ಬೆಂಗಳೂರು : Sankranti 2023 : ಮಕರ ಸಂಕ್ರಾಂತಿಯ ದಿನದಂದು ಸೂರ್ಯದೇವನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಆದ್ದರಿಂದ ಈ ಸಂಕ್ರಾಂತಿಯನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ದಿನ ಸೂರ್ಯ ದೇವರ ಪೂಜೆಗೆ ವಿಶೇಷ ಮಹತ್ವವಿದೆ. ಮಕರ ಸಂಕ್ರಾಂತಿಯ ದಿನ ಕೆಲವು ವಾಸ್ತು ಸಲಹೆಗಳನ್ನು ಅಳವಡಿಸಿಕೊಂಡರೆ ವರ್ಷಪೂರ್ತಿ ಮನೆಯಲ್ಲಿ ಐಶ್ವರ್ಯ ನೆಲೆಯಾಗುತ್ತದೆಯಂತೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕರ ಸಂಕ್ರಾಂತಿಯ ದಿನದಂದು ಮಾಡುವ ಸ್ನಾನ, ದಾನ ಮತ್ತು ಪೂಜೆಗೆ ವಿಶೇಷ ಮಹತ್ವವಿದೆ. ಈ ಶುಭ ಸಮಯದಲ್ಲಿ ಮಾಡುವ ಕೆಲಸವು ಶುಭ ಫಲಿತಾಂಶಗಳನ್ನು ನೀಡುತ್ತದೆ. ಶಾಸ್ತ್ರಗಳ ಪ್ರಕಾರ, ಸೂರ್ಯ ದೇವನು ಶನಿದೇವನ ಮನೆಗೆ ಹೋದಾಗ, ಅವನು ತನ್ನೊಂದಿಗೆ ಕಪ್ಪು ಎಳ್ಳನ್ನು ತೆಗೆದುಕೊಂಡು ಹೋಗುತ್ತಾನೆಯಂತೆ. ಕಪ್ಪು ಎಳ್ಳು ಶನಿಗೆ ಪ್ರಿಯವಾದುದು. . ಈ ಕಾರಣದಿಂದ ಈ ದಿನದ ಕಪ್ಪು ಎಳ್ಳಿನ ಪೂಜೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. 


ಇದನ್ನೂ ಓದಿ : Adhika Maas 2023: ಹಲವು ವರ್ಷಗಳ ಬಳಿಕ ಈ ಬಾರಿ ಶ್ರಾವಣ ಮಾಸದಲ್ಲಿರಲಿವೆ 8 ಸೋಮವಾರಗಳು


ಮಕರ ಸಂಕ್ರಾಂತಿಯ ದಿನದಂದು ಈ ವಸ್ತುಗಳನ್ನು ಮನೆಗೆ ತನ್ನಿ :
ಮಕರ ಸಂಕ್ರಾಂತಿಯ ದಿನದಂದು ಮನೆಗೆ ಹಿತ್ತಾಳೆಯ ಸೂರ್ಯನನ್ನು ತರಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಯಾಗುತ್ತದೆಯಂತೆ. ಈ ದಿನ ಹಿತ್ತಾಳೆಯ ಸೂರ್ಯನನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇರಿಸುವುದರಿಂದ ವರ್ಷ ಪೂತ್ರಿ ಮನೆಯಲ್ಲಿ ಹಣದ ಕೊರತೆ ಎದುರಾಗುವುದೇ ಇಲ್ಲವಂತೆ. 


ಮಕರ ಸಂಕ್ರಾಂತಿಯ  ಪೂಜಾ ವಿಧಾನ ಹೀಗಿರಲಿ : 
ಮಕರ ಸಂಕ್ರಾಂತಿಯ ದಿನದಂದು ಭಗವಾನ್ ವಿಷ್ಣು ಮತ್ತು ಸೂರ್ಯ ದೇವರನ್ನು ಪೂಜಿಸುವುದರಿಂದ ಶುಭ ಫಲಿತಾಂಶ ಸಿಗಲಿದೆ. ಈ ಸಮಯದಲ್ಲಿ ಪೂಜೆ ಮಾಡುವುದರಿಂದ ಅರ್ಧಕ್ಕೆ ನಿಂತಿರುವ ವ್ಯಕ್ತಿಯ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಈ ದಿನ, ಸೂರ್ಯ ದೇವರಿಗೆ ತಾಮ್ರದ ಪಾತ್ರೆಯಲ್ಲಿ ಕೆಂಪು ಹೂವುಗಳು ಮತ್ತು ಅಕ್ಷತೆ ಅರ್ಪಿಸಬೇಕು. ಹಾಗೆಯೇ ಸೂರ್ಯದೇವನ ಮಂತ್ರವನ್ನು 108 ಬಾರಿ ಜಪಿಸಬೇಕು. ಇಷ್ಟು ಮಾತ್ರವಲ್ಲದೆ ಈ ದಿನ ಎಳ್ಳು, ಹೊದಿಕೆ ಮತ್ತು ಅನ್ನದಾನ ಮಾಡಿದರೆ ವಿಶೇಷ ಫಲ ಸಿಗುತ್ತದೆ. ವೃತ್ತಿಯಲ್ಲಿ ಯಶಸ್ಸು ಸಿಗಬೇಕಾದರೆ ಈ ದಿನದಂದು ನಿರ್ಗತಿಕರಿಗೆ  ಪೊಂಗಲ್ ದಾನ ಮಾಡಬೇಕು. 


ಇದನ್ನೂ ಓದಿ : Rahu Gochar 2023: ಮಂಗಳನ ರಾಶಿಯಲ್ಲಿ ರಾಹು ಗೋಚರ, ಈ ರಾಶಿಗಳ ಜನರ ಜೀವನದಲ್ಲಿ ಹಣದ ಸುರಿಮಳೆ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.