ಈ ವಸ್ತುಗಳನ್ನು ಗಾಡಿಯ ಡಿಕ್ಕಿಯಲ್ಲಿಟ್ಟರೆ ಎದುರಿಸಬೇಕಾಗುತ್ತದೆ ಶನಿದೇವನ ಪ್ರಕೋಪ

ಕಾರು, ಬೈಕ್  ವಿಚಾರದಲ್ಲಿ ನಾವು ಮಾಡುವ ಕೆಲವು ತಪ್ಪುಗಳು ಶನಿ ಮಹಾತ್ಮನ ಪ್ರಕೋಪಕ್ಕೆ ಕಾರಣವಾಗಿ ಬಿಡಬಹುದು. 

Written by - Ranjitha R K | Last Updated : Dec 12, 2022, 11:06 AM IST
  • ವಾಹನಗಳಿಗೂ ಶನಿ ಗ್ರಹಕ್ಕೂ ಸಂಬಂಧ ಇದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.
  • ಈ ವಸ್ತುಗಳನ್ನು ವಾಹನಗಳ ಡಿಕ್ಕಿಯಲ್ಲಿ ಇಡಲೇಬೇಡಿ
  • ಪದೇ ಪದೇ ವಾಹನ ಹಾಳಾಗಲು ಕಾರಣವಾಗುತ್ತದೆ ಶನಿಯ ಕೋಪ
ಈ ವಸ್ತುಗಳನ್ನು  ಗಾಡಿಯ ಡಿಕ್ಕಿಯಲ್ಲಿಟ್ಟರೆ ಎದುರಿಸಬೇಕಾಗುತ್ತದೆ ಶನಿದೇವನ ಪ್ರಕೋಪ  title=
Vehicle Astrology

ಬೆಂಗಳೂರು : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಮ್ಮ ಸುತ್ತಲಿನ ಎಲ್ಲಾ ವಸ್ತುಗಳು ಒಂದಲ್ಲ ಒಂದು ಗ್ರಹದ ಪ್ರಭಾವಕ್ಕೆ ಒಳಪಟ್ಟಿರುತ್ತವೆ. ಕಬ್ಬಿಣ, ಕಪ್ಪು ಬಣ್ಣ, ಎಣ್ಣೆ ಇತ್ಯಾದಿಗಳ ಸಂಬಂಧ ಕ್ರೂರ ಗ್ರಹ ಎಂದೇ ಕರೆಯಲ್ಪಡುವ ಶನಿದೇವನಿಗೆ ಸಂಬಂಧಿಸಿದ್ದಾಗಿದೆ. ಈ ಕಾರಣದಿಂದಾಗಿಯೇ ವಾಹನಗಳಿಗೂ ಶನಿ ಗ್ರಹಕ್ಕೂ ಸಂಬಂಧ ಇದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.  ಏಕೆಂದರೆ ವಾಹನ ಕಬ್ಬಿಣದಿಂದ ಮಾಡಲ್ಪತಟ್ಟಿರುತ್ತದೆ. ಇನ್ನು ವಾಹನವನ್ನು ಚಲಾಯಿಸಲು ಪೆಟ್ರೋಲ್ ಡಿಸೇಲ್ ನಂಥಹ ತೈಲವನ್ನು ಬಳಸಲಾಗುತ್ತದೆ. ಇದೇ ಕಾರಣಕ್ಕೆ ವಾಹನದ ಸಂಬಂಧ ಶನಿ ಗ್ರಹದೊಂದಿಗೆ ಇದೆ ಎಂದು ಹೇಳಲಾಗುತ್ತದೆ. ಹೀಗಾಗಿ ಕಾರು, ಬೈಕ್  ವಿಚಾರದಲ್ಲಿ ನಾವು ಮಾಡುವ ಕೆಲವು ತಪ್ಪುಗಳು ಶನಿ ಮಹಾತ್ಮನ ಪ್ರಕೋಪಕ್ಕೆ ಕಾರಣವಾಗಿ ಬಿಡಬಹುದು. 

ಈ ವಸ್ತುಗಳನ್ನು ವಾಹನಗಳ  ಡಿಕ್ಕಿಯಲ್ಲಿ ಇಡಲೇಬೇಡಿ :
ಕಾರು ಅಥವಾ ಬೈಕು ಖರೀದಿಸುವಾಗ ಅದರ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ. ಇದರ ಜೊತೆಗೆ ಸ್ಟೋರೇಜ್ ಸ್ಥಳ ಎಷ್ಟಿದೆ ಎನ್ನುವುದನ್ನು ಸಹಾ ನೋಡಲಾಗುತ್ತದೆ. ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳೆರಡರಲ್ಲೂ ಗಾಡಿಯ ಡಿಕ್ಕಿ ಗಾತ್ರ ದೊಡ್ಡದಾಗಿರಬೇಕು ಎಂದೇ ಜನರು ನಿರೀಕ್ಷಿಸುತ್ತಾರೆ. ವಾಹನದ ಡಿಕ್ಕಿ ದೊಡ್ಡದಾಗಿದ್ದರೆ, ಹೆಚ್ಚಿನ ಪ್ರಮಾಣದ ವಸ್ತುಗಳನ್ನು ಅದರೊಳಗೆ ಇಡಬಹುದು ಎನ್ನುವ ಲೆಕ್ಕಾಚಾರವಾಗಿರುತ್ತದೆ.  ಆದರೆ ಡಿಕ್ಕಿಯಲ್ಲಿ ಇಡುವ ಕೆಲವೊಂದು ಅನಗತ್ಯ ವಸ್ತುಗಳು ಶನಿದೇವ ಕೋಪಕ್ಕೆ ಕಾರಣವಾಗುತ್ತದೆ ಎನ್ನಲಾಗಿದೆ.  

ಇದನ್ನೂ ಓದಿ : Vastu Remedy For Mirror : ಮನೆಯ ಈ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಯಾವತ್ತೂ ಕನ್ನಡಿ ಹಾಕಬೇಡಿ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾರಿನಲ್ಲಿ ಸ್ಟೆಪ್ಪೆನ್ನಿ, ಟೂಲ್ ಕಿಟ್ ಮುಂತಾದ ಅಗತ್ಯ ವಸ್ತುಗಳನ್ನು ಇಡುವುದು ಸರಿಯೇ ಹೊರತು ಹಳೆಯ ಬಿಲ್, ವೇಸ್ಟ್ ಪೇಪರ್ ಅಥವಾ ಇತರ ವಸ್ತುಗಳನ್ನು ಇಡಬಾರದು. ಈ ರೀತಿ ಅನಗತ್ಯ ವಸ್ತುಗಳನ್ನು ಡಿಕ್ಕಿಯಲ್ಲಿಟ್ಟರೆ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ. ಆದ್ದರಿಂದ ಕಾಲಕಾಲಕ್ಕೆ  ವಾಹನದ ಡಿಕ್ಕಿಯನ್ನು ಕ್ಲೀನ್ ಮಾಡುತ್ತಾ ಇರಬೇಕು.  

ಪದೇ ಪದೇ ವಾಹನ ಹಾಳಾಗಲು ಕಾರಣವಾಗುತ್ತದೆ ಶನಿಯ ಕೋಪ : 
ವಾಹನದಲ್ಲಿ ಶನಿಗೆ ಸಂಬಂಧಿಸಿದ ದೋಷವಿದ್ದರೆ, ವಾಹನವು ಮತ್ತೆ ಮತ್ತೆ ಕೆಟ್ಟುಹೋಗುತ್ತದೆ. ಅದರೊಂದಿಗೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳೂ ಇರುತ್ತವೆ. ಇದಲ್ಲದೇ ಜಾತಕದಲ್ಲಿ ಶನಿಯ ಅಶುಭ ಸ್ಥಾನದಿಂದಲೂ ಇಂತಹ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ, ಈ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡಲು, ವಾಹನದ ಡಿಕ್ಕಿಯನ್ನು  ಸ್ವಚ್ಛಗೊಳಿಸುತ್ತಿರಿ. ಅಲ್ಲದೆ, ನಿಮ್ಮ ವಾಹನವನ್ನು ಸಮಯಕ್ಕೆ ಸರಿಯಾಗಿ ಸರ್ವೀಸ್  ಮಾಡಿಸುತ್ತಿರಿ. ಯಾವುದೇ ನಿಯಮಗಳನ್ನು ಉಲ್ಲಂಘಿಸಬೇಡಿ. ನಿಯಮಗಳನ್ನು ಉಲ್ಲಂಘಿಸುವ ಜನರ ಮೇಲೆ ಶನಿಯು ಬೇಗನೆ ಕೋಪಗೊಳ್ಳುತ್ತಾನೆ. 

ಇದನ್ನೂ ಓದಿ : Vastu Remedy For Mirror : ಮನೆಯ ಈ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಯಾವತ್ತೂ ಕನ್ನಡಿ ಹಾಕಬೇಡಿ!

ವಾಹನ ದೋಷನಿವಾರಣೆ  ಹೇಗೆ ? :
ಪದೇ ಪದೇ ವಾಹನಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಎದುರಾದರೆ ಶನಿಯು ಕೋಪಗೊಂಡಿದ್ದಾನೆ ಎಂದರ್ಥ. ಇದಕ್ಕಾಗಿ ಪ್ರತಿ ಶನಿವಾರ ಶನಿದೇವನಿಗೆ ಎಳ್ಳೆಣ್ಣೆಯನ್ನು ಅರ್ಪಿಸಬೇಕು. ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡಬೇಕು. ನಿಮ್ಮ ವಾಹನಕ್ಕೆ ನಿಂಬೆ ಮತ್ತು ಮೆಣಸಿನಕಾಯಿಯನ್ನು ಕಟ್ಟಿ.  ಇದರಿಂದ ಶನಿಗ್ರಹ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News