Mangala Ketu Yuti: ವೈದಿಕ ಜ್ಯೋತಿಷ್ಯದ ಪ್ರಕಾರ, ದುಷ್ಟ ಗ್ರಹಗಳು, ಪಾಪ ಗ್ರಹಗಳು ಎಂತಲೇ ಕರೆಯಲ್ಪಡುವ ರಾಹು-ಕೇತು ಗ್ರಹಗಳಿಂದ ಯಾರೂ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಅಂತೆಯೇ ಗ್ರಹಗಳ ಕಮಾಂಡರ್ ಎಂತಲೇ ಕರೆಯಲ್ಪಡುವ ಮಂಗಳನು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ ಅಂತಹವರು ಜೀವನದ ಪ್ರತಿ ಹಂತದಲ್ಲೂ ಕಷ್ಟ ಕಾರ್ಪಣ್ಯಗಳು ಬೆಂಬಿಡದೇ ಕಾಡುತ್ತವೆ. ಒಂದೂವರೆ ವರ್ಷಗಳಿಗೊಮ್ಮೆ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುವ ಕೇತು ಅಕ್ಟೋಬರ್ 30, 2023ರಂದು ತುಲಾ ರಾಶಿಯನ್ನು ತೊರೆದು ಕನ್ಯಾ ರಾಶಿಯನ್ನು ಪ್ರವೇಶಿಸಳಿದ್ದಾನೆ. ಇಲ್ಲಿ ಮಂಗಳನೊಂದಿಗೆ ಕೇತು ಸಂಯೋಜನೆ ಏರ್ಪಡಲಿದೆ. 


COMMERCIAL BREAK
SCROLL TO CONTINUE READING

ಒಂದೇ ರಾಶಿಯಲ್ಲಿ ಮಂಗಳ ಕೇತು ಗ್ರಹಗಳ ಸಂಯೋಜನೆಯು ಎಲ್ಲಾ ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದರೂ, ಮಂಗಳ ಕೇತು ಯುತಿಯಿಂದಾಗಿ ನಾಲ್ಕು ರಾಶಿಯವರ ಜೀವನವೇ ಸಂಕಷ್ಟದಲ್ಲಿ ಮುಳುಗಲಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಈ ಸಮಯದಲ್ಲಿ ಯಾವ ರಾಶಿಯವರು ಜಾಗರೂಕರಾಗಿರುವುದು ಅಗತ್ಯ ಎಂದು ತಿಳಿಯೋಣ... 


ಈ 4 ರಾಶಿಯವರ ಜೀವನದಲ್ಲಿ ಭಾರೀ ಸಮಸ್ಯೆಗಳನ್ನು ತಂದೊಡ್ಡಲಿದೆ ಮಂಗಳ-ಕೇತು ಯುತಿ:
ವೃಷಭ ರಾಶಿ:

ಮಂಗಳ ಕೇತು ಯುತಿಯು ವೃಷಭ ರಾಶಿಯವರಿಗೆ ಅಷ್ಟು ಶುಭಕರವಾಗಿಲ್ಲ. ಮಂಗಳ ಕೇತು ಸಂಯೋಜನೆಯಿಂದಾಗಿ ಈ ರಾಶಿಯವರಿಗೆ ವಿದ್ಯಾಭ್ಯಾಸದಲ್ಲಿ, ಉದ್ಯೋಗ- ವ್ಯವಹಾರದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನೀವು ಯಾರನ್ನು ಅತಿಯಾಗಿ ನಂಬುತ್ತೀರೋ ಅವರಿಂದಲೇ ಮೋಸ ಹೋಗುವ ಸಾಧ್ಯತೆ ಇರುವುದರಿಂದ, ಎಷ್ಟೇ ಆಪ್ತರೇ ಆದರೂ ಒಂದು ಕೋನದಲ್ಲಿ ಅವರನ್ನು ಅನುಮಾನದಿಂದಲೇ ನೋಡುವುದು ನಿಮಗೆ ಪ್ರಯೋಜನಕಾರಿ ಆಗಬಹುದು. ಯಾವುದೇ ವಿಷಯದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. 


ಇದನ್ನೂ ಓದಿ- Rahu Keta Gochar: ದ್ವಾದಶ ರಾಶಿಗಳ ಮೇಲೆ ಕ್ರೂರ, ಪಾಪ ಗ್ರಹಗಳ ಪ್ರಭಾವವೇನು?


ಮಿಥುನ ರಾಶಿ: 
ಮಿಥುನ ರಾಶಿಯವರಿಗೂ ಕೂಡ ಮಂಗಳ-ಕೇತು ಸಂಯೋಗ ಮಂಗಳಕರವಾಗಿಲ್ಲ. ಈ ಸಮಯದಲ್ಲಿ ನಿಮ್ಮ ಮನೆಯ ಹಿರಿಯರ ಆರೋಗ್ಯದ ವಿಷಯದಲ್ಲಿ ತುಂಬಾ ಜಾಗರೂಕರಾಗಿರಿ. ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯದ ಕಾರಣ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆಯೂ ಇದೆ. ಇದನ್ನು ತಪ್ಪಿಸಲು ಯೋಗ, ಧ್ಯಾನವನ್ನು ಮಾಡಿ. ಈ ಸಮಯದಲ್ಲಿ ನೀವು ಎಷ್ಟೇ ಪ್ರಯತ್ನಪಟ್ಟರೂ ನಿಮಗೆ ಸಹಕಾರದ ಕೊರತೆ ಕಾಡಬಹುದು. ಆದರೂ, ಎದೆಗುಂದದೆ ಮುನ್ನಡೆಯಿರಿ. 


ಕನ್ಯಾ ರಾಶಿ: 
ಈ ವರ್ಷ ಸ್ವ ರಾಶಿಯಲ್ಲಿ ಕೇತುವಿನ ಸಂಚಾರವು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಕುಂದಿಸುತ್ತದೆ. ಇದರೊಟ್ಟಿಗೆ ಕೇತು-ಮಂಗಳ ಯುತಿಯು ನಿಮ್ಮ ಮನಸ್ಸಿನ ಮೇಲೆ ಹೆಚ್ಚು ಪ್ರಭಾವವನ್ನು ಬೀರುತ್ತದೆ. ನಿಷ್ಪ್ರಯೋಜಕ ಜನರ ಮಾತುಗಳಿಗೆ ಮರುಳಾಗಿ ನೀವು ಹೆಚ್ಚು ಹಣ ವ್ಯಯಿಸುತ್ತೀರಿ. ಇದರಿಂದಾಗಿ ಭವಿಷ್ಯದಲ್ಲಿ ನೀವು ದೊಡ್ಡ ನಷ್ಟವನ್ನು ಅನುಭವಿಸಬಹುದು. ಅಷ್ಟೇ ಅಲ್ಲದೆ, ಈ ಸಮಯದಲ್ಲಿ ನೀವು ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. 


ಇದನ್ನೂ ಓದಿ- Shani Vakri 2023: ನವೆಂಬರ್ 3ರವರೆಗೆ ಈ ರಾಶಿಯವರಿಗೆ ಹಣ, ಸುಖ, ಸಂಪತ್ತು ಎಲ್ಲವನ್ನೂ ನೀಡಲಿದ್ದಾನೆ ಶನಿ


ಧನು ರಾಶಿ: 
ಮಂಗಳ ಕೇತು ಸಂಯೋಜನೆಯು ಧನು ರಾಶಿಯ ಜನರ ವೃತ್ತಿ ಬದುಕಿನಲ್ಲಿ ಸವಾಲುಗಳನ್ನು ತಂದೊಡ್ಡಬಹುದು. ಹಾಗಾಗಿ, ಕೆಲಸದ ಸ್ಥಳದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ನಿಮ್ಮ ಮೇಲಾಧಿಕಾರಿಗಳು ನಿಮ್ಮ ಮೇಲೆ ನಂಬಿಕೆ ಇಟ್ಟು ಕೊಟ್ಟ ಕೆಲಸವನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಇದು ವೃತ್ತಿ ಬದುಕಿನಲ್ಲಿ ನಿಮ್ಮ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಹಾಗಾಗಿ, ಯಾವುದೇ ಜವಾಬ್ದಾರಿಯುತ ಕೆಲಸ ವಹಿಸಿಕೊಂಡಾಗ ಬಹಳ ಎಚ್ಚರಿಕೆಯಿಂದ ಅದನ್ನು ನಿರ್ವಹಿಸಿ.  ಈ ಸಮಯದಲ್ಲಿ, ನೀವು ಯೋಚಿಸದೆ ಯಾರಿಗೂ ಸಾಲ ನೀಡಬಾರದು, ಇಲ್ಲದಿದ್ದರೆ ಅದನ್ನು ಮರಳಿ ಪಡೆಯುವ ಸಾಧ್ಯತೆಗಳು ತುಂಬಾ ಕಡಿಮೆ ಇರುತ್ತದೆ. ಕೌಟುಂಬಿಕ ಕಲಹ ಸಾಧ್ಯತೆಯೂ ಇರುವುದರಿಂದ ಅನಾವಶ್ಯಕ ವಾದ-ವಿವಾದಗಳನ್ನು ತಪ್ಪಿಸಿ. 


ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.