ಈ ಬಣ್ಣದ ಬೆಕ್ಕು ನಿಮ್ಮ ಮನೆಗೆ ಬಂದರೆ ಅದೃಷ್ಟ ಕೈಹಿಡಿಯುವ ಮುನ್ಸೂಚನೆ: ಅದರ ಪ್ರತಿಹೆಜ್ಜೆಯೂ ನಿಮಗೆ ಗೆಲುವಿನ ಸೋಪಾನವಾಗುತ್ತೆ

Lucky Animal: ವ್ಯಕ್ತಿಯು ಮುಂಜಾನೆ ಬೆಕ್ಕನ್ನು ನೋಡಿದರೆ, ಅದು ಮಂಗಳಕರ ಸಂಕೇತವಾಗಿ ಕಂಡುಬರುತ್ತದೆ. ನಿಮ್ಮ ಮನೆಗೆ ಅತಿಥಿ ಬರಲಿದ್ದಾರೆ ಅಥವಾ ನಿಮ್ಮ ಸ್ನೇಹಿತರೊಬ್ಬರನ್ನು ನೀವು ಭೇಟಿಯಾಗಬಹುದು ಎಂದು ಮುನ್ಸೂಚನೆ ನೀಡಿದಂತೆ.  

Written by - Bhavishya Shetty | Last Updated : Aug 31, 2024, 05:36 PM IST
    • ಅನೇಕ ಪ್ರಾಣಿಗಳನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ
    • ಕೆಲವು ಬಣ್ಣದ ಬೆಕ್ಕುಗಳು ಹಲವಾರು ರೀತಿಯ ಸಂಕೇತಗಳನ್ನು ನೀಡುತ್ತದೆ.
    • ಮನೆಗೆ ಅದೃಷ್ಟದ ಪ್ರಾಣಿ ಎಂದೇ ಬೆಕ್ಕನ್ನು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ
ಈ ಬಣ್ಣದ ಬೆಕ್ಕು ನಿಮ್ಮ ಮನೆಗೆ ಬಂದರೆ ಅದೃಷ್ಟ ಕೈಹಿಡಿಯುವ ಮುನ್ಸೂಚನೆ: ಅದರ ಪ್ರತಿಹೆಜ್ಜೆಯೂ ನಿಮಗೆ ಗೆಲುವಿನ ಸೋಪಾನವಾಗುತ್ತೆ title=
File Photo

Lucky Animal: ಅನೇಕ ಪ್ರಾಣಿಗಳನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇನ್ನು ಬೆಕ್ಕು ಕೂಡ ಅದೃಷ್ಟವನ್ನು ಸೂಚಿಸುತ್ತದೆ ಎಂದರೆ ನೀವು ನಂಬುತ್ತೀರಾ? ಹೌದು ಕೆಲವು ಬಣ್ಣದ ಬೆಕ್ಕುಗಳು ಹಲವಾರು ರೀತಿಯ ಸಂಕೇತಗಳನ್ನು ನೀಡುತ್ತದೆ.

ಮನೆಗೆ ಅದೃಷ್ಟದ ಪ್ರಾಣಿ ಎಂದೇ ಬೆಕ್ಕನ್ನು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಇದು ಒಬ್ಬ ವ್ಯಕ್ತಿಗೆ ಶುಭ ಅಥವಾ ಅಶುಭ ಚಿಹ್ನೆಗಳನ್ನು ನೀಡುತ್ತದೆ. ಅನೇಕ ಜನರು ತಮ್ಮ ಮನೆಯಲ್ಲಿ ಬೆಕ್ಕುಗಳನ್ನು ಸಾಕಲು ಇಷ್ಟಪಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿದಿನ ಬೆಕ್ಕಿಗೆ ಸಂಬಂಧಿಸಿದ ಕೆಲವು ಚಿಹ್ನೆಗಳನ್ನು ನೋಡಿದರೆ ಅದು ನಿಮಗೆ ಶುಭ ಅಥವಾ ಅಶುಭ ಸಂಕೇತವನ್ನು ಸೂಚಿಸಬಹುದು.

ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿ, ಸಚಿನ್ ಮಗನ ಜೊತೆ ಸುತ್ತಾಡಿದ್ದ ಆ ಆಟಗಾರ್ತಿಗೆ ಸಲಿಂಗ ವಿವಾಹ!

ವ್ಯಕ್ತಿಯು ಮುಂಜಾನೆ ಬೆಕ್ಕನ್ನು ನೋಡಿದರೆ, ಅದು ಮಂಗಳಕರ ಸಂಕೇತವಾಗಿ ಕಂಡುಬರುತ್ತದೆ. ನಿಮ್ಮ ಮನೆಗೆ ಅತಿಥಿ ಬರಲಿದ್ದಾರೆ ಅಥವಾ ನಿಮ್ಮ ಸ್ನೇಹಿತರೊಬ್ಬರನ್ನು ನೀವು ಭೇಟಿಯಾಗಬಹುದು ಎಂದು ಮುನ್ಸೂಚನೆ ನೀಡಿದಂತೆ.

ಜ್ಯೋತಿಷ್ಯದ ದೃಷ್ಟಿಕೋನದಿಂದ, ಬೆಕ್ಕಿನ ಅಳು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಶುಭ ಕಾರ್ಯಗಳನ್ನು ಮಾಡಲು ಹೊರಟಾಗ ಬೆಕ್ಕಿನ ಕೂಗು ಕೇಳಿದರೆ, ನಿಮ್ಮ ಕೆಲಸದಲ್ಲಿ ಸ್ವಲ್ಪ ತೊಂದರೆ ಉಂಟಾಗಬಹುದು ಎಂದರ್ಥ. ಅದೇ ಸಮಯದಲ್ಲಿ, ಬೆಕ್ಕುಗಳು ಜಗಳವಾಡುವುದನ್ನು ನೋಡಿದರೆ, ಕುಟುಂಬದಲ್ಲಿ  ಅಪಶ್ರುತಿಯ ಪರಿಸ್ಥಿತಿ ಇರಬಹುದು ಎಂದರ್ಥ.

ಇನ್ನು ಬೆಕ್ಕು ಮರಿಗಳಿಗೆ ಜನ್ಮ ನೀಡಿದರೆ, ಅದು ತುಂಬಾ ಮಂಗಳಕರ ಸಂಕೇತವಾಗಿದೆ. ಇದರರ್ಥ ಶೀಘ್ರದಲ್ಲೇ ನಿಮ್ಮ ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಗಳಿವೆ.

ಬಿಳಿ ಬೆಕ್ಕು ಮನೆಗೆ ಬಂದರೆ, ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನಿಮ್ಮ ಮನೆಯಿಂದ ನಕಾರಾತ್ಮಕ ಶಕ್ತಿಯು ಹೊರಹಾಕಲ್ಪಡುತ್ತದೆ ಮತ್ತು ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಲಿದ್ದೀರಿ ಎಂದು ಹೇಳಲಾಗುತ್ತದೆ. ಇನ್ನು ಕಪ್ಪು ಬೆಕ್ಕು ಮನೆಗೆ ಬಂದರೆ ನಕಾರಾತ್ಮಕತೆಯು ನಿಮ್ಮ ಮನೆಗೆ ಪ್ರವೇಶಿಸಬಹುದು ಎಂದರ್ಥ.

ಇದನ್ನೂ ಓದಿ: ಎಷ್ಟೇ ಹೈ ಇದ್ದರೂ... ಈ ಎಲೆಯನ್ನು ಮೂಸಿದ ತಕ್ಷಣ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್‌ ಶುಗರ್‌! ಮಧುಮೇಹಿಗಳೇ ಟ್ರೈ ಮಾಡಿ ನೋಡಿ

ಸೂಚನೆ: 'ಈ ಲೇಖನದಲ್ಲಿ ಒಳಗೊಂಡಿರುವ ಯಾವುದೇ ಮಾಹಿತಿ/ವಿಷಯ/ಲೆಕ್ಕಾಚಾರಗಳ ನಿಖರತೆ ಅಥವಾ ವಿಶ್ವಾಸಾರ್ಹತೆ ಖಾತರಿಯಿಲ್ಲ. ಈ ಮಾಹಿತಿಯನ್ನು ವಿವಿಧ ಮಾಧ್ಯಮಗಳು/ಜ್ಯೋತಿಷಿಗಳು/ ಪಂಚಾಂಗ/ಉಪದೇಶಗಳು/ನಂಬಿಕೆಗಳು/ಧಾರ್ಮಿಕ ಗ್ರಂಥಗಳಿಂದ ಸಂಗ್ರಹಿಸಿ ನಿಮ್ಮ ಮುಂದಿಡಲಾಗಿದೆ. ನಮ್ಮ ಗುರಿ ಕೇವಲ ಮಾಹಿತಿಯನ್ನು ಒದಗಿಸುವುದು, ಜೀ ಕನ್ನಡ ನ್ಯೂಸ್‌ ಇದನ್ನು ಖಾತರಿಪಡಿಸುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News