ತುಳಸಿ ಉಪಾಯ: ನಮ್ಮಲ್ಲಿ ಹಲವರು ಜೀವನದುದ್ದಕ್ಕೂ ಕಷ್ಟಪಟ್ಟು ದುಡಿದರೂ ವರು ಬಯಸಿದ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ಅವರಿಗೆ ಸಾಧ್ಯವಾಗುವುದಿಲ್ಲ.  ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿಯ ಮುನಿಸೇ ಇದಕ್ಕೆ ಮುಖ್ಯ ಕಾರಣವಾಗಿರಬಹುದು. ಆದರೆ, ಒಣ ತುಳಸಿ ಎಲೆಗಳ ಮೂಲಕ ಮಾಡುವ ಕೆಲವು ಸರಳ ಪರಿಹಾರಗಳು ನಿಮ್ಮ ಈ ಸಮಸ್ಯೆಗೆ ಪರಿಹಾರ ನೀಡಬಲ್ಲವು ಎಂದು ನಿಮಗೆ ತಿಳಿದಿದೆಯೇ?  ಒಣ ತುಳಸಿ ಎಲೆಗಳ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಜೀವನದಲ್ಲಿ ತಾಯಿ ಲಕ್ಷ್ಮಿ ಆಶೀರ್ವಾದದ ಜೊತೆಗೆ ಸುಖ-ಸಂತೋಷವನ್ನು ಪಡೆಯಬಹುದು. ಅಂತಹ ಪರಿಹಾರಗಳು ಯಾವುವು ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ತುಳಸಿಯ ಒಣ ಎಲೆಗಳಿಂದ ಈ ಪರಿಹಾರವನ್ನು ಮಾಡಿ:
ಭಾರತೀಯ ಸಂಸ್ಕೃತಿಯಲ್ಲಿ ಲಕ್ಷ್ಮಿ ದೇವಿಯು ತುಳಸಿ ಗಿಡದಲ್ಲಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಆದ್ದರಿಂದ ತುಳಸಿ ಗಿಡವನ್ನು ನಿತ್ಯವೂ ಪೂಜಿಸುವುದು, ಮಗುವಿನಂತೆ ಆರೈಕೆ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ತುಳಸಿಯ ಹಸಿರು ಎಲೆಗಳ ಜೊತೆಗೆ, ಅದರ ಒಣ ಎಲೆಗಳನ್ನು ಸಹ ಸನಾತನ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ತುಳಸಿಯ ಒಣ ಎಲೆಗಳಿಗೆ ಸಂಬಂಧಿಸಿದ ಕೆಲವು ವಿಶೇಷ ಕ್ರಮಗಳನ್ನು ಮಾಡುವ ಮೂಲಕ ತಾಯಿ ಲಕ್ಷ್ಮಿಯು ಸಂತುಷ್ಟಳಾಗುತ್ತಾಳೆ ಮತ್ತು ತನ್ನ ಭಕ್ತರಿಗೆ ಬಯಸಿದ ವರವನ್ನು ನೀಡುತ್ತಾಳೆ ಎಂಬ ನಂಬಿಕೆ ಇದೆ.


ಶಾಸ್ತ್ರಗಳ ಪ್ರಕಾರ, ನಿಮ್ಮ ಯಾವುದೇ ಕೆಲಸದಲ್ಲಿ ಪದೇ ಪದೇ ಅಡೆತಡೆಗಳು ಎದುರಾಗುತ್ತಿದ್ದರೆ, ಮನೆಯಲ್ಲಿ ಎಷ್ಟೇ ಸಂಪಾದಿಸಿದರೂ ಆರ್ಥಿಕ ಸಂಕಷ್ಟಗಳು ಕೊನೆಗೊಳ್ಳದಿದ್ದರೆ, ನೀವು ಒಣ ತುಳಸಿ ಎಲೆಗಳ ಪರಿಹಾರವನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ ನೀವು ತುಳಸಿಯ ಒಣ ಎಲೆಗಳನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಬೇಕು ಮತ್ತು ಕಪಾಟಿನಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿಯ ಆಶೀರ್ವಾದವು ಯಾವಾಗಲೂ ನಿಮ್ಮ ಕುಟುಂಬದ ಮೇಲೆ ಇರುತ್ತದೆ ಮತ್ತು ಆ ಅಂತಹ ಕುಟುಂಬದಲ್ಲಿ ಸಾಕಷ್ಟು ಏಳ್ಗೆ ಆಗಲಿದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Betel Leaves Remedies: ಹಣಕಾಸಿನ ಬಿಕ್ಕಟ್ಟಿನಿಂದ ತೊಂದರೆಗೀಡಾಗಿದ್ದೀರಾ? ವೀಳ್ಯದೆಲೆಯ ಈ ಪರಿಹಾರಗಳನ್ನು ಮಾಡಿ


ಒಣ ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಿ:
ನಿಮಗೆ ನೀವು ಮಾಡುವ ಕೆಲಸದಲ್ಲಿ ಏಕಾಗ್ರತೆಯ ಕೊರತೆ, ಮನೆಯಲ್ಲಿ ಯಾವಾಗಲೂ ನಕಾರಾತ್ಮಕತೆಯ ವಾತಾವರಣ ಇದ್ದರೆ ನೀವು ಒಣ ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಬೇಕು. ತುಳಸಿಯ ಒಣ ಎಲೆಗಳಿಗೆ ಕೆಲವು ಅದ್ಭುತವಾದ ಶಕ್ತಿಯಿದೆ ಎಂದು ಹೇಳಲಾಗುತ್ತದೆ, ಇದರಿಂದ ಮನಸ್ಸು ಶುದ್ಧವಾಗುತ್ತದೆ ಮತ್ತು ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಇದು ನಿಮ್ಮ ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸುತ್ತದೆ. 


ಈ ಪರಿಹಾರಕ್ಕಾಗಿ  ಗಂಗಾಜಲದಲ್ಲಿ ಒಣ ತುಳಸಿ ಎಲೆಗಳನ್ನು ಹಾಕಿ ಮನೆಯಲ್ಲಿ ಚಿಮುಕಿಸಿ: 
ಯಾವುದೇ ಕಾರಣಗಳಿಂದ ನಿಮ್ಮ ಕುಟುಂಬದಲ್ಲಿ ಏಕತೆ ಇಲ್ಲದಿದ್ದರೆ. ಈ ವಿಚಾರವಾಗಿ ಕುಟುಂಬಸ್ಥರು ಪರಸ್ಪರ ಜಗಳವಾಡುತ್ತಲೇ ಇರುತ್ತಾರೆ. ಸದಾ ವೈಮನಸ್ಸು, ಕೋಪದ ವಾತಾವರಣವಿದ್ದರೆ ಗಂಗಾಜಲದಲ್ಲಿ ಒಣ ತುಳಸಿ ಎಲೆಗಳನ್ನು ಹಾಕಿ ಮನೆಯಲ್ಲಿ ಚಿಮುಕಿಸಬೇಕು. ಈ ನೀರಿನ ಕೆಲವು ಹನಿಗಳನ್ನು ನಿಯಮಿತವಾಗಿ ಮನೆಯ ಸದಸ್ಯರ ಮೇಲೆ ಸುರಿಯಬೇಕು. ಈ ನೀರಿಗೆ ಎಂಥ ಶಕ್ತಿಯಿದೆ ಎಂದರೆ ಅದು ಅಪಶ್ರುತಿ ಮತ್ತು ಕೋಪವನ್ನು ಹೋಗಲಾಡಿಸುತ್ತದೆ. ಇದು ನಿಮ್ಮ ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ. 


ಇದನ್ನೂ ಓದಿ- Mangal Gochar: ಜೂನ್ 27 ರಿಂದ ಈ ರಾಶಿಯವರಿಗೆ ಕರುಣೆ ತೋರಲಿದ್ದಾನೆ ಮಂಗಳ


ಜೀವನದಲ್ಲಿ ಪ್ರಗತಿ ಸಾಧಿಸಲು ಈ ಕ್ರಮಗಳನ್ನು ಅನುಸರಿಸಿ:
ಧರ್ಮಗ್ರಂಥಗಳ ಪ್ರಕಾರ, ತುಳಸಿಯ ಒಣ ಎಲೆಗಳು ವಿಷ್ಣುವಿನ ಮಾನವ ರೂಪವಾದ ಶ್ರೀಕೃಷ್ಣನಿಗೆ ಬಹಳ ಪ್ರಿಯವೆಂದು ಪರಿಗಣಿಸಲಾಗಿದೆ. ಜೀವನದಲ್ಲಿ ಪ್ರಗತಿಗಾಗಿ ನೀವು ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಬಯಸಿದರೆ, ಭಗವಾನ್ ಕೃಷ್ಣನಿಗೆ ಭೋಗವನ್ನು ಅರ್ಪಿಸುವಾಗ, ಅದರಲ್ಲಿ ಒಣಗಿದ ತುಳಸಿ ಎಲೆಯನ್ನು ಸೇರಿಸಿ. ಇದನ್ನು ಕನಿಷ್ಠ 15 ದಿನಗಳವರೆಗೆ ಮಾಡಬೇಕು. ಈ ಪರಿಹಾರವನ್ನು ಮಾಡುವುದರಿಂದ ಭಗವಾನ್ ವಿಷ್ಣುವು ಪ್ರಸನ್ನನಾಗುತ್ತಾನೆ ಮತ್ತು ನಿಮ್ಮ ಎಲ್ಲಾ ಕಾಯಿಲೆಗಳನ್ನು ದೂರಮಾಡುತ್ತಾನೆ ಎಂದು ನಂಬಲಾಗಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.