ಬೆಂಗಳೂರು: ಸಾಮಾನ್ಯವಾಗಿ ಶನಿಯ ಸಾಡೇಸಾತಿ ನೀಡುತ್ತದೆ, ಹೀಗಾಗಿ ಜನರು ಅದನ್ನು ಕೇಳಿದರೆ ಸಾಕು ಹೆದರುತ್ತಾರೆ. ವಿಶೇಷವಾಗಿ ಶನಿಯು ಜಾತಕದಲ್ಲಿ ಅಶುಭವಾಗಿದ್ದರೆ ಅಥವಾ ಆ ಜಾತಕದ ಕರ್ಮಗಳೂ ಕೆಟ್ಟದಾಗಿದ್ದರೆ ಶನಿಯು ಹೆಚ್ಚು ತೊಂದರೆ ಕೊಡುತ್ತಾನೆ. ಹೀಗಾಗಿ ಶನಿದೇವನ ದೃಷ್ಟಿಕೋನದಿಂದ ವಿಶೇಷವಾದ ಸಂದರ್ಭಗಳಲ್ಲಿ ಶನಿ ಪರಿಹಾರಗಳನ್ನು ಮಾಡಬೇಕು. 2023 ರ ಶ್ರಾವಣ ಮಾಸ ಉತ್ತರ ಭಾರತದ ಪಾಲಿಗೆ ಆರಂಭಗೊಂಡಿದೆ. ಅಷ್ಟೇ ವಿಶೇಷವಾಗಿದೆ, ಶನಿವಾರದಂದು ಶ್ರಾವಣ ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಈ ಶನಿ ಪ್ರದೋಷದಂದು ಕೆಲವು ಕ್ರಮಗಳನ್ನು ತೆಗೆದುಕೊಂಡರೆ, ಶನಿದೇವನ ಬಾಧೆಗಳಿಂದ ಹೆಚ್ಚಿನ ಪರಿಹಾರವನ್ನು ಪಡೆದುಕೊಳ್ಳಬಹುದು. ಶ್ರಾವಣ ಶನಿ ಪ್ರದೋಷವು 15 ಜುಲೈ 2023 ರಂದು ಬೀಳುತ್ತಿದೆ. ಇದು ಶ್ರಾವಣದ  ಮೊದಲ ಪ್ರದೋಷ ವ್ರತವಾಗಿದೆ. ಈ ದಿನದಂದು ಮಹಾದೇವನ ಜೊತೆಗೆ ಶನಿ ದೇವನನ್ನು ಪೂಜಿಸುವುದರಿಂದ ಸಾಕಷ್ಟು ಲಾಭಗಳು ಸಿಗುತ್ತವೆ.


COMMERCIAL BREAK
SCROLL TO CONTINUE READING

ಈ ರಾಶಿಗಳ ಜನರಿಗೆ ಶನಿ ಸಾಡೆಸಾತಿ ಮತ್ತು ಎರಡೂವರೆ ವರ್ಷಗಳ ಕಾಟ
ಪ್ರಸ್ತುತ ಮೇಷ ಮತ್ತು ವೃಶ್ಚಿಕ ರಾಶಿಯ ಜನರು ಶನಿಯ ಸಾಡೇಸಾತಿಯಿಂದ ಪ್ರಭಾವಿತರಾಗಿದ್ದಾರೆ (Spiritual News In Kannada). ಮತ್ತೊಂದೆಡೆ ಮಕರ, ಕುಂಭ ಮತ್ತು ಮೀನ ರಾಶಿಯವರಿಗೂ ಕೂಡ ಶನಿ ಸಾಡೇಸಾತಿ ಪ್ರಭಾವ ನಡೆಯುತ್ತಿದೆ. ಈ ರಾಶಿಗಳ ಜನರು ಜುಲೈ 15 ರಂದು ಶನಿ ಪ್ರದೋಷದ ದಿನ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಶನಿಯ ಸಾಡೇಸಾತಿಯಿಂದ ಉಂಟಾಗುವ ಮಾನಸಿಕ, ದೈಹಿಕ ಮತ್ತು ಆರ್ಥಿಕ ತೊಂದರೆಗಳು ದೂರವಾಗುತ್ತವೆ.

ಇದನ್ನೂ ಓದಿ-Mercury Rise 2023: ನಾಳೆ ಬುಧ ಉದಯ, 4 ರಾಶಿಗಳ ಜನರ ಮಲಗಿರುವ ಭಾಗ್ಯ ಎಚ್ಚೆತ್ತುಕೊಳ್ಳಲಿದೆ, ಧನಲಾಭದ ಜೊತೆಗೆ ಪದೋನ್ನತಿ ಅವಕಾಶ!


ಶನಿ ಪರಿಹಾರಗಳು
ಶನಿಯಿಂದ ಉಂಟಾಗುವ ತೊಂದರೆಗಳನ್ನು ತೊಡೆದುಹಾಕಲು, ಜುಲೈ 15, 2023 ರಂದು, ಶನಿವಾರ, ಪ್ರದೋಷ ವ್ರತದ (Shani Pradosh) ದಿನದಂದು, ಪ್ರದೋಷ ಕಾಲದಲ್ಲಿ ಮಹಾದೇವನನ್ನು ಪೂಜಿಸಿ. ಪ್ರದೋಷ ವ್ರತವನ್ನು ಮಾಡಿ, ವಿಧಿವಿಧಾನಗಳೊಂದಿಗೆ ಶಿವನನ್ನು ಆರಾಧಿಸಿ. ಅಲ್ಲದೆ, ಸಂಜೆ, ಅಶ್ವತ್ಥ  ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ, ಕಪ್ಪು ಬಟ್ಟೆಯನ್ನು ಕಟ್ಟಿ ಮತ್ತು ಶನಿ ದೇವರಿಗೆ ಉಂಡೆಯನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಶನಿದೇವನು ನಿಮ್ಮನ್ನು ಆಶೀರ್ವದಿಸುತ್ತಾನೆ. ವಾಸ್ತವದಲ್ಲಿ, ಶ್ರಾವಣದಲ್ಲಿ ಶನಿ ಪ್ರದೋಷ ವ್ರತವನ್ನು ಆಚರಿಸಿದಾಗ ಇಂತಹ ಅವಕಾಶ ತುಂಬಾ ವಿರಳವಾಗಿ ಬರುತ್ತವೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-ಐವತ್ತು ವರ್ಷಗಳ ಬಳಿಕ ಯುವಾವಸ್ಥೆಯ ಗುರು ಹಾಗೂ ಮಂಗಳರಿಂದ ನವಪಂಚಮ ರಾಜಯೋಗ ನಿರ್ಮಾಣ, ಯಾರಿಗೆ ಲಾಭ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.