Sankranti 2023 : ಸಂಕ್ರಾಂತಿ ದಿನದಂದು ಈ ಸುಂದರ ರಂಗೋಲಿ ಡಿಸೈನ್ ಗಳನ್ನು ಟ್ರೈ ಮಾಡಿ

Sankranti 2023 : ಈ ಹಬ್ಬದ ದಿನ ಮನೆಯ ಮುಂದೆ ಸುಂದರ ರಂಗೋಲಿ ಬಿಡಿಸುವುದು ಕೂಡಾ ಪದ್ಧತಿ. ಈ ಬಾರಿ ಹಬ್ಬದ ದಿನ ಯಾವ ಡಿಸೈನ್ ರಂಗೋಲಿ ಹಾಕಬೇಕು ಎನ್ನುವ ತಯಾರಿಯಲ್ಲಿಯೂ ಮಹಿಳೆಯರು ತೊಡಗಿರುತ್ತಾರೆ. 

Written by - Ranjitha R K | Last Updated : Jan 12, 2023, 03:07 PM IST
  • ಸಂಕ್ರಾಂತಿ ಹಬ್ಬ ಸಮೃದ್ದಿಯ ಪ್ರತೀಕ
  • ಈ ಹಬ್ಬದ ದಿನ ಮನೆಯ ಮುಂದೆ ಸುಂದರ ರಂಗೋಲಿ ಬಿಡಿಸಲಾಗುವುದು
  • ಸುಂದರ ರಂಗೋಲಿ ಡಿಸೈನ್ ಗಳು ಇಲ್ಲಿವೆ.
 Sankranti 2023 : ಸಂಕ್ರಾಂತಿ ದಿನದಂದು ಈ ಸುಂದರ ರಂಗೋಲಿ  ಡಿಸೈನ್ ಗಳನ್ನು ಟ್ರೈ ಮಾಡಿ  title=

ಬೆಂಗಳೂರು : Sankranti 2023 : ಸಮೃದ್ದಿಯ ಪ್ರತೀಕವಾದ ಸಂಕ್ರಾಂತಿ ಹಬ್ಬವನ್ನು ಜನವರಿ 14 ರಂದು ಆಚರಿಸಲಾಗುತ್ತದೆ. ಹಬ್ಬಕ್ಕಾಗಿ ಎಲ್ಲೆಡೆ ಭರದ ಸಿದ್ದತೆ ನಡೆಯುತ್ತಿದೆ. ಈ ಹಬ್ಬದ ದಿನ ಮನೆಯ ಮುಂದೆ ಸುಂದರ ರಂಗೋಲಿ ಬಿಡಿಸುವುದು ಕೂಡಾ ಪದ್ಧತಿ. ಈ ಬಾರಿ ಹಬ್ಬದ ದಿನ ಯಾವ ಡಿಸೈನ್ ರಂಗೋಲಿ ಹಾಕಬೇಕು ಎನ್ನುವ ತಯಾರಿಯಲ್ಲಿಯೂ ಮಹಿಳೆಯರು ತೊಡಗಿರುತ್ತಾರೆ.  ಈ ಹಬ್ಬದ ದಿನ  ರಂಗು ರಂಗಿನ ಸುಂದರ ರಂಗೋಲಿಗಳು ರಸ್ತೆಯುದ್ದಕ್ಕೂ ಕಾಣ ಸಿಗುತ್ತವೆ. ಸಂಕ್ರಾಂತಿ  ದಿನ ನಿಮ್ಮ ಮನೆ ಮುಂದೆಯೂ ರಂಗೋಲಿ ಬಿಡಿಸಬೇಕು ಅಂದು ಕೊಂಡಿದ್ದರೆ ಸುಂದರ ರಂಗೋಲಿ ಡಿಸೈನ್ ಗಳು ಇಲ್ಲಿವೆ.  

ಸಂಕ್ರಾಂತಿ ದಿನ ಕೆಲವೆಡೆ ರಂಗೋಲಿ ಸ್ಪರ್ಧೆಗಳನ್ನು ಕೂಡಾ ನಡೆಸಲಾಗುತ್ತದೆ. ಮನೆ ಮುಂದೆ ಹಾಕುವ ರಂಗೋಲಿಗಳಷ್ಟೇ ಪ್ರಾಮುಖ್ಯತೆ ಹೊಲದ ಬದಿಗಳಲ್ಲಿ ಹಾಕುವ ರಂಗೋಲಿಗೂ ನೀಡಲಾಗುತ್ತದೆ. ಯಾಕೆಂದರೆ ಸಂಕ್ರಾಂತಿ ದಿನ ಹೊಸ ಪೈರನ್ನು ತೆಗೆಯಲಾಗುತ್ತದೆ. 

ಇದನ್ನೂ ಓದಿ : Adhika Maas 2023: ಹಲವು ವರ್ಷಗಳ ಬಳಿಕ ಈ ಬಾರಿ ಶ್ರಾವಣ ಮಾಸದಲ್ಲಿರಲಿವೆ 8 ಸೋಮವಾರಗಳು

ಮೊದಲೆಲ್ಲಾ ರಂಗೋಲಿ ಎಂದರೆ ಬರೀ ಚುಕ್ಕೆ ರಂಗೊಲಿಯಷ್ಟೇ ಇತ್ತು. ನಟರ ಅದಕ್ಕೆ ಬಣ್ಣಗಳ ಮೆರಗು ನೀಡಲಾಯಿತು. ಈಗ ವಿವಿಧ ರೀತಿಯಲ್ಲಿ ರಂಗೋಲಿ ಬಿಡಿಸಲಾಗುತ್ತದೆ. ಬಣ್ಣಗಳ ಬದಲಿಗೆ ಹೂವನ್ನು ಬಳಸಲಾಗುತ್ತದೆ. ಧಾನ್ಯಗಳನ್ನು ಬಳಸಲಾಗುತ್ತದೆ.  ಇನ್ನೂ ಸುಲಭ ಎನ್ನುವಂತೆ ಪ್ಲಾಸ್ಟಿಕ್ ಪ್ರಿಂಟ್ ರಂಗೋಲಿಗಳು ಕೂಡಾ ಮಾರುಕಟ್ಟೆಯಲ್ಲಿ ಲಭ್ಯವಿದೆ.  

 

ಸಂಕ್ರಾಂತಿ ಹಬ್ಬದ ದಿನ ಮಹಿಳೆಯರು ಮಕ್ಕಳು ತಮಗಿಷ್ಟ ಬಂದಂತೆ ಅಲಂಕಾರಗೊಂಡು ಖುಷಿ ಪಡುತ್ತಾರೆ. ಇನ್ನೊಂದೆಡೆ ರಂಗೋಲಿ ಹಾಕುವ ಮೂಲಕ ಹಬ್ಬದ ಕಳೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ.  ನಿಮ್ಮ ಮನೆಯ ಸೌಂದರ್ಯ ಕೂಡಾ ಹೆಚ್ಚಾಗಬೇಕಾದರೆ ನೀವು ಕೂಡಾ ಹಬ್ಬದ ದಿನ ಮನೆ ಬಾಗಿಲಿನಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ.  

 

ಇದನ್ನೂ ಓದಿ :  Astro Tips: ಅರಿಶಿನದ ಈ ಪರಿಹಾರಗಳಿಂದ ಪ್ರಗತಿಯ ಜೊತೆಗೆ ಹಣದ ಮಳೆಯಾಗಲಿದೆ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News