ತುಳಸಿ ದಳಗಳ ಈ ಉಪಾಯಗಳನ್ನು ಅನುಸರಿಸಿದರೆ ತಾಯಿ ಲಕ್ಷ್ಮಿಯ ಕೃಪಾದೃಷ್ಟಿ ಸದಾ ನಿಮ್ಮ ಮೇಲಿರುತ್ತದೆ!
Astro Remedies For Tulsi: ಹಿಂದೂ ಧರ್ಮ ಶಾಸ್ತ್ರಗಳಲ್ಲಿ ತುಳಸಿಗೆ ಪೂಜ್ಯನೀಯ ಸ್ಥಾನ ಪ್ರಾಪ್ತಿಯಾಗಿದೆ. ದಾರ್ಮಿಕ ದೃಷ್ಟಿಕೋನದಲ್ಲಿ ತುಳಸಿಯಲ್ಲಿ ದೇವಿ ಲಕ್ಷ್ಮಿಯ ವಾಸಸ್ಥಾನ ಇರುತ್ತದೆ ಎನ್ನಲಾಗುತ್ತದೆ. ಹೀಗಾಗಿ ನಿಯಮಿತವಾಗಿ ತುಳಸಿಯನ್ನು ಪೂಜಿಸುವುದರಿಂದ ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮಮೇಲಿರುತ್ತದೆ.
Astro Remedies For Tulsi: ಹಿಂದೂ ಧರ್ಮ ಶಾಸ್ತ್ರಗಳಲ್ಲಿ ತುಳಸಿಗೆ ಪೂಜ್ಯನೀಯ ಸ್ಥಾನ ಪ್ರಾಪ್ತಿಯಾಗಿದೆ. ದಾರ್ಮಿಕ ದೃಷ್ಟಿಕೋನದಲ್ಲಿ ತುಳಸಿಯಲ್ಲಿ ದೇವಿ ಲಕ್ಷ್ಮಿಯ ವಾಸಸ್ಥಾನ ಇರುತ್ತದೆ ಎನ್ನಲಾಗುತ್ತದೆ. ಹೀಗಾಗಿ ನಿಯಮಿತವಾಗಿ ತುಳಸಿಯನ್ನು ಪೂಜಿಸುವುದರಿಂದ ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮಮೇಲಿರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿನ ತುಳಸಿ ಗಿಡ ನಕಾರಾತ್ಮಕ ಶಕ್ತಿಯನ್ನು ತೊಲಗಿಸುತ್ತದೆ. ಆದರೆ, ತುಳಸಿ ಗಿಡದ ಮೇಲಿರುವ ಮಂಜಿರಿಗೂ ಕೂಡ ಧಾರ್ಮಿಕ ಮಹತ್ವವಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹಲವು ಉಪಾಯಗಳಲ್ಲಿ ಮಂಜಿರಿ ಬಳಸಿ ತಾಯಿ ಲಕ್ಷ್ಮಿಯ ಕೃಪೆಯನ್ನು ಪಡೆಯಬಹುದು.
ತಾಯಿ ಲಕ್ಷ್ಮಿಗೆ ಅರ್ಪಿಸಿ: ನಿಯಮಿತವಾಗಿ ಶುಕ್ರವಾರದ ದಿನ ತಾಯಿ ಲಕ್ಷ್ಮಿಯ ಚರಣ ಕಮಲದಲ್ಲಿ ತುಳಸಿಯ ಮಂಜಿರಿಗಳನ್ನು ಅರ್ಪಿಸುವುದರಿಂದ ದೇವಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ ಮತ್ತು ನಿಮ್ಮೆಲ್ಲಾ ಮನೋಕಾಮನೆಗಳು ನೆರವೇರುತ್ತವೆ.
ಮೋಕ್ಷ ಪ್ರಾಪ್ತಿಗಾಗಿ ಈ ರೀತಿ ಬಳಸಿ: ಧಾರ್ಮಿಕ ನಂಬಿಕೆಗಳ ಪ್ರಕಾರ ತುಳಸಿಯ ಮಂಜಿರಿಗಳನ್ನು ಶ್ರೀವಿಷ್ಣು ಹಾಗೂ ಶಿವನಿಗೆ ಅರ್ಪಿಸುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ವ್ಯಕ್ತಿಗೆ ಜನ್ಮ-ಮರಣದ ಚಕ್ರದಿಂದ ಮುಕ್ತಿ ಪ್ರಾಪ್ತಿಯಾಗಿ ಈಶ್ವರನ ಚರಣಕಮಲಗಳಲ್ಲಿ ಸ್ಥಾನ ಸಿಗುತ್ತದೆ ಎನ್ನಲಾಗಿದೆ.
ಕೆಂಪು ವಸ್ತ್ರದಲ್ಲಿ ಕಟ್ಟಿಕೊಳ್ಳಿ: ಲಕ್ಷ್ಮಿಯ ಕೃಪೆಯನ್ನು ಪಡೆದುಕೊಳ್ಳಲು ಒಂದು ಕೆಂಪು ಬಣ್ಣದ ವಸ್ತ್ರದಲ್ಲಿ ತುಳಸಿಯ ಮಂಜಿರಿಗಳನ್ನು ಒಟ್ಟಿಗೆ ಇರಿಸಿ, ಅದನ್ನು ನೀವು ಹಣವಿಡುವ ಜಾಗದಲ್ಲಿ ಇಡಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ದೇವಿ ಲಕ್ಷ್ಮಿ ವಾಸವಾಗುತ್ತಾಳೆ ಹಾಗೂ ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಎಂದಿಗೂ ಕೂಡ ಎದುರಾಗುವುದಿಲ್ಲ.
ಗಂಗಾಜಲದಲ್ಲಿ ಬೆರೆಸಿ: ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ತೊಲಗಿಸಲು ತುಳಸಿಯ ಮಂಜಿರಿಗಳನ್ನು ಬಳಸಲಾಗುತ್ತದೆ ಎನ್ನಲಾಗಿದೆ. ಇದಕ್ಕಾಗಿ ಶುಭ ಮುಹೂರ್ತದಲ್ಲಿ ಗಂಗಾಜಲದಲ್ಲಿ ಮಂಜಿರಿಗಳನ್ನು ಹಾಕಿ ಮನೆಯಲ್ಲಿರಿಸಬೇಕು ಮತ್ತು ವಾರದಲ್ಲಿ ಎರಡು ದಿನ ಈ ಗಂಗಾಜಲವನ್ನು ಮನೆತುಂಬ ಸಿಂಪಡಿಸುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ತೊಲಗುತ್ತದೆ ಎನ್ನಲಾಗುತ್ತದೆ.
ಶಿವನಿಗೆ ಮಂಜಿರಿಗಳನ್ನು ಅರ್ಪಿಸಿ: ಹಾಗೆ ನೋಡಿದರೆ ಶಿವನಿಗೆ ಹಾಗೂ ಶ್ರೀಗಣೇಶನಿಗೆ ಅಪ್ಪಿತಪ್ಪಿಯೂ ಕೂಡ ತುಳಸಿಯನ್ನು ಅರ್ಪಿಸಬಾರದು ಎಂದು ಹೇಳಲಾಗುತ್ತದೆ. ಆದರೆ, ನೀವು ತುಳಸಿಯ ಮಂಜಿರಿಗಳನ್ನು ಶಿವನಿಗೆ ಅರ್ಪಿಸಬಹುದು ಎನ್ನಲಾಗುತ್ತದೆ. ಶಿವನಿಗೆ ತುಳಸಿಯ ಮಂಜಿರಿಗಳನ್ನು ಅರ್ಪಿಸಿದರೆ, ಕೌಟುಂಬಿಕ ಸುಖ ಪ್ರಾಪ್ತಿಯಾಗುತ್ತದೆ. ಇದಲ್ಲದೆ, ಯಾವುದೇ ಓರ್ವ ವ್ಯಕ್ತಿಯ ಜೀವನದಲ್ಲಿ ಪ್ರೀತಿಯ ಕೊರತೆ ಇದ್ದರೆ ಅಥವಾ ವಿವಾಹದಲ್ಲಿ ಅಡಚಣೆಗಳಿದ್ದರೆ, ಹಾಲಿನಲ್ಲಿ ಮಂಜಿರಿಗಳನ್ನು ಹಾಕಿ ಅಭಿಷೇಕ ಮಾಡಿದರೆ ಲಾಭ ಸಿಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.
ಇದನ್ನೂ ಓದಿ-Lakshmi Narayana Yog: ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.