Shravan 2023: ನಿರ್ಮಾಣಗೊಂಡಿದೆ ಅತ್ಯಂತ ವಿನಾಶಕಾರಿ 'ವಿಷಯೋಗ', ಆದರೆ 3 ರಾಶಿಗಳ ಮೇಲೆ ಅಪಾರ ಧನವೃಷ್ಟಿ!

Shravan 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ಶ್ರಾವಣ ಮಾಸದ ವೇಳೆ ಶನಿ ಹಾಗೂ ಚಂದಿರನ ಮೈತ್ರಿಯ ಕಾರಣ  ಒಂದು ವಿನಾಶಕಾರಿ ಯೋಗ  ನಿರ್ಮಾಣಗೊಳ್ಳುತ್ತಿದೆ. ಈ ಯೋಗ ಎಂದರೆ ಅದು 'ವಿಷ ಯೋಗ' ಸಾಮಾನ್ಯವಾಗಿ ವಿಷ ಯೋಗವನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಇದನ್ನು ವಿನಾಶಕಾರಿ ಯೋಗ ಎಂದೇ ಕರೆಯಲಾಗುತ್ತದೆ.  ಆದರೆ, ಶಿವನ ಶ್ರಾವಣ ಮಾಸದಲ್ಲಿ ಇದು ನಿರ್ಮಾಣಗೊಳ್ಳುತ್ತಿರುವ ಕಾರಣ ಇದು ಕೆಲ ರಾಶಿಗಳ ಅದೃಷ್ಟದಲ್ಲಿ ಭಾರಿ ಹೊಳಪನ್ನು ತರಲಿದೆ.   

Written by - Nitin Tabib | Last Updated : Jul 6, 2023, 04:43 PM IST
  • ಈ ರಾಶಿಗಳ ವ್ಯಾಪಾರಿಗಳಿಗೆ ಉನ್ನತಿಯ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ವಿದೇಶಕ್ಕೆ ಹೋಗುವ ನಿಮ್ಮ ಕನಸು ನನಸಾಗಲಿದೆ. ಈ ಅವಧಿಯಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.
  • ಹೀಗಾಗಿ ಪರಿಶ್ರಮಪಡಲು ಹಿಂದೇಟು ಹಾಕಬೇಡಿ. ಆದರೆ ಇನ್ನೊಂದೆಡೆ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿವಹಿಸಿ. ಕುಟುಂಬದ ಜೊತೆಗೆ ಕಾಲ ಕಳೆಯುವಲ್ಲಿ ಯಶಸ್ವಿಯಾಗುವಿರಿ.
  • ಪ್ರೇಮ-ಸಂಬಂಧಗಳ ಕುರಿತು ಹೇಳುವುದಾದರೆ ಸಮಯ ಉತ್ತಮವಾಗಿದೆ. ದೀರ್ಘ ಕಾಲದಿಂದ ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿ ಅಥವಾ ನಿಮ್ಮನ್ನು ಅಗಲಿದ ಹಳೆ ವ್ಯಕ್ತಿಯ ಆಗಮಂಕ್ಕಾಗಿ ಕಾಯುತ್ತಿದ್ದಾರೆ ನಿಮ್ಮ ನಿರೀಕ್ಷೆಗೆ ತೆರೆ ಬೀಳಲಿದೆ.
Shravan 2023: ನಿರ್ಮಾಣಗೊಂಡಿದೆ ಅತ್ಯಂತ ವಿನಾಶಕಾರಿ 'ವಿಷಯೋಗ', ಆದರೆ 3 ರಾಶಿಗಳ ಮೇಲೆ ಅಪಾರ ಧನವೃಷ್ಟಿ! title=

Shravan Month 2023: ವೈದಿಕ ಪಂಚಾಂಗದ ಪ್ರಕಾರ, ನವಗ್ರಹಗಳ ಸ್ಥಿತಿಗತಿ, ನಡೆ ಪರಿವರ್ತನೆ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರುತ್ತದೆ ಎನ್ನಲಾಗುತ್ತದೆ. ಇದೆ ರೀತಿ ಕೆಲವೊಮ್ಮೆ ಒಂದೇ ರಾಶಿಯಲ್ಲಿ ಹಲವು ಗ್ರಹಗಳು ಬಂದು ಕುರಿತಾಗ ಅದರಿಂದ ಅವುಗಳ ಮಧ್ಯೆ ಮೈತ್ರಿ ಏರ್ಪಟ್ಟು (Spiritual News In Kannada) ಶುಭ ಹಾಗೂ ಅಶುಭ ಯೋಗಗಳು ಸೃಷ್ಟಿಯಾಗುತ್ತವೆ. ಈ ಸರಣಿಯಲ್ಲಿ ಇದೀಗ ಚಂದ್ರ ಹಾಗೂ ಶನಿಯ ಮೈತ್ರಿ ನೆರವೇರುತ್ತಿದ್ದು, ಇದರಿಂದ 'ವಿಷ ಯೋಗ' ನಿರ್ಮಾಣಗೊಳ್ಳುತ್ತಿದೆ. ಸಾಮಾನ್ಯವಾಗಿ ಇದನ್ನು ವಿನಾಶಕಾರಿ ಯೋಗ ಎಂದೇ ಪರಿಗಣಿಸಲಾಗುತ್ತದೆ. ಆದರೆ, ಕೆಲ ರಾಶಿಗಳ ಜನರ ಪಾಲಿಗೆ ಈ ಯೋಗ (Vish Yog In Aquarius 2023) ಸಾಕಷ್ಟು ಧನಲಾಭವನ್ನು ಕೂಡ ತರುತ್ತದೆ. ಹಾಗಾದರೆ ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವೂ ತಿಳಿದುಕೊಳ್ಳೋಣ, 

ಯಾವಾಗ ನಿರ್ಮಾಣಗೊಂಡಿದೆ ಈ ವಿನಾಶಕಾರಿ ಯೋಗ? -ವೈದಿಕ ಪಂಚಾಂಗದ (Astrology) ಪ್ರಕಾರ, ಇಂದು ಅಂದರೆ ಜುಲಾಯ್ 6, 2023 ರಂದು ಮಧ್ಯಾಹ್ನ 1 ಗಂಟೆ 38 ನಿಮಿಷಕ್ಕೆ ಚಂದ್ರ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಚಂದ್ರ ಈ ರಾಶಿಯಲ್ಲಿ ಜುಲೈ 8, 2023ರ ಮಧ್ಯಾಹ್ನ 2 ಗಂಟೆ 58 ನಿಮಿಷಗಳವರೆಗೆ ಇರಲಿದ್ದಾನೆ. ಆದರೆ, ಈಗಾಗಲೇ ಶನಿ ಮಹಾರಾಜ ತನ್ನ ಸ್ವರಾಶಿಯಾಗಿರುವ ಕುಂಭರಾಶಿಯಾಗಿರುವ ವಕ್ರ ಭಾವದಲ್ಲಿ ವಿರಾಜಮಾನನಾಗಿರುವ ಕಾರಣ, ಚಂದ್ರ-ಶನಿಯ ಈ ಯುತಿಯಿಂದ ವಿಷಯೋಗ ನಿರ್ಮಾಣಗೊಂಡಿದೆ.

ಕುಂಭ ರಾಶಿಯಲ್ಲಿನ ವಿಷಯೋಗ ವಿಶೇಷ ಲಾಭ ನೀಡುತ್ತದೆ- ಸಾಮಾನ್ಯವಾಗಿ ಶನಿ ಹಾಗೂ ಚಂದ್ರರ ನಡುವೆ ಮೈತ್ರಿ ನೆರವೇರಿದರೆ ಅದನ್ನು ಕಷ್ಟ ನೀಡುವ ಮೈತ್ರಿ ಎಂದೇ ಪರಿಗಣಿಸಲಾಗುತ್ತದೆ. ಚಂದ್ರನ ಮೇಲೆ ಶನಿಯ ನೆರಳು ಮಾನಸಿಕ ಶಕ್ತಿಯ ಮೇಲೆ ಕೆಟ್ಟ ಪ್ರಭಾವವನ್ನುಂಟು ಮಾಡುತ್ತದೆ. ಇದಲ್ಲದೆ ಭಾಗ್ಯೋದಯ ಕೂಡ ಪ್ರಭಾವಕ್ಕೆ ಒಳಗಾಗುತ್ತದೆ. ಇನೋಂದೆಡೆ ಒಂದು ವೇಳೆ ಈ ಮೈತ್ರಿ ವೃಷಭ, ತುಲಾ, ಮಕರ ಅಥವಾ ಕುಂಭ ರಾಶಿಯಲ್ಲಿ ನೆರವೇರಿದರೆ ಇದನ್ನು ಅತ್ಯಂತ ಶುಭ ಮೈತ್ರಿ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಮಾನಸಿಕ ಶಕ್ತಿ ಹೆಚ್ಚಾಗುವುದರ ಜೊತೆಗೆ, 6ನೇ ಸೆನ್ಸ್ ಜಾಗ್ರತಗೊಂಡು ಭಾಗ್ಯದ ಬಾಗಿಲು ತೆರೆಯುತ್ತದೆ ಎನ್ನಲಾಗುತ್ತದೆ. ಹೀಗಿರುವಾಗ ಶನಿ ಹಾಗೂ ಚಂದ್ರರ ಈ ಮೈತ್ರಿ ಹಲವು ರಾಶಿಗಳ ಪಾಲಿಗೆ ಲಾಭಪ್ರದ ಸಿದ್ಧ ಸಾಬೀತಾಗುತ್ತದೆ. 

ವಿಷ ಯೋಗದಿಂದ ಯಾವ ರಾಶಿಗಳಿಗೆ ಲಾಭ? - ಈ ಬಾರಿಯ ಶ್ರಾವಣ ಮಾಸದಲ್ಲಿ ಶನಿ-ಚಂದ್ರರ ಯುತಿಯಿಂದ ನಿರ್ಮಾಣಗೊಳ್ಳುತ್ತಿರುವ ವಿಶಯೋಗ ಹಲವು ರಾಶಿಗಳ ಜನರ ಪಾಲಿಗೆ ಅತ್ಯಂತ ಶುಭ ಫಲದಾಯಿ ಸಾಬೀತಾಗಲಿದೆ. ಈ ರಾಶಿಗಳ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸಿನ ಜೊತೆಗೆ ಧನಲಾಭ ಸಿಗಲಿದೆ. ವೈದಿಕ ಪಂಚಾಂಗದ ಪ್ರಕಾರ ಜುಲೈ ತಿಂಗಳಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ವಿಶಯೋಗದಿಂದ ಸಿಂಹ, ತುಲಾ ಹಾಗೂ ಕುಂಭ ರಾಶಿಗಳ ಜಾತಕದವರಿಗೆ ಅಪಾರ ಲಾಭವನ್ನು ನೀಡುವ ಎಲ್ಲಾ ಸಾದ್ಯತೆಗಳು ಗೋಚರಿಸುತ್ತಿವೆ. 

ಇದನ್ನೂ ಓದಿ-Mars Transit 2023 Kanya: ಕನ್ಯಾ ರಾಶಿಗೆ ಭೂಮಿ ಪುತ್ರ ಮಂಗಳನ ಕನ್ಯಾ ಗೋಚರ, ಈ ರಾಶಿಗಳ ಸುದಿನಗಳು ಆರಂಭ!

ಈ ರಾಶಿಗಳ ವ್ಯಾಪಾರಿಗಳಿಗೆ ಉನ್ನತಿಯ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ವಿದೇಶಕ್ಕೆ ಹೋಗುವ ನಿಮ್ಮ ಕನಸು ನನಸಾಗಲಿದೆ. ಈ ಅವಧಿಯಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹೀಗಾಗಿ ಪರಿಶ್ರಮಪಡಲು ಹಿಂದೇಟು ಹಾಕಬೇಡಿ. ಆದರೆ ಇನ್ನೊಂದೆಡೆ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿವಹಿಸಿ. ಕುಟುಂಬದ ಜೊತೆಗೆ ಕಾಲ ಕಳೆಯುವಲ್ಲಿ ಯಶಸ್ವಿಯಾಗುವಿರಿ. ಪ್ರೇಮ-ಸಂಬಂಧಗಳ ಕುರಿತು ಹೇಳುವುದಾದರೆ ಸಮಯ ಉತ್ತಮವಾಗಿದೆ. ದೀರ್ಘ ಕಾಲದಿಂದ ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿ ಅಥವಾ ನಿಮ್ಮನ್ನು ಅಗಲಿದ ಹಳೆ ವ್ಯಕ್ತಿಯ ಆಗಮಂಕ್ಕಾಗಿ ಕಾಯುತ್ತಿದ್ದಾರೆ ನಿಮ್ಮ ನಿರೀಕ್ಷೆಗೆ ತೆರೆ ಬೀಳಲಿದೆ.

ಇದನ್ನೂ ಓದಿ-Budhaditya And Vipareet Rajyogas: ಜುಲೈ 17ಕ್ಕೆ ಸೂರ್ಯ-ಬುಧರ ಕೃಪೆಯಿಂದ ಈ ಜನರಿಗೆ ಹೊಡೆಯಲಿದೆ ಜಾಕ್ ಪಾಟ್!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News