Lunar Eclipse 2023 Effect: 2023ರ ಮೇ ತಿಂಗಳಿನಲ್ಲಿ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. 2023 ರ ಮೊದಲ ಚಂದ್ರಗ್ರಹಣವು ಶುಕ್ರವಾರ, ಮೇ 5, 2023 ರಂದು ಸಂಭವಿಸುತ್ತದೆ. ಈ ದಿನ ರಾತ್ರಿ 8.45ರಿಂದ ಗ್ರಹಣ ಕಾಲ ಆರಂಭವಾಗಲಿದೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಗ್ರಹಣ ಕೊನೆಗೊಳ್ಳಲಿದೆ. 


COMMERCIAL BREAK
SCROLL TO CONTINUE READING

ಗ್ರಹಣದ ಸೂತಕ ಕಾಲ:  
ಮೊದಲ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಅದರ ಸೂತಕ ಅವಧಿಯು ಭಾರತದಲ್ಲಿ ಮಾನ್ಯವಾಗಿರುವುದಿಲ್ಲ. ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸದಿರಬಹುದು, ಆದರೆ ಇದು ಜ್ಯೋತಿಷ್ಯ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಇದರ ಪ್ರಭಾವ ಎಲ್ಲಾ 12 ರಾಶಿಗಳ ಮೇಲೆ ಕಂಡು ಬರುತ್ತದೆ. ಆದಾಗ್ಯೂ, ಈ ವರ್ಷದ ಮೊದಲ ಚಂದ್ರಗ್ರಹಣವು ಮೂರು ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ- Trigrahi Yoga: ಮೇಷ ರಾಶಿಯಲ್ಲಿ ನಿರ್ಮಾಣಗೊಳ್ಳಲಿರುವ ತ್ರಿಗ್ರಾಹಿ ಯೋಗದಿಂದ ಹೆಚ್ಚಾಗಲಿದೆ ಈ 3 ರಾಶಿಯವರ ಸಂಕಷ್ಟ


ವರ್ಷದ ಮೊದಲ ಚಂದ್ರಗ್ರಹಣದ ಪ್ರಭಾವ- ಈ ರಾಶಿಯವರಿಗೆ ತುಂಬಾ ಅದೃಷ್ಟ 
ಮೇಷ ರಾಶಿ : 

ಮೇಷ ರಾಶಿಯವರಿಗೆ ಚಂದ್ರಗ್ರಹಣವು ತುಂಬಾ ಶುಭಕರವಾಗಿರುತ್ತದೆ. ನೀವು ಉತ್ತಮ ಆರ್ಥಿಕ ಏರಿಳಿತಗಳನ್ನು ನೋಡಬಹುದಾದರೂ, ನೀವು ಉಳಿತಾಯಕ್ಕಾಗಿ ಆಯ್ಕೆಗಳನ್ನು ಕಂಡುಕೊಳ್ಳಬಹುದು. ವೃತ್ತಿ ಬದುಕಿನಲ್ಲಿ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ.  


ಸಿಂಹ ರಾಶಿ:
ವರ್ಷದ ಮೊದಲ ಚಂದ್ರಗ್ರಹಣವು ಸಿಂಹ ರಾಶಿಯವರಿಗೆ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪರಿಣಾಮ ಬೀರಲಿಡ್. ಈ ಸಮಯದಲ್ಲಿ ನೀವು ಕೆಲವು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಆರ್ಥಿಕ ಲಾಭ ದೊರೆಯಲಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಕೆಲಸಗಳು ಈ ಸಮಯದಲ್ಲಿ ಪೂರ್ಣಗೊಳ್ಳಲಿವೆ.  


ಇದನ್ನೂ ಓದಿ- ಏಪ್ರಿಲ್‌ನಲ್ಲಿ ರೂಪುಗೊಳ್ಳಲಿವೆ 2 ವಿನಾಶಕಾರಿ ಯೋಗ: ಈ ರಾಶಿಯವರು ಜಾಗರೂಕರಗಿರಿ


ಮಕರ ರಾಶಿ: 
2023ರ ಮೊದಲ ಚಂದ್ರಗ್ರಹಣವು ಮಕರ ರಾಶಿಯವರಿಗೂ ಕೂಡ ತುಂಬಾ ಮಂಗಳಕರವೆಂದೇ ಹೇಳಬಹುದು. ಈ ಸಮಯದಲ್ಲಿ ನಿಮ್ಮ ಬಹುದಿನಗಳ ಆಸೆ ಈಡೇರಲಿದೆ. ಹಠಾತ್ ಧನಲಾಭ ಸಾಧ್ಯತೆ ಇದ್ದು ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ಈ ರಾಶಿಯವರಿಗೆ ಭೂಮಿ, ವಾಹನ ಖರೀದಿ ಯೋಗವೂ ಇದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.