ಈ ರೀತಿ ತುಳಸಿ ಒಣಗದಂತೆ ಕಾಪಾಡಿ, ಲಕ್ಷ್ಮೀ ನಾರಾಯಣ ಕೃಪೆಗೆ ಪಾತ್ರರಾಗಿ

 ತುಳಸಿ ಗಿಡಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಮನೆಯಲ್ಲಿನ  ತುಳಸಿ ಒಣಗುತ್ತಿದ್ದರೆ, ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಬಿಸಿಲು ಮತ್ತು ಶಾಖದಲ್ಲಿ ಒಣಗದಂತೆ  ತುಳಸಿ ಗಿಡವನ್ನು ರಕ್ಷಿಸಲು ಕೆಲವು ಪ್ರಮುಖ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿರುತ್ತದೆ. 

Written by - Ranjitha R K | Last Updated : Jun 15, 2022, 02:57 PM IST
  • ತುಳಸಿ ಗಿಡದಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ.
  • ಕೆಲವೊಮ್ಮೆ ಮನೆಯಲ್ಲಿ ನೆಟ್ಟ ತುಳಸಿ ಒಣಗುತ್ತದೆ.
  • ತುಳಸಿ ಗಿಡ ಹಸಿರಾಗಿದ್ದರೆ ಮನೆ ಮಂದಿಯ ಮೇಲಿರುತ್ತದೆ ಲಕ್ಷ್ಮೀ ಕೃಪೆ
ಈ ರೀತಿ ತುಳಸಿ ಒಣಗದಂತೆ ಕಾಪಾಡಿ, ಲಕ್ಷ್ಮೀ ನಾರಾಯಣ ಕೃಪೆಗೆ ಪಾತ್ರರಾಗಿ   title=
tulsi care tips (file photo)

ಬೆಂಗಳೂರು : ತುಳಸಿ ಗಿಡದಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ. ಈ ಕಾರಣದಿಂದಲೇ ತುಳಸಿ ಗಿಡವನ್ನು ನಿಯಮಿತವಾಗಿ ಪೂಜಿಸುವುದರಿಂದ ಲಕ್ಷ್ಮೀ ಕೃಪೆಯು ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕೆಲವೊಮ್ಮೆ ಮನೆಯಲ್ಲಿ ನೆಟ್ಟ ತುಳಸಿ ಒಣಗುತ್ತದೆ. ಮನೆಯಲ್ಲಿನ ತುಳಸಿ ಒಣಗುವುದು ಅಶುಭ ಎಂದೇ ಹೇಳಲಾಗುತ್ತದೆ. ಮನೆಯಲ್ಲಿನ ತುಳಸಿ ಒಣಗುತ್ತಿದ್ದರೆ ಲಕ್ಷ್ಮೀ ಮುನಿಸಿಕೊಂಡಿದ್ದಾಳೆ ಎಂದೇ ಹೇಳಲಾಗುತ್ತದೆ.  ತುಳಸಿ ಗಿಡ ಸದಾ ಹಸಿರಾಗಿದ್ದರೆ ಮನೆ ಮಂದಿಯ ಮೇಲೆ ಲಕ್ಷ್ಮೀ ಕೃಪೆ ಕೂಡಾ ಹಾಗೆಯೇ ಉಳಿಯುತ್ತದೆ. 

ಸೂರ್ಯನ ಪ್ರಖರದಿಂದ ರಕ್ಷಿಸಲು: ತುಳಸಿ ಸಸ್ಯವು ಸೂರ್ಯನ ಪ್ರಖರ ಕಿರಣ ಮತ್ತು ಶಾಖದ ಪರಿಣಾಮವಾಗಿ ಒಣಗುತ್ತದೆ. ಬೇಸಿಗೆಯಲ್ಲಿ ಸಸ್ಯವನ್ನು ಸೂರ್ಯನ ಶಾಖದಿಂದ ಸುರಕ್ಷಿತವಾಗಿರಿಸಲು ಸಸ್ಯಕ್ಕೆ ಕೆಂಪು ಬಣ್ಣದ ಶಾಲು ಹೊದಿಸಿ. ಇದರಿಂದ  ಸೂರ್ಯನ ಕಿರಣ ನೇರವಾಗಿ ತುಳಸಿ ಗಿಡದ ಮೇಲೆ ಬೀಳುವುದಿಲ್ಲ. 

 ಇದನ್ನೂ ಓದಿ  : ಮೂರು ದಿನಗಳ ನಂತರ ರೂಪುಗೊಳ್ಳಲಿದೆ ಲಕ್ಷ್ಮೀ ನಾರಾಯಣ ಯೋಗ, ಈ ಎರಡು ರಾಶಿಯವರಿಗೆ ತೆರೆಯಲಿದೆ ಭಾಗ್ಯದ ಬಾಗಿಲು
 
ತುಳಸಿಗೆ ಸ್ವಲ್ಪ ಹಸಿ ಹಾಲು ಅರ್ಪಿಸಿ :
ತುಳಸಿ ಗಿಡ ಬಿಸಿಲಿನಲ್ಲಿ ಒಣಗದಂತೆ ನೋಡಿಕೊಳ್ಳಲು ಅದರಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವುದು ಅವಶ್ಯಕ. ಇಂತಹ ಪರಿಸ್ಥಿತಿಯಲ್ಲಿ ತುಳಸಿ ಗಿಡಕ್ಕೆ ನೀರು ಹಾಕುವಾಗ ಸ್ವಲ್ಪ ಹಸಿ ಹಾಲನ್ನೂ ಸೇರಿಸಿ. ಹೀಗೆ ಮಾಡುವುದರಿಂದ ಗಿಡದಲ್ಲಿ ತೇವಾಂಶ ದೀರ್ಘಕಾಲ ಉಳಿಯುತ್ತದೆ. ಇದಲ್ಲದೇ ತುಳಸಿ ಗಿಡವನ್ನು ನೆಡುವಾಗ ಕುಂಡದ ಬುಡದಲ್ಲಿ ತೆಂಗಿನ ನಾರನ್ನು ಹಾಕಿ ಅದರ ಮೇಲೆ ಮಣ್ಣು ಹಾಕಿ ಗಿಡ ನೆಡಬೇಕು. ಇದರಿಂದ ತುಳಸಿ ಗಿಡದಲ್ಲಿ ತೇವಾಂಶ ಉಳಿಯುತ್ತದೆ. 

ದೇವರಿಗೆ ತುಳಸಿ ಮಂಜರಿಯನ್ನು ಅರ್ಪಿಸಿ : ತುಳಸಿಯು ವಿಷ್ಣುವಿಗೆ ಅತ್ಯಂತ ಪ್ರಿಯವಾದುದು ಎಂಬುದು ಧಾರ್ಮಿಕ ನಂಬಿಕೆ. ಆದುದರಿಂದ ತುಳಸಿ ಗಿಡ ಹೂವೂ ಬಿಟ್ಟಾಗ ಅದನ್ನು ಸಸ್ಯದಲ್ಲಿಯೇ ಇರಲು ಬಿಡಬೇಡಿ. ಅದನ್ನು ವಿಷ್ಣುವಿನ ಪಾದಕ್ಕೆ ಅರ್ಪಿಸಿ. ಹೀಗೆ ಮಾಡಿದರೆ ಕೂಡಾ ತುಳಸಿ ಬೇಗ ಬೆಳೆಯುತ್ತದೆ ಎನ್ನಲಾಗುತ್ತದೆ.  

ಇದನ್ನೂ ಓದಿ : Surya Gochar 2022: ಮಿಥುನ ರಾಶಿಗೆ ಸೂರ್ಯನ ಪ್ರವೇಶ, ಈ ರಾಶಿಯವರು ಜಾಗರೂಕರಾಗಿರಿ

ಆಗಾಗ ಗೊಬ್ಬರ ಹಾಕಿ:  ತುಳಸಿ ಗಿಡಕ್ಕೆ ಹಸುವಿನ ಸಗಣಿ ಗೊಬ್ಬರ ಹಾಕುವುದರಿಂದ  ಗಿಡ ಹಸಿರಾಗಿರುತ್ತದೆ. ಇದಕ್ಕೆ  ಹಸುವಿನ ಒಣ ಸಗಣಿಯನ್ನು ಮಣ್ಣಿನೊಂದಿಗೆ ಬೆರೆಸಿ ಬೇರಿಗೆ ಹಾಕಬೇಕು. ಈ ಕಾರಣದಿಂದಾಗಿ, ತುಳಸಿ ಹಸಿರಾಗಿ ಉಳಿಯುತ್ತದೆ.  

 

ಸೂಚನೆ: ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್

Trending News