜನರ ಹುಡುಕಾಟಕ್ಕೆ ತೆರೆಬೀಳಲಿದೆ.   

4 /5

ಕರ್ಕ ರಾಶಿ: ಈ ಅವಧಿಯಲ್ಲಿ ಸೂರ್ಯ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಸಂಚಾರ ನಡೆಸಲಿದ್ದಾನೆ. ವಾಹನ-ಆಸ್ತಿ ಪಾಶಿ ಖರೀದಿಗೆ ನೀವು ಮನಸ್ಸು ಮಾಡುವ ಸಾಧ್ಯತೆ ಇದೆ, ವ್ಯಾಪಾರ ಮಾಡುತ್ತಿದ್ದರೆ, ಹೊಸ ವ್ಯಾಪಾರದ ಯೋಜನೆಯನ್ನು ರೂಪಿಸುವಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಕೆಲಸ ರಿಯಲ್ ಎಸ್ಟೇಟ್ ಅಥವಾ ಆಸ್ತಿಪಾಸ್ತಿಗೆ ಸಂಬಂಧಿಸಿದ್ದಾಗಿದ್ದಾರೆ. ಈ ಅವಧಿ ನಿಮ್ಮ ಪಾಲಿಗೆ ಲಾಭದಾಯಕ ಸಾಬೀತಾಗಲಿದೆ. ಸೂರ್ಯ ನಿಮ್ಮ ಜಾತಕದ ಧನಭಾವಕ್ಕೆ ಅಧಿಪತಿಯಾದ ಕಾರಣ ನಿಮಗೆ ಈ ಅವಧಿಯಲ್ಲಿ ಸಾಕಷ್ಟು ಧನಲಾಭ ಉಂಟಾಗಲಿದೆ.    

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)