Salt Remedies: ಚಿಟಿಕೆ ಉಪ್ಪಿನಲ್ಲಿದೆ ಭಾಗ್ಯ ಬದಲಾಯಿಸುವ ಮಹಾ ತಾಕತ್ತು, ಈ ಉಪಾಯ ಒಮ್ಮೆ ಟ್ರೈ ಮಾಡಿ ನೋಡಿ

Salt Remedies: ಸಾಮಾನ್ಯವಾಗಿ ಉಪ್ಪಿಗಿಂತ ರುಚಿ ಬೇರೊಂದಿಲ್ಲ ಎಂದು ಹೇಳಲಾಗುತ್ತದೆ. ಹೇಗೆ ಅಡುಗೆಯ ರುಚಿ ಹೆಚ್ಚಿಸಲು ಉಪ್ಪನ್ನು ಬಳಸಲಾಗುತ್ತದೆಯೋ ಹಾಗೆಯೇ ಜೋತಿಷ್ಯ ಶಾಸ್ತ್ರದಲ್ಲಿ ಉಪ್ಪಿಗೆ ಸಂಬಂಧಿಸಿದ ಹಲವು ಉಪಾಯಗಳನ್ನು ಹೇಳಲಾಗಿದೆ. ಈ ಉಪಾಯಗಳನ್ನು ಅನುಸರಿಸಿದರೆ, ವ್ಯಕ್ತಿಯ ಭಾಗ್ಯ ಕ್ಷಣಾರ್ಧದಲ್ಲಿ ಬದಲಾಗುತ್ತದೆ ಹಾಗೂ ಜೀವನದ ಮೇಲೆ ಭಾರಿ ಪ್ರಭಾವ ಬೀರುತ್ತದೆ.   

Written by - Nitin Tabib | Last Updated : Jun 14, 2022, 09:15 PM IST
  • ಸಾಮಾನ್ಯವಾಗಿ ಉಪ್ಪಿಗಿಂತ ರುಚಿ ಬೇರೊಂದಿಲ್ಲ ಎಂದು ಹೇಳಲಾಗುತ್ತದೆ.
  • ಹೇಗೆ ಅಡುಗೆಯ ರುಚಿ ಹೆಚ್ಚಿಸಲು ಉಪ್ಪನ್ನು ಬಳಸಲಾಗುತ್ತದೆಯೋ ಹಾಗೆಯೇ
  • ಜೋತಿಷ್ಯ ಶಾಸ್ತ್ರದಲ್ಲಿ ಉಪ್ಪಿಗೆ ಸಂಬಂಧಿಸಿದ ಹಲವು ಉಪಾಯಗಳನ್ನು ಹೇಳಲಾಗಿದೆ
Salt Remedies: ಚಿಟಿಕೆ ಉಪ್ಪಿನಲ್ಲಿದೆ ಭಾಗ್ಯ ಬದಲಾಯಿಸುವ ಮಹಾ ತಾಕತ್ತು, ಈ ಉಪಾಯ ಒಮ್ಮೆ ಟ್ರೈ ಮಾಡಿ ನೋಡಿ title=
Salt Astro Remedies

Salt Vastu Upay: ಅಡುಗೆ ಮನೆಯಲ್ಲಿ ಬಳಸುವ ಉಪ್ಪು ಕೇವಲ ಆಹಾರದ ರುಚಿಯನ್ನು ಹೆಚ್ಚಿಸಲು ಮಾತ್ರವಲ್ಲ, ಅದೃಷ್ಟ ಬೆಳಗುವಲ್ಲಿಯೂ ಕೂಡ ತುಂಬಾ ಪರಿಣಾಮಕಾರಿಯಾಗಿದೆ. ಉಪ್ಪು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲ ಮನೆಯಲ್ಲಿ ಸುಖ, ಸಮೃದ್ಧಿ ಹೆಚ್ಚಾಗಲು ಕೂಡ ಉಪ್ಪನ್ನು ಬಳಸುತ್ತಾರೆ. ಯಾವುದೇ ಲೋಹದಲ್ಲಿ ಉಪ್ಪನ್ನು ಇಡಬೇಡಿ ಎಂದು ಸಲಹೆ ನೀಡಲಾಗುತ್ತದೆ. ಇದನ್ನು ಯಾವಾಗಲೂ ಗಾಜಿನ ಜಾರ್‌ನಲ್ಲಿ ಇಡುವುದು ಉತ್ತಮ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಹಾಗೂ ಹಣದ ಕೊರತೆ ಎದುರಾಗುವುದಿಲ್ಲ ಎನ್ನಲಾಗುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಉಪ್ಪಿನ ಉಪಯೋಗಗಳು
ಆರ್ಥಿಕ ಮುಗ್ಗಟ್ಟು ನಿವಾರಣೆಗೆ ಉಪ್ಪು

ಆರ್ಥಿಕ ಮುಗ್ಗಟ್ಟು ನಿವಾರಣೆಗೆ ಒಂದು ಗಾಜಿನ ಬಟ್ಟಲಲ್ಲಿ ಎರಡು ಚಮಚೆ ಉಪ್ಪನ್ನು ಮತ್ತು 4 ರಿಂದ 5 ಲವಂಗದ ಕುಡಿಗಳನ್ನು ಇರಿಸಿ ಅದನ್ನು ಮನೆಯ ಯಾವುದಾದರೊಂದು ಮೂಲೆಯಲ್ಲಿ ಇರಿಸಿ. ಆ ಜಾಗ ಯಾರ ಕಣ್ಣಿಗೂ ಬೀಳದಂತಿರಬೇಕು. ಈ ಉಪಾಯ ಅನುಸರಿಸುವುದರಿಂದ ಮನಯಲ್ಲಿ ನಿಂತುಹೋದ ಧನಾಗಮನ ಪುನಃ ಆರಂಭಗೊಳ್ಳಲಿದೆ ಮತ್ತು ವ್ಯಕ್ತಿಯ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. 

ಕೌಟುಂಬಿಕ ಸುಖ-ಶಾಂತಿಗಾಗಿ ಈ ಉಪಾಯ ಅನುಸರಿಸಿ
ಮನೆಯಲ್ಲಿ ದಿನನಿತ್ಯ ಹೆಚ್ಚಾಗುತ್ತಿರುವ ಕಲಹಗಳಿಂದ ಮುಕ್ತಿ ಪಡೆಯಲು ಮನೆಯ ನೆಲವನ್ನು ಸ್ವಚ್ಛಗೊಳಿಸುವ ನೀರಿನಲ್ಲಿ ಉಪ್ಪನ್ನು ಬೆರೆಸಿ ನೆಲವನ್ನು ಸ್ವಚ್ಛಗೊಳಿಸಿ. ವಾಸ್ತು ಶಾಸ್ತ್ರದ ಪ್ರಕಾರ, ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಉಂಟಾಗುತ್ತದೆ. ಹಾಗೆ ನೋಡಿದರೆ ಈ ಉಪಾಯವನ್ನು ನೀವು ನಿತ್ಯ ಕೂಡ ಮಾಡಬಹುದು. ಒಂದು ವೇಳೆ ನಿತ್ಯ ನಿಮ್ಮಿಂದ ಸಾಧ್ಯವಿಲ್ಲ ಎಂದಾದಲ್ಲಿ ಪ್ರತಿ ಮಂಗಳವಾರ ಈ ಉಪಾಯವನ್ನು ಮಾಡಿ.

ನಕರಾತ್ಮಕತೆಯ ನಿವಾರಣೆಗೆ
ಮನೆಯಲ್ಲಿರುವ ನಕಾರಾತ್ಮಕತೆಯನ್ನು ದೂರಗೊಳಿಸಲು ನೀವು ಉಪ್ಪನ್ನು ಬಳಸಬಹುದು. ಇದಕ್ಕಾಗಿ ಗಾಜಿನ ಒಂದು ಬಟ್ಟಲಲ್ಲಿ ಉಪ್ಪನ್ನು ಇಟ್ಟು ಅದನ್ನು ನೇವು ಮನೆಯ ಬಾತ್ ರೂಮ್ ನಲ್ಲಿರಿಸಬೇಕು. ಈ ರೀತಿ ಮಾಡುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿ ತೊಲಗುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಸಂಚಾರ ಉಂಟಾಗುತ್ತದೆ. 

ಇದನ್ನೂ ಓದಿ-ತಮ್ಮ ಗುಣದಂದಲೇ ಜನಪ್ರಿಯತೆ ಪಡೆಯುತ್ತಾರೆ ಈ ರಾಶಿಯವರು!

ಒತ್ತಡ ನಿವಾರಣೆಗೆ ಉತ್ತಮ
ಯಾವುದೇ ಒಂದು ವ್ಯಕ್ತಿ ಒತ್ತಡದಿಂದ ಬಳಲುತ್ತಿದ್ದಾರೆ. ಬೆಳಗ್ಗೆ ಸ್ನಾನ ಮಾಡುವಾಗಿ ಸ್ನಾನದ ನೀರಿನಲ್ಲಿ ಒಂದು ಚಿಟಿಕೆ ಉಪ್ಪನ್ನು ಬೆರೆಸಿ ಸ್ನಾನ ಮಾಡಬೇಕು. ಈ ರೀತಿ ಮಾಡುವುದರಿಂದ ವ್ಯಕ್ತಿಯ ಒತ್ತಡ ದೂರಾಗುತ್ತದೆ ಹಾಗೂ ವ್ಯಕ್ತಿಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಉಂಟಾಗುತ್ತದೆ.

ಇದನ್ನೂ ಓದಿ-Surya Gochar 2022: ನಾಳೆ ಭಾಗ್ಯ ಬೆಳಗಲು ಬರಲಿದ್ದಾನೆ ಗ್ರಹಗಳ ರಾಜ, 30 ದಿನಗಳವರೆಗೆ ಈ 4 ರಾಶಿಗಳ ಜನರಿಗೆ ಭಾರಿ ಯಶಸ್ಸು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News