ವರ್ಷದ ಮೊದಲ ಸೂರ್ಯ ಗ್ರಹಣದ ನಂತರ ಈ ರಾಶಿಯವರ ಜೀವನದಲ್ಲಿ ಉಕ್ಕುವುದು ಧನ
ಸೂರ್ಯ ಗ್ರಹಣವೇ ಆಗಲಿ ಚಂದ್ರ ಗ್ರಹಣವೇ ಆಗಲಿ ಅದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಬಾರಿಯ ಸೂರ್ಯಗ್ರಹಣವು ಮೂರು ರಾಶಿಯವರ ಅದೃಷ್ಟವನ್ನು ಬೆಳಗಲಿದೆ. ಈ ರಾಶಿಯವರ ಪ್ತ್ರಗತಿಯ ಹಾದಿ ತೆರೆದುಕೊಳ್ಳುತ್ತದೆ.
ಬೆಂಗಳೂರು : ಸೂರ್ಯಗ್ರಹಣ ಮತ್ತು ಚಂದ್ರಗ್ರಹಣವು ಖಗೋಳ ಘಟನೆಯಾಗಿದ್ದರೂ, ಜ್ಯೋತಿಷ್ಯದಲ್ಲಿಯೂ ಇದು ಬಹಳ ಪ್ರಾಮುಖ್ಯತೆ ಪಡೆದಿದೆ. ಇದರ ಪ್ರಕಾರ, ಸೂರ್ಯ ಗ್ರಹಣವೇ ಆಗಲಿ ಚಂದ್ರ ಗ್ರಹಣವೇ ಆಗಲಿ ಅದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. 2023 ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 20 ರಂದು ಸಂಭವಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 7 ಗಂಟೆ 3 ನಿಮಿಷದಿಂದ ಮಧ್ಯಾಹ್ನ 12.28 ರವರೆಗೆ ಇರುತ್ತದೆ. ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾದಂತಹ ಸ್ಥಳಗಳಲ್ಲಿ ಈ ಗ್ರಹಣ ಗೋಚರಿಸಲಿದೆ. ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ, ಜ್ಯೋತಿಷ್ಯದ ಪ್ರಕಾರ ಇದು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಈ ಬಾರಿಯ ಸೂರ್ಯಗ್ರಹಣವು ಮೂರು ರಾಶಿಯವರ ಅದೃಷ್ಟವನ್ನು ಬೆಳಗಲಿದೆ. ಈ ರಾಶಿಯವರ ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ.
ವೃಷಭ ರಾಶಿ :
ವೃಷಭ ರಾಶಿಯವರಿಗೆ ಸೂರ್ಯಗ್ರಹಣವು ತುಂಬಾ ಪ್ರಯೋಜನಕಾರಿಯಾಗಿರಲಿದೆ. ಉದ್ಯೋಗಸ್ಥರಿಗೆ ಈ ಸಮಯ ಬಹಳ ವಿಶೇಷವಾಗಿರುತ್ತದೆ. ಹೊಸ ಉದ್ಯೋಗಾವಕಾಶಗಳು ಒದಗಿ ಬರುವುದು. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಇನ್ಕ್ರಿಮೆಂಟ್ ಮತ್ತು ಬಡ್ತಿ ಸಿಗುವುದು. ಈ ಸಮಯದಲ್ಲಿ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಭೌತಿಕ ಸೌಕರ್ಯಗಳು ಹೆಚ್ಚಾಗುತ್ತವೆ.
ಇದನ್ನೂ ಓದಿ : ಕುಂಭ ರಾಶಿಯಲ್ಲಿ ಶನಿ-ಸೂರ್ಯ, 30 ವರ್ಷಗಳ ಬಳಿಕ ಶಿವರಾತ್ರಿ ದಿನ ದುಗ್ಧ ಶರ್ಕರಾ ಯೋಗ ನಿರ್ಮಾಣ, 3 ರಾಶಿಯವರಿಗೆ ಭಾಗ್ಯೋದಯ!
ಮಿಥುನ ರಾಶಿ :
ಏಪ್ರಿಲ್ ನಲ್ಲಿ ಸಂಭವಿಸಲಿರುವ ಸೂರ್ಯಗ್ರಹಣವು ಮಿಥುನ ರಾಶಿಯವರ ಪಾಲಿಗೆ ಅದೃಷ್ಟ ತರಲಿದೆ. ಇವರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭವಾಗಲಿದೆ. ರಾಜಕೀಯಕ್ಕೆ ಸಂಬಂಧಿಸಿದವರು ಉನ್ನತ ಸ್ಥಾನಕ್ಕೆ ಏರುವುದು ಸಾಧ್ಯವಾಗುತ್ತದೆ. ನ್ಯಾಯಾಲಯದಲ್ಲಿ ಯಾವುದಾದರೂ ಪ್ರಕರಣವಿದ್ದರೆ ಯಶಸ್ಸು ಸಿಗುತ್ತದೆ. ಯಾರಿಗಾದರೂ ಸಾಲ ಕೊಟ್ಟಿದ್ದರೆ ಕೊಟ್ಟ ಸಾಲ ಮರಳಿ ಬರುತ್ತದೆ.
ಧನು ರಾಶಿ :
ಸೂರ್ಯಗ್ರಹಣವು ಧನು ರಾಶಿಯವರ ಆತ್ಮಸ್ಥೈರ್ಯವನ್ನು ಹೆಚ್ಚಿಸಲಿದೆ. ಈ ಗ್ರಹಣವು ಉದ್ಯಮಿಗಳಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ವ್ಯವಹಾರದಲ್ಲಿ ಲಾಭ ಇರುತ್ತದೆ. ಯಾವ ಕೆಲಸ ಮಾಡುವುದಾದರೂ ಅದೃಷ್ಟ ಬೆನ್ನ ಹಿಂದಿರುತ್ತದೆ. ಹೀಗಾಗಿ ಹಿಡಿದ ಕೆಲಸ ಕೈಗೂಡುವುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಇದನ್ನೂ ಓದಿ : Astro Tips for Money : ಸಂಬಳ ಬಂದ ತಕ್ಷಣ ಈ 3 ಕೆಲಸ ಮಾಡಿ : ಸಂಪತ್ತು, ಸಮೃದ್ಧಿ ನಾಲ್ಕು ಪಟ್ಟು ಹೆಚ್ಚಾಗುತ್ತೆ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.