Food Astrology: ಹಿಂದೂ ಧರ್ಮಶಾಸ್ತ್ರಗಳಲ್ಲಿ ವಾರದ ಪ್ರತಿ ಯಾವುದಾದರೊಂದು ದೇವ-ದೇವತೆಗೆ ಸಮರ್ಪಿತವಾಗಿದೆ. ಹೀಗಾಗಿ ಪ್ರತಿದಿನವೂ ಕೆಲವು ವಿಶೇಷ ನಿಯಮಗಳನ್ನು ಹೇಳಲಾಗಿದೆ. ಇದರಲ್ಲಿ ಆಯಾ ದಿನದಂದು ಕೆಲವು ಕೆಲಸಗಳನ್ನು ಮಾಡುವುದನ್ನು ನಿಷಿದ್ಧ ಎಂದೂ ಕೂಡ ಹೇಳಲಾಗಿದೆ. ಇದರಂತೆಯೇ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ವಾರದ ಎಲ್ಲಾ ದಿನಗಳಿಗೆ ಸಂಬಂಧಿಸಿದಂತೆ ಕೆಲ ನಿಯಮಗಳನ್ನು ಉಲ್ಲೇಖ್ಸಯಾಲಾಗಿದೆ. ಇದರಲ್ಲಿ ಒಂದು ನಿಯಮವು ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದೆ. ಅಂದರೆ, ವಾರದ ಏಳು ದಿನಗಳಲ್ಲಿ ಪ್ರತಿದಿನ ಯಾವುದಾದರೊಂದು ಆಹಾರ ಪದಾರ್ಥದ ಸೇವನೆಯನ್ನು ನಿಷಿದ್ಧ ಎನ್ನಲಾಗಿದೆ. ಅವುಗಳನ್ನು ಅನುಸರಿಸಲು ವಿಫಲನಾಗುವ ವ್ಯಕ್ತಿಯು ತೊಂದರೆಗೆ ಸಿಲುಕುತ್ತಾನೆ ಎಂದು ನಂಬಲಾಗಿದೆ. ವಾರದ ಯಾವ ದಿನ ಯಾವ ಪದಾರ್ಥವನ್ನು ಸೇವಿಸಬಾರದು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ. 


COMMERCIAL BREAK
SCROLL TO CONTINUE READING

ವಾರಗಳಿಗೆ ಅನುಗುಣವಾಗಿ ಈ ನಿಯಮಗಳನ್ನು ಅನುಸರಿಸಿ
ವಾರದ ಪ್ರತಿಯೊಂದು ದಿನದಲ್ಲಿ ಕೆಲ ವಿಶೇಷ ಆಹಾರ ಪದಾರ್ಥಗಳ ಸೇವನೆಯನ್ನು ವರ್ಜ್ಯ ಎನ್ನಲಾಗಿದೆ. ಇಲ್ಲದಿದ್ದರೆ ಜಾತಕದಲ್ಲಿನ ಗ್ರಹಗಳು ನಕಾರಾತ್ಮಕ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತವೆ ಎಂದು ಹೇಳಲಾಗಿದೆ


ಸೋಮವಾರ: ಸೋಮವಾರ ಚಂದ್ರನಿಗೆ ಸಂಬಂಧಿಸಿದೆ. ಈ ದಿನ ಸಕ್ಕರೆಯನ್ನು ಸೇವಿಸಬೇಡಿ, ಇಲ್ಲದಿದ್ದರೆ ಚಂದ್ರನು ಅಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತಾನೆ.


ಮಂಗಳವಾರ: ಮಂಗಳವಾರ ಮಂಗಳ ಗ್ರಹಕ್ಕೆ ಸಂಬಂಧಿಸಿದೆ. ಈ ದಿನ ತುಪ್ಪವನ್ನು ಸೇವಿಸಬಾರದು. ಇಲ್ಲದಿದ್ದರೆ, ಧೈರ್ಯ ಮತ್ತು ಶಕ್ತಿಯಲ್ಲಿ ಕೊರತೆಯನ್ನು ಅನುಭವಿಸುವಿರಿ.


ಬುಧವಾರ: ಬುಧವಾರ ಬುಧ ಗ್ರಹಕ್ಕೆ ಸಂಬಂಧಿಸಿದೆ. ಬುಧ ವ್ಯಕ್ತಿಗೆ ಬುದ್ಧಿವಂತಿಕೆ, ಚಾತುರ್ಯ, ತರ್ಕ, ಸಂಪತ್ತನ್ನು ನೀಡುತ್ತದೆ. ಈ ದಿನ ಹಸಿರು ತರಕಾರಿಗಳನ್ನು ಸೇವಿಸಿದರೆ ಬುಧ ಗ್ರಹದ ಕೆಟ್ಟ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ. ಬುಧವಾರ ಯಾವಾಗಲೂ ಹಸಿರು ವಸ್ತುಗಳನ್ನು ದಾನ ಮಾಡಿ.


ಗುರುವಾರ: ಗುರುವಾರ ಗುರು ಗ್ರಹಕ್ಕೆ ಸಂಬಂಧಿಸಿದೆ. ಈ ದಿನ ಹಳದಿ ಪದಾರ್ಥಗಳನ್ನು ಸೇವಿಸಬೇಕು ಮತ್ತು ಹಾಲು-ಬಾಳೆಹಣ್ಣನ್ನು ತ್ಯಜಿಸಬೇಕು.


ಶುಕ್ರವಾರ: ಶುಕ್ರವಾರ ಶುಕ್ರ ಗ್ರಹ ಮತ್ತು ತಾಯಿ ಲಕ್ಷ್ಮಿಗೆ ಸಂಬಂಧಿಸಿದೆ. ಈ ದಿನ ಹುಳಿ ಪದಾರ್ಥಗಳನ್ನು ಸೇವಿಸಬಾರದು. ಮತ್ತೊಂದೆಡೆ, ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು, ಹಾಲು ಮತ್ತು ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ದಾನ ಮಾಡಬೇಕು.


ಶನಿವಾರ: ಶನಿವಾರ ಶನಿಗೆ ಸಂಬಂಧಿಸಿದೆ. ಈ ದಿನ ಎಣ್ಣೆಯಿಂದ ಮಾಡಿದ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಿ ಮತ್ತು ಎಣ್ಣೆಯನ್ನು ದಾನ ಮಾಡಿ.


ಇದನ್ನೂ ಓದಿ-Budha Gochara 2023: ನಾಳೆ ಕರ್ಕ ರಾಶಿಗೆ ಬುಧನ ಪ್ರವೇಶ, 4 ರಾಶಿಗಳ ಜನರ ಭಾಗ್ಯ-ನೌಕರಿ-ವ್ಯಾಪಾರದಲ್ಲಿ ಅಪಾರ ಉನ್ನತಿಯ ಯೋಗ!


ಭಾನುವಾರ: ಭಾನುವಾರ ಸೂರ್ಯನಿಗೆ ಸಂಬಂಧಿಸಿದೆ. ಸೂರ್ಯನ ಅಶುಭ ಫಲಿತಾಂಶಗಳನ್ನು ತಪ್ಪಿಸಲು ಭಾನುವಾರದಂದು ಉಪ್ಪು ಸೇವಿಸಬೇಡಿ.


ಇದನ್ನೂ ಓದಿ-Shravan 2023: ನಿರ್ಮಾಣಗೊಂಡಿದೆ ಅತ್ಯಂತ ವಿನಾಶಕಾರಿ 'ವಿಷಯೋಗ', ಆದರೆ 3 ರಾಶಿಗಳ ಮೇಲೆ ಅಪಾರ ಧನವೃಷ್ಟಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.