ಬೆಂಗಳೂರು : ಯಾರ ಮೇಲೆ ಶನಿಯ ವಕ್ರ ದೃಷ್ಟಿ ಬೀಳುತ್ತದೆಯೋ ಅವರ ಜೀವನ ಹಳ್ಳ ಹಿಡಿದಂತೆಯೇ ಎಂದು ಹೇಳಲಾಗುತ್ತದೆ. ಶನಿ ದೆಸೆಯ ಸಂದರ್ಭದಲ್ಲಿ ವ್ಯಕ್ತಿ  ತನ್ನ ಜೀವನದ ಅತ್ಯಂತ ಕಷ್ಟದ ದಿನಗಳನ್ನು ನೋಡಬೇಕಾಗುತ್ತದೆ. ಇದೇ ಕಾರಣಕ್ಕೆ ಜಾತಕದಲ್ಲಿ ಶನಿ ದೆಸೆ ಆರಂಭವಾಗುತ್ತದೆ ಎಂದ ಕೂಡಲೇ ಕೈ ಕಾಲು ನಡುಗಲು ಆರಂಭವಾಗುತ್ತದೆ. ಯಾಕೆಂದರೆ ಪ್ರತಿಯೊಬ್ಬನ ಜೀವನದಲ್ಲಿಯೂ ಶನಿ ಸಾಡೇಸಾತಿ ಅಥವಾ ಶನಿ ಧೈಯ್ಯಾದಂಥಹ ಸಮಯ ಬಂದೇ ಬರುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಹಾಗಾಗಿ ಶನಿ ದೇವನ ನ್ಯಾಯದಿಂದ ಯಾರೂ ತಪ್ಪಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ.  ಯಾರ ಜಾತಕದಲ್ಲಿ ಶನಿ ಸಾಡೇ ಸಾತಿ  ಅಥವಾ ಧೈಯಾ ನಡೆಯುತ್ತಿರುತ್ತದೆಯೋ ಅವರು ಆರ್ಥಿಕ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಮ್ಮ ಸ್ಥಾನಮಾನದ ಮೇಲೆ ಪರಿಣಾಮ ಬೀರುತ್ತದೆ.  ಇದೀಗ ಶನಿಯು ಮಕರ ರಾಶಿಯಲ್ಲಿದ್ದು, ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ  ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿ ಗ್ರಹದ ರಾಶಿ ಬದಲಾವ್ನೆಯಿಂದ್ ಜೆಲ್ವು ರಾಶಿವರಿ ಶನಿ ದೆಸೆಯಿಂದ ಮುಕ್ತಿ ಪಡೆದರೆ ಇನ್ನು ಕೆಲವರ ಜಾತಕದಲ್ಲಿ ಶನಿ ದೆಸೆ ಆರಂಭವಾಗುತ್ತದೆ. 


COMMERCIAL BREAK
SCROLL TO CONTINUE READING

ಸಾಡೇಸಾತಿ ಧೈಯ್ಯಾ ಸಮಯದಲ್ಲಿ ಈ ಕೆಲಸವನ್ನು ಮಾಡಬೇಡಿ :
ಶನಿ ದೆಸೆ ನಡೆಯುತ್ತಿದ್ದ ಸಮಯದಲ್ಲಿ ಯಾವುದೇ ರೀತಿಯ ಕೆಟ್ಟ ಕೆಲಸವನ್ನು ಮಾಡಬಾರದು. ಅದರಲ್ಲೂ ಶನಿದೇವನಿಗೆ ಕೋಪ ಬರುವಂತಹ ಕೆಲಸಗಳನ್ನು ಮಾಡಲೇಬಾರದು.  ಏಳೂವರೆ  ಮತ್ತು ಎರಡೂವರೆ ವರ್ಷದ ಶನಿ ದೆಸೆ ನಡೆಯುತ್ತಿದ್ದರೆ, ಶನಿದೇವನನ್ನು ಮೆಚ್ಚಿಸುವಂಥಹ ಕೆಲಸಗಳನ್ನು ಮಾಡ ಬೇಕೇ ಹೊರತು ಶನಿ ದೇವರಿಗೆ ಕೋಪ ಬರುವಂಥಹ ಕೆಲಸಕ್ಕೆ ಕೈ ಹಾಕಲು ಹೋಗಬಾರದು. ಶನಿಯು  ನಾವು ಮಾಡುವ ಕೆಲಸಕ್ಕೆ ತಕ್ಕಂತೆ ಫಲ ನೀಡುತ್ತಾನೆ ಎಂದು ಹೇಳಲಾಗುತ್ತದೆ.  


ಇದನ್ನೂ ಓದಿ : Garuda Purana: ಯೋಗ್ಯ ಸಂತಾನ ಪಡೆಯುವ ಮಾರ್ಗವೇನು? ಯಾವ ದಿನಗಳು ಗರ್ಭಧಾರಣೆಗೆ ಉತ್ತಮ?
 
- ಏಳೂವರೆ  ಮತ್ತು ಎರಡೂವರೆ ವರ್ಷದ  ಶನಿ ದೆಸೆ ನಡೆಯುತ್ತಿದ್ದರೆ, ಅವರು ಮಾಂಸಾಹಾರದಿಂದ ದೂರ ಇರಬೇಕು. ಮದ್ಯವನ್ನು ಸೇವಿಸಬಾರದು. ಇದರಿಂದ ಶನಿಯು ಕೋಪಗೊಳ್ಳುತ್ತಾನೆ. 


-  ಸಾಡೇಸಾತಿ ಅಥವಾ ಧೈಯ್ಯಾ ಸಮಯದಲ್ಲಿ ನಾಯಿಗಳಿಗೆ ತೊಂದರೆ ನೀಡಬಾರದು. ಇದರ ಬದಲಾಗಿ ನಾಯಿಗಳಿಗೆ ಆಹಾರ ನೀಡಬೇಕು. 


- ಬಡವರು, ಅಸಹಾಯಕರು ಮತ್ತು ಶ್ರಮಜೀವಿಗಳಿಗೆ ಕಿರುಕುಳ ನೀಡಬಾರದು. ಅವರನ್ನು ಅವಮಾನಿಸಬಾರದು. ಹಿರಿಯರು ಮತ್ತು ಮಹಿಳೆಯರನ್ನು  ಗೌರವಿಸಬೇಕು. 


- ಶನಿವಾರದಂದು ಕಪ್ಪು ಬಟ್ಟೆ, ಬೂಟು, ಎಣ್ಣೆ ಖರೀದಿಸಬೇಡಿ. ಹಾಗೆಯೇ ಕಪ್ಪು ಬಟ್ಟೆಯನ್ನು ಧರಿಸುವುದು ಕೂಡಾ ನಿಷಿದ್ದ. ಉಗುರುಗಳು ಮತ್ತು ಕೂದಲನ್ನು ಶನಿವಾರ ಕತ್ತರಿಸಬೇಡಿ. ಶನಿವಾರದಂದು ತೈಲವನ್ನು ದಾನ ಮಾಡುವುದಾರೆ ಮೊದಲ ದಿನವೇ ಖರೀದಿಸಿ ಇಟ್ಟುಕೊಳ್ಳಿ. 


ಇದನ್ನೂ ಓದಿ :  Adhik Masa 2023: 2023 ರ ವರ್ಷ 13 ತಿಂಗಳದ್ದಾಗಿರಲಿದೆ, 19 ವರ್ಷಗಳ ಬಳಿಕ ಅದ್ಭುತ ಕಾಕತಾಳೀಯ ನಿರ್ಮಾಣ


ಈ ರಾಶಿಯವರ ಜೀವನದಲ್ಲಿ ನಡೆಯುತ್ತಿದೆ ಶನಿ  ಸಾಡೇಸಾತಿ :  
ಇದೀಗ ಶನಿ ದೆಸೆಯು ಧನು ರಾಶಿ, ಮಕರ ಮತ್ತು ಕುಂಭ ರಾಶಿಗಳಲ್ಲಿ ನಡೆಯುತ್ತಿದೆ. ಇನ್ನು ಮಿಥುನ ಮತ್ತು ತುಲಾ ರಾಶಿಗಳ ಮೇಲೆ ಕೂಡಾ ಶನಿಯ ದೃಷ್ಟಿ ಇದೆ. ಆದರೆ ಜನವರಿ 17, 2023 ರಂದು, ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ ತಕ್ಷಣ, ಧನು, ಮಿಥುನ ಮತ್ತು ತುಲಾ ರಾಶಿಗಳು ಶನಿ ದೆಸೆಯಿಂದ ಮುಕ್ತಿ ಪಡೆಯುತ್ತವೆ. ಆದರೆ ಮಕರ, ಕುಂಭ ಮತ್ತು ಮೀನ ರಾಶಿಗಳಲ್ಲಿ  ಸಾಡೇ ಸಾತಿ ನಡೆಯುತ್ತಿರುತ್ತದೆ. ಮತ್ತೊಂದೆಡೆ, ಕರ್ಕ ಮತ್ತು ವೃಶ್ಚಿಕ ರಾಶಿಯವರು ಕೂಡಾ  ಶನಿ ಧೈಯ್ಯಾದ ಪ್ರಭಾವಕ್ಕೆ ಒಳಗಾಗುತ್ತಾರೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.