ಈ ನಾಲ್ಕು ರಾಶಿಯವರ ಮಲಗಿರುವ ಅದೃಷ್ಟವನ್ನು ಬಡಿದೆಬ್ಬಿಸಲಿದ್ದಾನೆ ಶನಿದೇವ

Shani Deva: ಇಷ್ಟು ದಿನಗಳ ಕಾಲ ಸುಪ್ತ ಸ್ಥಿತಿಯಲ್ಲಿದ್ದ ಕರ್ಮಫಲಡಾಟಾ ಶನಿ ದೇವನು ಇತ್ತೀಚೆಗಷ್ಟೇ ಎಚ್ಚರಗೊಂಡಿದ್ದಾನೆ. ಇದರೊಂದಿಗೆ ಶನಿ ಮಹಾತ್ಮನು ಕೆಲವು ರಾಶಿಯವರ ಮಲಗಿರುವ ಅದೃಷ್ಟವನ್ನೂ ಕೂಡ ಎಚ್ಚರಗೊಳಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

Written by - Yashaswini V | Last Updated : Aug 22, 2023, 12:35 PM IST
  • ಸದ್ಯ ಶನಿದೇವ ತನ್ನದೇ ಆದ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ.
  • ಅಷ್ಟೇ ಅಲ್ಲದೆ, ಕಳೆದ ಕೆಲದಿನಗಳಿಂದ ಸುಪ್ತ ಸ್ಥಿತಿಯಲ್ಲಿದ್ದ ಶನಿ ಮಹಾತ್ಮ ಕಳೆದ ವಾರವಷ್ಟೇ ಎಚ್ಚರಗೊಂಡಿದ್ದಾನೆ.
  • ಈ ಸಮಯದಲ್ಲಿ ನಾಲ್ಕು ರಾಶಿಯವರ ಮೇಲೆ ಶನಿ ದೇವ ಕೃಪೆ ತೋರಲಿದ್ದಾನೆ
ಈ ನಾಲ್ಕು ರಾಶಿಯವರ ಮಲಗಿರುವ ಅದೃಷ್ಟವನ್ನು ಬಡಿದೆಬ್ಬಿಸಲಿದ್ದಾನೆ ಶನಿದೇವ title=

Shani Deva: ವೈದಿಕ ಜ್ಯೋತಿಷ್ಯದ ಪ್ರಕಾರ, ನ್ಯಾಯದ ದೇವರು ಎಂದು ಬಣ್ಣಿಸಲ್ಪಡುವ ಕರ್ಮಫಲದಾತ ಶನಿ ದೇವನು ಸುಮಾರು ಮೂರು ದಶಕಗಳ ಬಳಿಕ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಸದ್ಯ ಶನಿದೇವ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಅಷ್ಟೇ ಅಲ್ಲದೆ, ಕಳೆದ ಕೆಲದಿನಗಳಿಂದ ಸುಪ್ತ ಸ್ಥಿತಿಯಲ್ಲಿದ್ದ ಶನಿ ಮಹಾತ್ಮನು ಕಳೆದ ವಾರವಷ್ಟೆ ಆಗಸ್ಟ್ 15,  2023ರಂದು ಜಾಗೃತ ಗೊಂಡಿದ್ದಾನೆ. ಅಷ್ಟೇ ಅಲ್ಲ, ಶನಿ ಮಹಾತ್ಮ ತಾನು ಎಚ್ಚರಗೊಳ್ಳುವುದರ ಜೊತೆಗೆ ನಿದ್ರಾವಸ್ಥೆಯಲ್ಲಿರುವ ಕೆಲವು ರಾಶಿಯವರ ಅದೃಷ್ಟವನ್ನೂ ಕೂಡ ಬಡಿದೆಬ್ಬಿಸಿದ್ದಾನೆ. 

ಹೌದು, ಶನಿ ದೇವನ ಜಾಗೃತ ಸ್ಥಿತಿಯು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಆದಾಗ್ಯೂ, ಈ ಸಮಯದಲ್ಲಿ ನಾಲ್ಕು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಜಾಗೃತಾವಸ್ಥೆಯಲ್ಲಿ ಶನಿ: ಬದಲಾಗಲಿದೆ ಈ ನಾಲ್ಕು ರಾಶಿಯವರ ಅದೃಷ್ಟ:- 
ಮೇಷ ರಾಶಿ: 

ಜಾಗೃತಾವಸ್ಥೆಯಲ್ಲಿರುವ ಶನಿದೇವನು ಮೇಷ ರಾಶಿಯವರ ಮಲಗಿದ್ದ ಅದೃಷ್ಟವನ್ನೂ ಎಚ್ಚರಗೊಳಿಸಲಿದೆ. ಈ ಸಮಯದಲ್ಲಿ ಮೇಷ ರಾಶಿಯವರ ಇಷ್ಟಾರ್ಥಗಳು ನೆರವೇರಳಿದ್ದು, ನಿಮ್ಮ ಬಯಕೆಗಳೆಲ್ಲ ಕೈಗೂಡಲಿವೆ. ಸರ್ಕಾರಿ ಉದ್ಯೋಗದಲ್ಲಿರುವವರು ನಿಮ್ಮ ಬಯಸಿದ ಸ್ಥಳಕ್ಕೆ ವರ್ಗಾವಣೆಯನ್ನು ಪಡೆಯಬಹುದು. 

ಇದನ್ನೂ ಓದಿ- Rahu Keta Gochar: ದ್ವಾದಶ ರಾಶಿಗಳ ಮೇಲೆ ಕ್ರೂರ, ಪಾಪ ಗ್ರಹಗಳ ಪ್ರಭಾವವೇನು?

ವೃಷಭ ರಾಶಿ: 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಷಭ ರಾಶಿಯವರ ಮೇಲೆ ಸದಾ ಶನಿ ದೇವನ ವಿಶೇಷ ಆಶೀರ್ವಾದ ಇರುತ್ತದೆ. ಇದೀಗ ಜಾಗೃತಾವಸ್ಥೆಯಲ್ಲಿರುವ ಶನಿ ದೇವನು ಈ ರಾಶಿಯವರಿಗೆ ಹಠಾತ್ ಧನ ವೃಷ್ಠಿಯನ್ನು ಕರುಣಿಸುವನು. ಈ ಸಮಯದಲ್ಲಿ ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ನಿಮ್ಮ ಕೆಲಸಗಳು ಪೂರ್ಣಗೊಳ್ಳಲಿವೆ. ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗುವ ಸಾಧ್ಯತೆಯೂ ಇದೆ. 

ಮಿಥುನ ರಾಶಿ: 
ಇಷ್ಟು ದಿನ ಸುಪ್ತಾವಸ್ಥೆಯಲ್ಲಿದ್ದು ಇದೀಗ ಎಚ್ಚರಗೊಂಡಿರುವ ಶನಿ ಮಹಾತ್ಮನು ಮಿಥುನ ರಾಶಿಯವರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ. ಇದರಿಂದ ನಿಮ್ಮ ಬಹುದಿನದ ಬಯಕೆಗಳು ಕೈಗೂಡಲಿವೆ. ವಿದೇಶದಲ್ಲಿ ಓದುವ ಕನಸು ಕಾಣುತ್ತಿದ್ದವರಿಗೆ  ಇದೀಗ ಸುಸಮಯ ಎಂತಲೇ ಹೇಳಬಹುದು. ಅಷ್ಟೇ ಅಲ್ಲ, ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ. 

ಇದನ್ನೂ ಓದಿ- Shani Vakri 2023: ನವೆಂಬರ್ 3ರವರೆಗೆ ಈ ರಾಶಿಯವರಿಗೆ ಹಣ, ಸುಖ, ಸಂಪತ್ತು ಎಲ್ಲವನ್ನೂ ನೀಡಲಿದ್ದಾನೆ ಶನಿ

ತುಲಾ ರಾಶಿ: 
ಜಾಗೃತ ಶನಿಯು ತುಲಾ ರಾಶಿಯವರ ಜೀವನದಲ್ಲಿ ಬಹಳಷ್ಟು ಪ್ರಯೋಜನಗಳನ್ನು ತರಲಿದೆ. ಈ ಸಮಯದಲ್ಲಿ ತುಲಾ ರಾಶಿಯವರಿಗೆ ದಿಢೀರ್ ಹಣಕಾಸಿನ ಪ್ರಯೋಜನವಾಗಲಿದ್ದು ನಿಮಗೆ ಭೂಮಿ, ವಾಹನ ಖರೀದಿ ಯೋಗವಿದೆ. ಮಾತ್ರವಲ್ಲ, ಸಮಾಜದಲ್ಲಿ ನಿಮ್ಮ ಗೌರವ, ಪ್ರತಿಷ್ಠೆಯೂ ಹೆಚ್ಚಾಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News