Relationship Tips After Marriage: ಸ್ನೇಹ ಸಂಬಂಧ ಬಹಳ ವಿಶೇಷವಾಗಿರುತ್ತದೆ. ಕೆಲವೊಮ್ಮೆ ಅದು  ಪ್ರೇಮ ಸಂಬಂಧಕ್ಕಿಂತಲೂ ಮಿಗಿಲಾಗಿರುತ್ತದೆ. ಐರ್ಲೆಂಡ್‌ನ ಖ್ಯಾತ ಕವಿ ಆಸ್ಕರ್ ವೈಲ್ಡ್ ಹೇಳುವ ಪ್ರಕಾರ, ಸ್ನೇಹ ಎನ್ನುವುದು ಪ್ರೀತಿ ಪ್ರೇಮಕ್ಕಿಂತ  ಟ್ರ್ಯಾಜಿಕ್ ಆಗಿರುತ್ತದೆಯಂತೆ. ಸ್ನೇಹ ಎಷ್ಟೇ ಗಾಢವಾಗಿದ್ದರೂ ಮದುವೆಯ ನಂತರ ಸ್ನೇಹದ ಬಗೆಗಿನ ಧೋರಣೆ ಸ್ವಲ್ಪ ಮಟ್ಟಿಗೆ ಬದಲಾಗುತ್ತದೆ. ವೈವಾಹಿಕ ಜೀವನದಲ್ಲಿ ಮಗ್ನರಾಗಿರುವ ಕಾರಣ, ಸ್ನೇಹಕ್ಕೆ ಮೊದಲಿನ ಪ್ರಾಮುಖ್ಯತೆ ನೀಡುವುದು ಸಾಧ್ಯವಾಗುವುದಿಲ್ಲ. ಆದರೆ ಕೆಲವರು ಕೆಲವೊಮ್ಮೆ ವೈಯಕ್ತಿಕ ವಿಷಯಗಳನ್ನು ಸ್ನೇಹಿತನೊಂದಿಗೆ ಹಂಚಿಕೊಳ್ಳುತ್ತಾರೆ.  ಆದರೆ ಮದುವೆಯ ನಂತರ ಕೆಲವೊಂದು ವಿಷಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲೇಬಾರದಂತೆ. 


COMMERCIAL BREAK
SCROLL TO CONTINUE READING

ಮದುವೆಯ ನಂತರ ಈ ವಿಷಯಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ :
1. ವೈಯಕ್ತಿಕ ಫೋಟೋಗಳು, ವೀಡಿಯೊಗಳು ಮತ್ತು ಚಾಟ್‌ಗಳು :
ಮದುವೆಯ ನಂತರ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಜೀವನವನ್ನು ರಹಸ್ಯವಾಗಿಡಬೇಕು. ಕುಟುಂಬದಲ್ಲಿ ತುಂಬಾ ಖಾಸಗಿಯಾಗಿರುವ ಎಲ್ಲವನ್ನೂ ಸ್ನೇಹಿತರೊಂದಿಗೆ ಹಂಚಿಕೊಳ್ಳಬಾರದು. ಸ್ನೇಹ - ಸ್ನೇಹಿತರು ಎಷ್ಟೇ ವಿಶೇಷವಾಗಿದ್ದರೂ, ಪ್ರತಿಯೊಂದು ಸಂಬಂಧಕ್ಕೂ ತನ್ನದೇ ಆದ ಮಿತಿಗಳಿರುತ್ತವೆ. ಆ ಇತಿ ಮಿತಿಯನ್ನು ತಿಳಿದುಕೊಂಡು   ಸ್ನೇಹಿತರೊಂದಿಗೆ ನಿಮ್ಮ ವಿಚಾರಗಳನ್ನು ಹಂಚಿಕೊಳ್ಳಬೇಕು. ಸಂಗಾತಿಯೊಂದಿಗಿನ ವೈಯಕ್ತಿಕ ಫೋಟೋಗಳು, ವೀಡಿಯೊಗಳು, ಚಾಟ್‌ಗಳು ಅಥವಾ ಸಂದೇಶಗಳನ್ನು ಎಂದಿಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ. ವೈವಾಹಿಕ ಜೀವನದ ಕೆಲವೊಂದು ಅಂಶಗಳು ಖಾಸಗಿಯಾಗಿ ಉಳಿಯದಿದ್ದರೆ, ಆ ಸಂಬಂಧದ ಮಹತ್ವವು ಕೊನೆಗೊಳ್ಳುತ್ತದೆ.


ಇದನ್ನೂ ಓದಿ :Weekly Horoscope: ಈ ವಾರ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಸಿಗುತ್ತೆ ಕೈ ತುಂಬಾ ಹಣ!


2.ಅತ್ತೆ ಮನೆಯ ವಿಚಾರ : 
ಹುಡುಗನಾಗಿರಲಿ ಅಥವಾ ಹುಡುಗಿಯಾಗಿರಲಿ, ಮದುವೆಯ ನಂತರ  ತನ್ನ ಅತ್ತೆಯ ಮಾತು, ನಡತೆ ಅಥವಾ ನಡವಳಿಕೆಯನ್ನು ಅಷ್ಟಾಗಿ ಇಷ್ಟಪಡುವುದಿಲ್ಲ. ಇದು ಬಹುತೇಕ ಮನೆಗಳಲ್ಲಿ ನಡೆಯುವ ಘಟನೆ. ಆದರೆ ಈ ಬಗ್ಗೆ ಸ್ನೇಹಿತರೊಂದಿಗೆ ಗಾಸಿಪ್ ಗೆ ಇಳಿಯುವ ಅಗತ್ಯವಿಲ್ಲ. ಸ್ನೇಹಿತರೊಂದಿಗೆ ನಿಮ್ಮ ಸಂಗಾತಿಯ ಕುಟುಂಬದ ಬಗೆಗಿನ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳುವುದು ಸರಿಯಲ್ಲ. ಅತ್ತೆ, ಅತ್ತೆ ಮನೆ ವಿಚಾರ ಮತ್ತು ನಿಮ್ಮ ಅಭಿಪ್ರಾಯಗಳು ಹೊಂದಿಕೆಯಾಗದಿದ್ದರೂ,  ಆ ಬಗ್ಗೆ ನಿಮ್ಮ ಸ್ನೇಹಿತರೊಂದಿಗೆ ಕೆಟ್ಟದಾಗಿ ಮಾತನಾಡಲು ಹೋಗಬೇಡಿ. ಕೆಲವರು ತಮ್ಮ ಮನಸ್ಸನ್ನು ಹಗುರಗೊಳಿಸಲು ಈ ರೀತಿ ಮಾತನಾಡುತ್ತಾರೆ. ಆದರೆ ನೆನಪಿರಲಿ ನಿಮ್ಮ ಜೀವನ ಸಂಗಾತಿಯ ಕುಟುಂಬವನ್ನು ನೀವು ಗೌರವಿಸದಿದ್ದರೆ, ಜೀವನ ಸಂಗಾತಿ ಅದನ್ನು ಅವಮಾನವೆಂದು ಪರಿಗಣಿಸುತ್ತಾರೆ. ಇದು ಸಂಬಂಧದಲ್ಲಿ ಬಿರುಕು ಉಂಟಾಗಲು ಕಾರಣವಾಗುತ್ತದೆ.


3. ಜೀವನ ಸಂಗಾತಿಯ  ಜೀವನದ ಹಿಂದಿನ ಸತ್ಯಗಳು :
ಮದುವೆಯ ನಂತರ, ನಿಮ್ಮ ಜೀವನ ಸಂಗಾತಿಯು ನಿಮ್ಮನ್ನು ತನ್ನವರೆಂದು ಪರಿಗಣಿಸಿ ತನ್ನ ಜೀವನದ ಹಿಂದಿನ ರಹಸ್ಯಗಳನ್ನು ಹಂಚಿಕೊಳ್ಳಬಹುದು. ನಿಮ್ಮ ಮೇಲಿನ ನಂಬಿಕೆಯಿಂದ ಅವರು ನಿಮ್ಮಲ್ಲಿ ಅವರ ಜೀವನದಲ್ಲಿ ನಡೆದು ಹೋದ ಘಟನೆಗಳನ್ನು ಹಂಚಿಕೊಳ್ಳುತ್ತಾರೆ. ಆ ನಂಬಿಕೆಯನ್ನು ಯಾವತ್ತೂ ಮುರಿಯಬೇಡಿ.  ನಿಮ್ಮ ಹೆಂಡತಿ ಅಥವಾ ಗಂಡನ ಹಿಂದಿನ ಜೀವನದಲ್ಲಿ ಏನು ನಡೆದಿತ್ತು ಎನ್ನುವುದನ್ನು ಸ್ನೇಹಿತರೊಂದಿಗೆ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಒಂದು ವೇಳೆ ನೀವು ಹಾಗೆ ಮಾಡಿದರೆ ಅದು ನಿಮ್ಮ ಜೀವನದಲ್ಲಿ ನೀವು ಮಾಡುವ ಬಹಳ ದೊಡ್ಡ ತಪ್ಪು. ಏಕೆಂದರೆ ನಿಮ್ಮ ಈ ನಡೆಯಿಂದ ನಿಮ್ಮ ಜೀವನ ಸಂಗಾತಿ ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯ ಗೋಪುರ ಒಣದೆ ಕ್ಷಣಕ್ಕೆ ಕುಸಿದು ಬೀಳಬಹುದು. ಇದು ದಾಂಪತ್ಯ ಮುರಿಯುವ ಹಂತಕ್ಕೂ ಕೊಂಡೊಯ್ಯಬಹುದು. 
  
ಇದನ್ನೂ ಓದಿ :   ಶನಿ ಜಯಂತಿ ದಿನದಿಂದ ಈ ರಾಶಿಯವರ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿದೇವ ! ಪ್ರಾಪ್ತಿಯಾಗುವುದು ಧನ ಸಂಪತ್ತು


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.