Shukra Vakri: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೈಹಿಕ ಸಂತೋಷ, ಪ್ರೀತಿ, ಐಷಾರಾಮಿ, ಸಂಪತ್ತು, ಪ್ರೀತಿ-ಪ್ರಣಯದ ಅಂಶ ಎಂದು ಪರಿಗಣಿಸಲ್ಪಟ್ಟಿರುವ ಶುಕ್ರನ ಸಂಚಾರದಲ್ಲಿನ ಸಣ್ಣ ಬದಲಾವಣೆಯು ಸಹ ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಬದಲಾವಣೆಯನ್ನು ತರುತ್ತದೆ. ಶೀಘ್ರದಲ್ಲೇ ಎಂದರೆ 22 ಜುಲೈ 2023 ರಂದು ಶುಕ್ರನ ಹಿಮ್ಮುಖ ಚಲನೆ ಆರಂಭವಾಗಲಿದೆ. ಈ ಸಮಯದಲ್ಲಿ ಶುಕ್ರನು ಕೆಲವು ರಾಶಿಯವರ ಜೀವನದಲ್ಲಿ ಹಣದ ಹೊಳೆಯನ್ನು ಹರಿಸಲಿದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಶುಕ್ರನ ರಾಶಿ ಬದಲಾವಣೆಯು ಜನರ ಜೀವನದ ಈ ಎಲ್ಲಾ ಅಂಶಗಳ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ.  22 ಜುಲೈ 2023 ರಂದು ಶುಕ್ರನು ಕರ್ಕ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ. ಕರ್ಕಾಟಕದಲ್ಲಿ ಶುಕ್ರನ ಹಿಮ್ಮುಖ ಚಲನೆಯು ಮೂರು ರಾಶಿಯವರ ಜೀವನದಲ್ಲಿ ಬಂಪರ್ ಲಾಭವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 


ಇದನ್ನೂ ಓದಿ- ಈ ರಾಶಿಯವರ ಜಾತಕದಲ್ಲಿ ಶನಿಪ್ರಿಯ ರಾಜಯೋಗ: ಇನ್ಮುಂದೆ ಇಟ್ಟ ಹೆಜ್ಜೆಯಲ್ಲಿ ಸೋಲೇ ಇಲ್ಲ-ಮುಟ್ಟಿದ್ದೆಲ್ಲಾ ಚಿನ್ನಮಯ


ಶುಕ್ರನ ಹಿಮ್ಮುಖ ಚಲನೆಯಿಂದ ಈ ರಾಶಿಯವರಿಗೆ ಪ್ರಾಪ್ತಿಯಾಗಲಿದೆ ಐಷಾರಾಮಿ ಜೀವನ: 
ಮೇಷ ರಾಶಿ: 

ವಕ್ರೀ ಶುಕ್ರನು ಮೇಷ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಬಹಳಷ್ಟು ಲಾಭಗಳನ್ನು ನೀಡಲಿದ್ದಾನೆ. ಈ ಜನರು ದೊಡ್ಡ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಇವರ ಆದಾಯ ಹೆಚ್ಚಾಗಲಿದ್ದು ಐಷಾರಾಮಿ ಜೀವನವೂ ಪ್ರಾಪ್ತಿಯಾಗಲಿದೆ. ಈ ಸಮಯದಲ್ಲಿ ನೀವು ಆಸ್ತಿ, ವಾಹನ ಯೋಗವೂ ಇದೆ. ಅದರಲ್ಲೂ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಜನರಿಗೆ ಈ ಸಮಯವು ತುಂಬಾ ವಿಶೇಷವಾಗಿದೆ. 


ಮಿಥುನ ರಾಶಿ: 
ಶುಕ್ರನ ಹಿಮ್ಮುಖ ಚಲನೆಯು ಮಿಥುನ ರಾಶಿಯ ಜನರಿಗೆ ಶುಭಕರ ಫಲಿತಾಂಶಗಳನ್ನು ತರಲಿದೆ. ಹಠಾತ್ ಹಣಕಾಸಿನ ಲಾಭದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಿಮ್ಮ ಮಾತೇ ನಿಮ್ಮ ಬಂಡವಾಳ. ಹಾಗಾಗಿ, ವಾಕ್ ಚಾತುರ್ಯದಿಂದ ಭಾರೀ ಲಾಭ ಗಳಿಸುವಿರಿ. ಇಷ್ಟು ದಿನ ಬೇರೆಡೆ ಸಿಲುಕಿರುವ ನಿಮ್ಮ ಹಣ ಈಗ ಕೈ ಸೇರಬಹುದು. 


ಇದನ್ನೂ ಓದಿ- Venus Moon Conjuction: ಕರ್ಕಾಟಕ ರಾಶಿಯಲ್ಲಿ ಶುಕ್ರ-ಚಂದ್ರರ ಸಂಯೋಜನೆ, ಹೆಚ್ಚಾಗಲಿದೆ ಈ 3 ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್‌


ತುಲಾ ರಾಶಿ: 
ಕರ್ಕಾಟಕ ರಾಶಿಯಲ್ಲೇ ಶುಕ್ರನ ವಕ್ರ ನಡೆ ಆರಂಭವಾಗಲಿದೆ. ಕರ್ಕ ರಾಶಿಯು ತುಲಾ ರಾಶಿಯ ಅಧಿಪತಿ ರಾಶಿಯಾಗಿದ್ದು, ಈ ರಾಶಿಯಲ್ಲಿ ಶುಕ್ರನ ಹಿಮ್ಮುಖ ಚಲನೆಯಿಂದ ತುಲಾ ರಾಶಿಯ ಸ್ಥಳೀಯರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಅದರಲ್ಲೂ ಮುಖ್ಯವಾಗಿ ಉದ್ಯೋಗ ರಂಗದಲ್ಲಿ ಪ್ರಮುಖ ಬದಲಾವಣೆಯೂ ಕಂಡು ಬರಲಿದೆ. ಉದ್ಯೋಗ-ವ್ಯವಹಾರದಲ್ಲಿ ದೊಡ್ಡ ಪ್ರಗತಿ ಕಂಡುಬರಬಹುದು. ಉದ್ಯೋಗಸ್ಥರಿಗೆ ಬಡ್ತಿ ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.