Dhantrayodashi date 2023 : ದೀಪಾವಳಿ ಹಿಂದೂ ಧರ್ಮದಲ್ಲಿ ಬಹು ದೊಡ್ಡ ಹಬ್ಬ. ಈ ಹಬ್ಬಕ್ಕೆ ಮಹತ್ವ ಕೂಡಾ ಹೆಚ್ಚು. 2023 ರಲ್ಲಿ, ಈ ಹಬ್ಬವನ್ನು ಸಾಮಾನ್ಯ ವರ್ಷಗಳಿಗಿಂತ 15 ದಿನ ತಡವಾಗಿ ಆಚರಿಸಲಾಗುತ್ತದೆ.  ಅಧಿಕ ಮಾಸದಿಂದಾಗಿ ದೀಪಾವಳಿ ಹಬ್ಬವನ್ನು ತಡವಾಗಿ ಆಚರಿಸಲಾಗುತ್ತದೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನಾಂಕದಂದು ಆಚರಿಸಲಾಗುವ ಧನತ್ರಯೋದಶಿ ಪ್ರಾರಂಭವಾಗುತ್ತದೆ. 2023 ರಲ್ಲಿ,  ನವೆಂಬರ್ 10 ರಂದು ಧನತ್ರಯೋದಶಿ  ಆಚರಿಸಲಾಗುತ್ತದೆ.   ಧನತ್ರಯೋದಶಿಯ  2 ದಿನಗಳ ನಂತರ 12 ನವೆಂಬರ್ 2023 ರಂದು  ದೀಪಾವಳಿಯನ್ನು ಆಚರಿಸಲಾಗುತ್ತದೆ. ಧನತ್ರಯೋದಶಿ ದಿನದಂದು, ಕುಬೇರ ಮತ್ತು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಕೆಲವು ಕೆಲಸಗಳನ್ನು ಮಾಡಿದರೆ, ವರ್ಷವಿಡೀ ಹಣದ ಮಳೆಯಾಗುತ್ತದೆ.


COMMERCIAL BREAK
SCROLL TO CONTINUE READING

ಧನತ್ರಯೋದಶಿ  2023 ದಿನಾಂಕ ಮತ್ತು ಪೂಜೆ ಮುಹೂರ್ತ  :
ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನಾಂಕ, ಅಂದರೆ ಧನತ್ರಯೋದಶಿ ನವೆಂಬರ್ 10 ರಂದು ಮಧ್ಯಾಹ್ನ 12:35 ರಿಂದ ಪ್ರಾರಂಭವಾಗಿ ನವೆಂಬರ್ 11 ರಂದು ಮಧ್ಯಾಹ್ನ 01:57 ಕ್ಕೆ ಕೊನೆಗೊಳ್ಳುತ್ತದೆ. ಧನತ್ರಯೋದಶಿ  ದಿನದಂದು ಪೂಜೆಗೆ ಶುಭ ಸಮಯ ಸಂಜೆ 06:02 ರಿಂದ ರಾತ್ರಿ 08:00 ರವರೆಗೆ ಇರುತ್ತದೆ. ಅಂದರೆ ಕೇವಲ 2 ಗಂಟೆಗಳವರೆಗೆ ಮಾತ್ರ  ಧನತ್ರಯೋದಶಿ ಪೂಜೆ ಮಾಡಲು ಮಂಗಳಕರ ಸಮಯವಾಗಿರುತ್ತದೆ. 


ಇದನ್ನೂ ಓದಿ : ಹಸುವಿಗೆ‌ ಈ 1 ಪದಾರ್ಥ ತಿನ್ನಿಸಿ.. ಅದೃಷ್ಟ ಚಿನ್ನದಂತೆ ಹೊಳೆಯುತ್ತದೆ, ಧನಲಕ್ಷ್ಮಿ ಮನೆಗೆ ಬರುವಳು!


ಧನತ್ರಯೋದಶಿ ಪರಿಹಾರಗಳು : 
ಧನತ್ರಯೋದಶಿ ದಿನದಂದು ಕೈಗೊಳ್ಳುವ ಕ್ರಮಗಳು ಸಂಪತ್ತನ್ನು ತ್ವರಿತವಾಗಿ ಹೆಚ್ಚಿಸುತ್ತವೆ. ಎಲ್ಲಾ ಆರ್ಥಿಕ ಸಮಸ್ಯೆಗಳನ್ನು ನಿವಾರಿಸುತ್ತದೆ. 


- ಧನತ್ರಯೋದಶಿಯಂದು ಸಂಜೆ, ಮನೆಯೊಳಗೆ ಮತ್ತು ಮನೆಯ  ಬಾಲ್ಕನಿಯಲ್ಲಿ 13 ದೀಪಗಳನ್ನು ಬೆಳಗಿಸಿ. ಇದರೊಂದಿಗೆ, ಮಂಗಳಕರ ಸಮಯದಲ್ಲಿ ಕುಬೇರ ದೇವನನ್ನು ಪೂಜಿಸಿ, ಇದು ನಿಮ್ಮ ಆರ್ಥಿಕ ಸಮಸ್ಯೆಗಳನ್ನು ನಿವಾರಿಸುತ್ತದೆ. 


- ಧನತ್ರಯೋದಶಿ ದಿನದಂದು ಸಕ್ಕರೆ, ಪಾಯಸ , ಅಕ್ಕಿ, ಬಿಳಿ ಬಟ್ಟೆಯಂತಹ ಬಿಳಿ ವಸ್ತುಗಳನ್ನು ದಾನ ಮಾಡಿ. ಧನತ್ರಯೋದಶಿ ಲಕ್ಷ್ಮೀ ದೇವಿಗೆ  ಸಂಬಂಧಿಸಿದ್ದಾಗಿದೆ.  ಲಕ್ಷ್ಮೀ ದೇವಿಗೆ ಈ ವಸ್ತುಗಳೆಂದರೆ ಬಹಳ ಪ್ರಿಯ. ಹಾಗಾಗಿ ಲಕ್ಷ್ಮೀ ದೇವಿಗೆ ಪ್ರಯವಾಗಿರುವ ವಸ್ತುಗಳನ್ನು ದಾನ ಮಾಡುವುದರಿಂದ  ಲಕ್ಷ್ಮೀ ಪ್ರಸನ್ನಳಾಗುತ್ತಾಳೆ. 


ಇದನ್ನೂ ಓದಿ : ಈ ಮೂರು ರಾಶಿಯಲ್ಲಿ ಲಕ್ಷ್ಮೀ ನಾರಾಯಣ ಯೋಗ ! ಜುಲೈ 25 ರಿಂದ ರಾಶಿಯವರ ಜೀವನದಲ್ಲಿ ಹರಿಯುವುದು ಹಣದ ಹೊಳೆ


- ಧನತ್ರಯೋದಶಿ  ದಿನದಂದು, ಕುಬೇರ ದೇವ ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸುವಾಗ ಹಳದಿ ಕವಡೆ ಮತ್ತು ಕೊತ್ತಂಬರಿ ಬೀಜಗಳನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚುತ್ತದೆ. 


- ಧನತ್ರಯೋದಶಿ ದಿನದಂದು ಮನೆಯಲ್ಲಿ ಕುಬೇರ ಯಂತ್ರವನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಿ ನಂತರ ಅದನ್ನು ಕಮಾನಿನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಕುಬೇರನ ಕೃಪೆಯಿಂದ ಸಂಪತ್ತು ಹೆಚ್ಚುತ್ತದೆ. ಹಾಗೆಯೇ 'ಓಂ ಶ್ರೀ ಹ್ರೀ ಕ್ಲೀಂ ಶ್ರೀ ಕ್ಲೀಂ ವಿತ್ತೇಶ್ವರಾಯ ನಮಃ' ಎನ್ನುವ ಮಂತ್ರವನ್ನು ಪಠಣ ಮಾಡಿ.  


ಧನತ್ರಯೋದಶಿ ದಿನದಂದು ತೃತೀಯ ಲಿಂಗಿಗಳಿಗೆ ದಾನ ನೀಡಬೇಕು.  ಇದರೊಂದಿಗೆ, ಅವರಿಂದ ಒಂದು ರೂಪಾಯಿಯನ್ನು ಕೇಳಿ ಮತ್ತು ಅದನ್ನು ನಿಮ್ಮ ಪರ್ಸ್ ಅಥವಾ ತಿಜೋರಿಯಲ್ಲಿ ಇರಿಸಿ. ಹೀಗೆ ಮಾಡುವುದರಿಂದ ನಿಮ್ಮ  ತಿಜೋರಿ ಎಂದಿಗೂ ಖಾಲಿಯಾಗುವುದಿಲ್ಲ. 


ಇದನ್ನೂ ಓದಿ : ಅಕ್ಟೋಬರ್ ನಿಂದ ಮುಂದಿನ ಎರಡು ವರ್ಷಗಳವರೆಗೆ ಈ ರಾಶಿಯವರದ್ದೇ ಆಟ ! ಬಾಳಲ್ಲಿ ಉಕ್ಕಿ ಬರುವುದು ಧನ ಸಂಪತ್ತು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.