Lord Shiva: ಶ್ರಾವಣ ಮಾಸದಲ್ಲಿ ಪ್ರತಿದಿನ ಶಿವನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳನ್ನು ಮಾಡುವ ಮೂಲಕ ಆರ್ಥಿಕ ಬಿಕ್ಕಟ್ಟು ಸೇರಿದಂತೆ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ನೀವೂ ಕೂಡ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತರಾಗಬೇಕೆಂದರೆ ಇಂದೇ ಈ ವಸ್ತುಗಳನ್ನು ದಾನ ಮಾಡಿ.


COMMERCIAL BREAK
SCROLL TO CONTINUE READING

ಬಿಳಿ ವಸ್ತ್ರಗಳ ದಾನ
ಸೋಮವಾರ ಬಿಳಿ ವಸ್ತುಗಳನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಶ್ರಾವಣಮಾಸದಲ್ಲಿ ಬಡವರಿಗೆ ಬಿಳಿ ಬಟ್ಟೆಯನ್ನು ದಾನ ಮಾಡಿ. ಇದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇದಲ್ಲದೆ ಶಿವನೊಂದಿಗೆ ಚಂದ್ರನ ಅನುಗ್ರಹವೂ ದೊರೆಯುತ್ತದೆ.


ಹಾಲು ದಾನ
ಹಾಲು ದಾನ ಮಾಡುವುದು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗಿದೆ. ಕಾರಣ ಶಿವನಿಗೆ ಹಾಲಿನ ಅಭಿಷೇಕ ಮಾಡಲಾಗುತ್ತದೆ.. ಹೀಗಾಗಿ ಪವಿತ್ರ ಹಾಲನ್ನು ಬಡವರಿಗೆ ದಾನ ಮಾಡಬೇಕು. ಹೀಗೆ ಮಾಡುವುದರಿಂದ ಜೀವನದಲ್ಲಿ ಸಂಪತ್ತು ಬರುತ್ತದೆ.


ಬೆಳ್ಳಿಯ ದಾನ
ಬೆಳ್ಳಿಯನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದಲ್ಲಿ ಬೆಳ್ಳಿಯನ್ನು ಚಂದ್ರನ ಲೋಹವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ, ಜಾತಕದಲ್ಲಿ ಚಂದ್ರನ ಸ್ಥಾನವು ಬಲಗೊಳ್ಳುತ್ತದೆ. ನಿಮ್ಮ ಕೈಲಾದಷ್ಟು ಬೆಳ್ಳಿ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು. 


ಇದನ್ನೂ ಓದಿ-"ನೆಪೋಲಿಯನ್" ಆಗಿ "ನಟ್ವರ್ ಲಾಲ್" ಆಗಮನ


ಅನ್ನ ದಾನ
ಯಾರಿಗಾದರೂ ಅನ್ನ ಅಥವಾ ಪಾಯಸವನ್ನು ನೀಡುವುದು ಕೂಡ ತುಂಬಾ ಮಂಗಳಕರ. ಇದನ್ನು ಮಾಡುವುದರಿಂದ ಯಶಸ್ಸಿನ ಅನ್ವೇಷಣೆಯಲ್ಲಿನ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.


ರುದ್ರಾಕ್ಷ ದಾನ
ರುದ್ರಾಕ್ಷಿಯನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಅಲ್ಲದೆ ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.


ಶಿವನ ದೇವಸ್ಥಾನದಲ್ಲಿ ಇವುಗಳನ್ನು ದಾನ ಮಾಡಿ
ಶಿವನ ಕೃಪೆಗೆ ಪಾತ್ರರಾಗಲು ಸೋಮವಾರದಂದು ಶಿವನ ದೇವಸ್ಥಾನದಲ್ಲಿ ಅಕ್ಕಿ, ಹಣ್ಣು, ಬಿಳಿ ಸಿಹಿತಿಂಡಿ ಅಥವಾ ಹಣವನ್ನು ದಾನ ಮಾಡುವವರಿಗೆ ಶಿವನು ಪ್ರಸನ್ನನಾಗುತ್ತಾನೆ.  


ಇದನ್ನೂ ಓದಿ-ಈ ಬಣ್ಣದ ಬೆಕ್ಕು ನಿಮ್ಮ ಮನೆಗೆ ಬಂದರೆ ಅದೃಷ್ಟ ಕೈಹಿಡಿಯುವ ಮುನ್ಸೂಚನೆ: ಅದರ ಪ್ರತಿಹೆಜ್ಜೆಯೂ ನಿಮಗೆ ಗೆಲುವಿನ ಸೋಪಾನವಾಗುತ್ತೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.