ಬುಧವಾರದ ಜ್ಯೋತಿಷ್ಯ ಸಲಹೆ: ಧಾರ್ಮಿಕ ಗ್ರಂಥಗಳಲ್ಲಿ ಪ್ರತಿದಿನದ ವಿಶೇಷ ಮಹತ್ವವನ್ನು ಹೇಳಲಾಗಿದೆ. ಬುಧವಾರದ ದಿನವನ್ನು ಮೊದಲ ಪೂಜ್ಯ ಗಣೇಶ ಮತ್ತು ತಾಯಿ ದುರ್ಗೆಗೆ ಸಮರ್ಪಿಸಲಾಗಿದೆ. ಬುಧವಾರದಂದು ಗಣಪತಿ ಮತ್ತು ತಾಯಿ ದುರ್ಗೆಯನ್ನು ಪೂಜಿಸುವುದರಿಂದ ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಅಲ್ಲದೆ, ವ್ಯಕ್ತಿಯು ವೃತ್ತಿಜೀವನದಲ್ಲಿ ಬಡ್ತಿಯನ್ನು ಪಡೆಯುತ್ತಾನೆ ಎಂಬ ನಂಬಿಕೆಯೂ ಇದೆ.


COMMERCIAL BREAK
SCROLL TO CONTINUE READING

ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಬುಧವಾರದಂದು ಈ 2 ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಇದರಿಂದ ಗಣೇಶನು ಪ್ರಸನ್ನನಾಗುತ್ತಾನೆ ಮತ್ತು ವ್ಯಕ್ತಿಯ ಜೀವನದಲ್ಲಿ ಎದುರಾಗಿರುವ ನಾನಾ ರೀತಿಯ ಕಷ್ಟಗಳಿಂದ ಮುಕ್ತಿ ದೊರೆಯಲಿದೆ ಎಂದು ಹೇಳಲಾಗುತ್ತದೆ.  ಅಲ್ಲದೆ, ಇದರಿಂದಾಗಿ ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹವು ಬಲಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿ ಬುಧವಾರದಂದು ಎರಡು ವಸ್ತುಗಳನ್ನು ದಾನ ಮಾಡುವುದು ತುಂಬಾ ಶುಭ ಎನ್ನಲಾಗುವುದು. ಆ ವಸ್ತುಗಳು ಯಾವುವು ಎಂದು ತಿಳಿಯೋಣ...


ಇದನ್ನೂ ಓದಿ- Vastu Tips for Home: ಮನೆಯಲ್ಲಿ ಮರೆತೂ ಸಹ ತಪ್ಪಾದ ದಿಕ್ಕಿನಲ್ಲಿ ಇವುಗಳನ್ನು ನಿರ್ಮಿಸಬೇಡಿ


ಬುಧವಾರದಂದು ಈ ಎರಡು ವಸ್ತುಗಳನ್ನು ದಾನ ಮಾಡುವುದು ಶುಭ:
ತೊಗರಿ ಬೇಳೆ: 

ಹಿಂದೂ ಧರ್ಮದಲ್ಲಿ, ಪ್ರತಿದಿನ ಕೆಲವು ನಿಯಮಗಳು ಮತ್ತು ಪೂಜಾ ವಿಧಾನಗಳನ್ನು ಹೇಳಲಾಗಿದೆ. ಆ ನಿಯಮಗಳನ್ನು ಅನುಸರಿಸುವ ಮೂಲಕ, ವ್ಯಕ್ತಿಯು ಆಯಾ ದೇವತೆಗಳ ಆಶೀರ್ವಾದವನ್ನು ಪಡೆಯಬಹುದು.  ಬುಧವಾರದಂದು ತೊಗರಿ ಬೇಳೆಯನ್ನು ದಾನ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ. ಬುಧವಾರದಂದು ಭಗವಾನ್ ಗಣೇಶನ ಆಶೀರ್ವಾದ ಪಡೆಯಲು, ಒಂದು ಹಿಡಿ ತೊದರೆ ಬೇಳೆ ತೆಗೆದುಕೊಳ್ಳಿ. ಇದನ್ನು ತುಪ್ಪ, ಅಕ್ಕಿ, ಬೆಲ್ಲ ಬೆರೆಸಿ ಹಸುವಿಗೆ ತಿನ್ನಿಸಿ. ಅದರ ನಂತರ, ಹಸುವಿಗೆ ಪ್ರದಕ್ಷಿಣೆ ಹಾಕಿ ಮತ್ತು ಅದರ ಪಾದಗಳನ್ನು ಸ್ಪರ್ಶಿಸಿ. ಇದರ ನಂತರ, ನಿಮ್ಮ ಮನಸ್ಸಿನ ಆಸೆಯನ್ನು ಹೇಳಿ. ಈ ಪರಿಹಾರವನ್ನು ಮಾಡುವುದರಿಂದ ದೇವತೆಗಳು ಪ್ರಸನ್ನರಾಗುತ್ತಾರೆ ಮತ್ತು ಭಕ್ತರ ಎಲ್ಲಾ ತೊಂದರೆಗಳು ನಿವಾರಣೆ ಆಗುತ್ತವೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Shani Krupe 2022: ಜುಲೈನಿಂದ ಈ 2 ರಾಶಿಯವರಿಗೆ ಶನಿ ವಕ್ರದೃಷ್ಟಿಯಿಂದ ಮುಕ್ತಿ


ತೃತೀಯ ಲಿಂಗಿಗಳಿಗೆ ಹಣ​ ದಾನ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ಬುಧವಾರದಂದು ತೃತೀಯ ಲಿಂಗಿಗಳಿಗೆ ಸ್ವಲ್ಪ ಹಣ ಮತ್ತು ಅಲಂಕಾರ ಸಾಮಗ್ರಿಗಳನ್ನು ಸಹ ದಾನ ಮಾಡಬಹುದು. ಆದರೆ ತೃತೀಯ ಲಿಂಗಿಗಳಿಗೆ ಹಣವನ್ನು ನೀಡಿದ ಬಳಿಕ ಅವರಿಂದ ಒಂದೆರಡು ರೂಪಾಯಿಯನ್ನು ಮತ್ತೆ ಪಡೆಯುವುದು ತುಂಬಾ ಶುಭ ಎಂದು ಹೇಳಲಾಗುತ್ತದೆ. ಇದರ ನಂತರ, ಅವರಿಂದ ತೆಗೆದುಕೊಂಡ ಹಣವನ್ನು ನಿಮ್ಮ ಪರ್ಸ್ ನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಜಾತಕದಲ್ಲಿ ಇರುವ ಬುಧ ಗ್ರಹ ಬಲಗೊಳ್ಳುತ್ತದೆ. ಇಷ್ಟೇ ಅಲ್ಲ, ವ್ಯಕ್ತಿಯು ಹಣ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯುತ್ತಾನೆ ಎಂಬ ನಂಬಿಕೆಯೂ ಇದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.