ದಸರಾ-ದೀಪಾವಳಿ ಭವಿಷ್ಯ: ಅಕ್ಟೋಬರ್‌ನಲ್ಲಿ ಬಂಪರ್ ಲಾಭ ಗಳಿಸಲಿದ್ದಾರೆ ಈ ರಾಶಿಯ ಜನ
Money Horoscope October 2022: ದಸರಾ ಮತ್ತು ದೀಪಾವಳಿಯಂತಹ ದೊಡ್ಡ ಹಬ್ಬಗಳನ್ನು ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುತ್ತಿದ್ದು ಈ ತಿಂಗಳು ಕೆಲವು ರಾಶಿಯವರಿಗೆ ಬಹಳ ವಿಶೇಷವಾಗಿದೆ. ಈ ತಿಂಗಳು ಕೆಲವು ಪ್ರಮುಖ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿದ್ದು ಈ ಸಮಯದಲ್ಲಿ ಕೆಲವು ರಾಶಿಯವರು ಬಂಪರ್ ಲಾಭ ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಕ್ಟೋಬರ್ ಜಾತಕ: ಅಕ್ಟೋಬರ್ ತಿಂಗಳಲ್ಲಿ ಎರಡು ಪ್ರಮುಖ ಹಬ್ಬಗಳ ಆಚರಣೆ ನಡೆಯಲಿದೆ. ಈ ತಿಂಗಳಲ್ಲಿ ದಸರಾ ಮತ್ತು ದೀಪಾವಳಿಯಂತಹ ದೊಡ್ಡ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಇದಲ್ಲದೆ, ಅಕ್ಟೋಬರ್ ತಿಂಗಳಲ್ಲಿ ಪ್ರಮುಖ ಗ್ರಹಗಳ ಸಂಚಾರವು ಕೆಲವು ರಾಶಿಯ ಜನರಿಗೆ ಮಂಗಳಕರ ಫಲಿತಾಂಶಗಳನ್ನು ತರಲಿವೆ ಎಂದು ಹೇಳಲಾಗುತ್ತದೆ. ಈ ತಿಂಗಳು ದಸರಾ ಮತ್ತು ದೀಪಾವಳಿಯು ಆರು ರಾಶಿಯ ಜನರಿಗೆ ಬಂಪರ್ ಆರ್ಥಿಕ ಲಾಭವನ್ನು ತರಲಿವೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
ಈ ರಾಶಿಯವರಿಗೆ ಬಂಪರ್ ಲಾಭ ತರಲಿವೆ ದಸರಾ ಮತ್ತು ದೀಪಾವಳಿ:
ಮೇಷ ರಾಶಿ:
ಅಕ್ಟೋಬರ್ ತಿಂಗಳು ಮೇಷ ರಾಶಿಯವರಿಗೆ ಬಂಪರ್ ಆರ್ಥಿಕ ಲಾಭವನ್ನು ನೀಡುತ್ತದೆ. ಇದ್ದಕ್ಕಿದ್ದಂತೆ ಎಲ್ಲಿಂದಲೋ ಹಣವನ್ನು ಪಡೆಯುವುದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಉದ್ಯೋಗಸ್ಥರಿಗೆ ಸಂಬಳ ಹೆಚ್ಚಾಗುತ್ತದೆ, ಮಾತ್ರವಲ್ಲ ಆದಾಯದ ಹೊಸ ಮಾರ್ಗಗಳು ಕಂಡುಬರುತ್ತವೆ.
ವೃಷಭ ರಾಶಿ:
ಅಕ್ಟೋಬರ್ ತಿಂಗಳಿನಲ್ಲಿ ವೃಷಭ ರಾಶಿಯವರಿಗೆ ಖರ್ಚು ಹೆಚ್ಚಾಗುತ್ತದೆ, ಆದರೆ ಹಣದ ಲಾಭವೂ ಇರುತ್ತದೆ. ಉದ್ಯೋಗಸ್ಥರಿಗೆ ಬಡ್ತಿ-ಇನ್‌ಕ್ರಿಮೆಂಟ್‌ನಿಂದ ದೊಡ್ಡ ಪರಿಹಾರವನ್ನು ಪಡೆಯುತ್ತಾರೆ. ಆರ್ಥಿಕ ಪರಿಸ್ಥಿತಿಯು ಬಲವಾಗಿರುತ್ತದೆ ಮತ್ತು ನೀವು ಹೂಡಿಕೆಗಾಗಿ ಹೊಸ ಯೋಜನೆಗಳನ್ನು ಮಾಡಲು ಸಾಧ್ಯವಾಗುತ್ತದೆ.
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಅಕ್ಟೋಬರ್‌ನಲ್ಲಿ ಕೈ ತುಂಬಾ ಹಣ ಸಿಗುತ್ತದೆ. ಇದರಿಂದ ಇದ್ದಕ್ಕಿದ್ದಂತೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ವ್ಯಾಪಾರಸ್ಥರು ಸಾಕಷ್ಟು ಹಣ ಗಳಿಸುವರು. ಸರ್ಕಾರಿ ವಲಯದಲ್ಲಿ ಕೆಲಸ ಮಾಡುವವರಿಗೂ ಲಾಭವಾಗಲಿದೆ. ಆದರೆ, ನಿಮ್ಮ ಖರ್ಚು-ವೆಚ್ಚಗಳನ್ನು ನಿಯಂತ್ರಿಸುವುದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.
ಇದನ್ನೂ ಓದಿ- ಧಂತೇರಸ್‌ನಲ್ಲಿ ಈ ವಸ್ತುಗಳ ಖರೀದಿಯಿಂದ ಅಪಾರ ಸಂಪತ್ತು ಪ್ರಾಪ್ತಿ
ತುಲಾ ರಾಶಿ:
ಅಕ್ಟೋಬರ್ ತಿಂಗಳು ತುಲಾ ರಾಶಿಯವರಿಗೆ ಆರ್ಥಿಕ ಲಾಭವನ್ನು ನೀಡುತ್ತದೆ. ಮುಂಬರುವ ದಿನಗಳಲ್ಲಿ ನೀವು ಕೈತುಂಬಾ ಹಣ ಗಳಿಸುವ ಉತ್ತಮ ಅವಕಾಶಗಳನ್ನು ಪಡೆಯಲಿದ್ದೀರಿ. ಉದಾಹರಣೆಗೆ, ಪ್ರಮೋಷನ್-ಇನ್ಕ್ರಿಮೆಂಟ್ ಪಡೆಯಬಹುದು. ನೀವು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು.
ಧನು ರಾಶಿ:
ಧನು ರಾಶಿಯವರಿಗೆ ಅಕ್ಟೋಬರ್ ನಲ್ಲಿ ಪಿತ್ರಾರ್ಜಿತ ಆಸ್ತಿಯಿಂದ ಲಾಭವಾಗಲಿದೆ. ಆದಾಯವೂ ಹೆಚ್ಚಲಿದೆ. ವ್ಯಾಪಾರದಲ್ಲಿ ಸಾಕಷ್ಟು ಲಾಭವಾಗಲಿದೆ. ನೀವು ಅತಿಯಾದ ಆತ್ಮವಿಶ್ವಾಸದಿಂದ ದೂರವಿದ್ದರೆ, ಈ ಸಮಯವು ವರವಾಗಿ ಪರಿಣಮಿಸಬಹುದು.
ಇದನ್ನೂ ಓದಿ- Dhanteras 2022: ಧಂತೇರಸ್‌ನಲ್ಲಿ ಈ ವಿಷಯಗಳ ಬಗ್ಗೆ ವಿಶೇಷ ಗಮನಹರಿಸಿದರೆ ಎಂದಿಗೂ ಇರುವುದಿಲ್ಲ ಹಣದ ಕೊರತೆ
ಕುಂಭ ರಾಶಿ:
ಅಕ್ಟೋಬರ್ ಕುಂಭ ರಾಶಿಯವರಿಗೆ ಆರ್ಥಿಕ ಬಲವನ್ನು ನೀಡುತ್ತದೆ. ವ್ಯಾಪಾರ-ವ್ಯವಹಾರದಲ್ಲಿ ನಿಮ್ಮ ನಿರೀಕ್ಷೆಗಿಂತ ಹೆಚ್ಚಿನ ಲಾಭ ದೊರೆಯಲಿದೆ. ವಿದೇಶದಿಂದ ಹಣ ಪಡೆಯಬಹುದು. ಆದಾಯದ ಹೊಸ ಮೂಲಗಳು ಹೆಚ್ಚಾಗಲಿದ್ದು ಭೂಮಿ ಖರೀದಿ ಯೋಗವಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.