ಏಪ್ರಿಲ್‌ನಲ್ಲಿ ರೂಪುಗೊಳ್ಳಲಿವೆ 2 ವಿನಾಶಕಾರಿ ಯೋಗ: ಈ ರಾಶಿಯವರು ಜಾಗರೂಕರಗಿರಿ

Dangerous Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್‌ನಲ್ಲಿ ಎರಡು ವಿನಾಶಕಾರಿ ಯೋಗಗಳು ರೂಪುಗೊಳ್ಳುತ್ತಿದ್ದು, ಈ ಸಮಯದಲ್ಲಿ ಕೆಲವು ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ, ಅವರ ಜೀವನದಲ್ಲಿ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Apr 3, 2023, 06:25 PM IST
  • ಗ್ರಹಗಳ ರಾಜ ಸೂರ್ಯನು ಈಗಾಗಲೇ ರಾಹು ಕುಳಿತಿರುವ ಮೇಷ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ.
  • ರಾಹು ಮತ್ತು ಸೂರ್ಯನ ಸಂಯೋಜನೆಯಿಂದ ಗ್ರಹಣ ಯೋಗವು ರೂಪುಗೊಳ್ಳುತ್ತದೆ
  • ಇದಲ್ಲದೆ, ಗುರು-ರಾಹು ಒಟ್ಟಿಗೆ ಸೇರಿ ಮೇಷ ರಾಶಿಯಲ್ಲಿ ಚಂಡಾಲ ಯೋಗವನ್ನು ರೂಪಿಸುತ್ತಿದ್ದಾರೆ.
ಏಪ್ರಿಲ್‌ನಲ್ಲಿ ರೂಪುಗೊಳ್ಳಲಿವೆ 2 ವಿನಾಶಕಾರಿ ಯೋಗ: ಈ ರಾಶಿಯವರು ಜಾಗರೂಕರಗಿರಿ  title=

Dangerous Yoga in April: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹ ಗೋಚಾರಗಳ ದೃಷ್ಟಿಯಿಂದ ಏಪ್ರಿಲ್ ತಿಂಗಳನ್ನು ಬಹಳ ಮಹತ್ವದ ತಿಂಗಳು ಎಂದು ಹೇಳಲಾಗುತ್ತಿದೆ. ಈ ತಿಂಗಳು ಗ್ರಹಗಳ ರಾಜನಾದ ಸೂರ್ಯ, ಗ್ರಹಗಳ ರಾಜಕುಮಾರನಾದ ಬುಧ, ದೇವ-ದೇವತೆಗಳ ಗುರು ಎಂದು ಬಣ್ಣಿಸಲ್ಪಡುವ ಬೃಹಸ್ಪತಿ ಎರಡೂ ಗ್ರಹಗಳು ಸಹ ಮೇಷ ರಾಶಿಯನ್ನು ಪ್ರವೇಶಿಸಲಿವೆ. 

ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ, ಏಪ್ರಿಲ್ 14 ರಂದು, ಸೂರ್ಯಾದೇವ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ನಂತರ, ಏಪ್ರಿಲ್ 21 ರಂದು ಬುಧ ಮತ್ತು ಏಪ್ರಿಲ್ 22ರಂದು ಬೃಹಸ್ಪತಿ ಇದೇ ರಾಶಿಯಲ್ಲಿ ಸಂಕ್ರಮಿಸಲಿದ್ದಾರೆ. ಈಗಾಗಲೇ ರಾಹು ಮೇಷ ರಾಶಿಯಲ್ಲಿಯೇ ನೆಲೆಸಿರುವುದರಿಂದ ರಾಹುವು ಸೂರ್ಯನ ಜೊತೆಗೂಡಿ ಗ್ರಹಣ ಯೋಗವನ್ನು ರೂಪಿಸಿದರೆ, ಅದೇ ರಾಹು ಗುರು ಜೊತೆಗೂಡಿ ಗುರು ಚಂಡಾಲ ಯೋಗವನ್ನು ರೂಪಿಸುವನು. ಏಪ್ರಿಲ್‌ನಲ್ಲಿ ರೂಪುಗೊಳ್ಳಲಿರುವ ಈ ಎರಡೂ ಯೋಗಗಳನ್ನೂ ಕೂಡ ಬಹಳ ಅಪಾಯಕಾರಿ ಯೋಗಗ್ಲೌ ಎಂದು ಹೇಳಲಾಗುತ್ತದೆ. ಈ ವಿನಾಶಕಾರಿ ಯೋಗಗಳು ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಆದರೂ, ಈ ಸಮಯದಲ್ಲಿ ಕೆಲವು ರಾಶಿಯವರು ಬಹಳ ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ... 

ಇದನ್ನೂ ಓದಿ- Rajayoga: 50 ವರ್ಷಗಳ ಬಳಿಕ ರೂಪುಗೊಂಡ ‘ವಿಪರೀತ ರಾಜಯೋಗ’: ಈ ರಾಶಿಯವರಿಗೆ ಹಠಾತ್ ಧನಲಾಭ, ಪ್ರಗತಿ ಖಂಡಿತ

ಏಪ್ರಿಲ್‌ನಲ್ಲಿ ರೂಪುಗೊಳ್ಳಲಿರುವ ವಿನಾಶಕಾರಿ ಯೋಗಗಳಿಂದ ಈ ರಾಶಿಯವರಿಗೆ ಸಂಕಷ್ಟ: 
ಸಿಂಹ ರಾಶಿ: 

ಏಪ್ರಿಲ್‌ನಲ್ಲಿ ನಿರ್ಮಾಣಗೊಳ್ಳಲಿರುವ ಎರಡು ವಿನಾಶಕಾರಿ ಯೋಗಗಳು ಶಿಮ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಸ್ಥಿರವಾಗಿರುವುದಿಲ್ಲ. ನಿಮ್ಮ ಖರ್ಚಿನ ಮೇಲೆ ನಿಗಾ ಇರಿಸಿ ಮತ್ತು ಯಾವುದೇ ಅನಗತ್ಯ ವ್ಯವಹಾರಗಳನ್ನು ಮಾಡಬೇಡಿ. 

ತುಲಾ ರಾಶಿ: 
ತುಲಾ ರಾಶಿಯವರಿಗೆ ಏಪ್ರಿಲ್ ತಿಂಗಳಿನಲ್ಲಿ ಸಂಭವಿಸಲಿರುವ ವಿನಾಶಕಾರಿ ಚಂಡಾಲ ಯೋಗ ಮತ್ತು ಗ್ರಹಣ ಯೋಗವು ಕಷ್ಟಗಳ ಸರಮಾಲೆಯನ್ನು ತಂದೊಡ್ಡಬಹುದು.  ತುಲಾ ರಾಶಿಯ ಜನರು ಈ ಅವಧಿಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಇದಲ್ಲದೇ ಸಂಸಾರದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲೂ ಕೂಡ ನೀವು ಸಂಕಷ್ಟಗಳನ್ನು ಎದುರಿಸಬೇಕಾಗಬಹುದು. 

ಇದನ್ನೂ ಓದಿ- Lakshmi Narayana Yog: ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿ!

ವೃಶ್ಚಿಕ ರಾಶಿ: 
ಏಪ್ರಿಲ್‌ನಲ್ಲಿ ನಿರ್ಮಾಣಗೊಳ್ಳಲಿರುವ ಎರಡು ವಿನಾಶಕಾರಿ ಯೋಗಗಳ ಪ್ರಭಾವದಿಂದಾಗಿ ಈ ತಿಂಗಳು ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲಗಳನ್ನು ನೀಡುತ್ತದೆ. 
ಈ ಯೋಗವು ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲವನ್ನು ನೀಡುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ, ಅನಾವಶ್ಯಕ ವಾದ-ವಿವಾದಗಳನ್ನು ತಪ್ಪಿಸುವುದರ ಮೂಲಕ ನೀವು ಈ ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸಬಹುದು. ಯಾವುದೇ ವ್ಯವಹಾರದಲ್ಲಿ ಯೋಚಿಸದೆ ಹೂಡಿಕೆ ಮಾಡುವುದನ್ನು ತಪ್ಪಿಸಿ. ಇಲ್ಲದಿದ್ದರೆ, ಆರ್ಥಿಕ ನಷ್ಟ ಸಾಧ್ಯತೆಯಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News