ಬೆಂಗಳೂರು : ಶುಕ್ರ ಗ್ರಹವು ದೈಹಿಕ ಸಂತೋಷ, ಸಂಪತ್ತು, ಪ್ರೀತಿ, ಪ್ರಣಯ, ಸೌಂದರ್ಯ, ಆಕರ್ಷಣೆ ಮತ್ತು ಖ್ಯಾತಿಯನ್ನು ನೀಡುತ್ತದೆ. ಇವೆಲ್ಲವನ್ನೂ ನಮ್ಮ ಜೀವನದಲ್ಲಿ ಪಡೆಯಬೇಕಾದರೆ ಜಾತಕದಲ್ಲಿ ಶುಕ್ರ ಉತ್ತಮ ಸ್ಥಾನದಲ್ಲಿರುವುದು ಅವಶ್ಯಕ. ಇದರೊಂದಿಗೆ, ಕಾಲಕಾಲಕ್ಕೆ ಸಂಭವಿಸುವ ಶುಕ್ರನ ರಾಶಿ ಬದಲಾವಣೆಯ ಪರಿಣಾಮ ಕೂಡಾ ಜಾತಕದ ಮೇಲೆ ಬೀಳುತ್ತದೆ.  ಮುಂಬರುವ ಏಪ್ರಿಲ್ 6 ರಂದು, ಶುಕ್ರನು ತನ್ನ ರಾಶಿಯನ್ನು ಬದಲಾಯಿಸುವ ಮೂಲಕ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನು ತನ್ನದೇ ರಾಶಿಯಾಗಿರುವ ವೃಷಭ ರಾಶಿಯನ್ನು ಪ್ರವೇಶ ಮಾಡುವುದರಿಂದ ಮಾಳವ್ಯ ರಾಜಯೋಗ ಉಂಟಾಗುತ್ತದೆ. ಮಾಳವ್ಯ ರಾಜಯೋಗವು ಮೂರು ರಾಶಿಯ ಜನರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. 


COMMERCIAL BREAK
SCROLL TO CONTINUE READING

ಶುಕ್ರ ಸಂಚಾರವು ಮೂರು ರಾಶಿಯವರಿಗೆ ಭಾರೀ ಪ್ರಯೋಜನ ನೀಡಲಿದೆ : 
ಮೇಷ ರಾಶಿ : ಶುಕ್ರ ಸಂಕ್ರಮಣದಿಂದ ರೂಪುಗೊಂಡ ಮಾಳವ್ಯ  ರಾಜಯೋಗವು ಮೇಷ ರಾಶಿಯವರಿಗೆ ಭರ್ಜರಿ ಲಾಭವನ್ನು ನೀಡುತ್ತದೆ.  ಯಾವ ಮೂಲದಿಂದಲಾದರೂ ಸಾಕಷ್ಟು ಹಣ ಹರಿದು ಬರುತ್ತದೆ. ನಿಮ್ಮ ಜೀವನದ ಆಸೆ ಈಡೇರಲಿದೆ. ನಿಮ್ಮ ಜೀವನಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇದರಿಂದ ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವುದು  ಸಾಧ್ಯವಾಗುತ್ತದೆ. 


ಇದನ್ನೂ ಓದಿ : ತುಳಸಿ ಸಸಿಯ ಕೆಳಗೆ ಈ ಒಂದು ವಸ್ತುವನ್ನು ಇಟ್ಟರೆ ಮನೆಯೊಳಗೆ ಲಕ್ಷ್ಮೀ ಪ್ರವೇಶ ಖಂಡಿತಾ


ಕರ್ಕಾಟಕ ರಾಶಿ : ಶುಕ್ರನ ಸಂಚಾರವು ಕರ್ಕಾಟಕ ರಾಶಿಯವರಿಗೆ ಅನೇಕ ರೀತಿಯಲ್ಲಿ ಲಾಭವನ್ನು ನೀಡುತ್ತದೆ. ನಿಮ್ಮ ಬಹು ದಿನದ ಆಸೆ ನೆರವೇರಿ ಮನಸ್ಸಿಗೆ ಸಂತೋಷವಾಗುತ್ತದೆ. ಹೊಸ ಮನೆ-ಕಾರು ಅಥವಾ ಇನ್ನಾವುದೇ ಬೆಲೆಬಾಳುವ ವಸ್ತುಗಳನ್ನು ಖರೀದಿಸಬಹುದು. ಕುಟುಂಬದಲ್ಲಿ ಶುಭ ಕಾರ್ಯಕ್ರಮಗಳು ನಡೆಯಬಹುದು. ವೃತ್ತಿಯಲ್ಲಿ ಬಡ್ತಿ, ಸಂಬಳದಲ್ಲಿ ಹೆಚ್ಚಳವಾಗುವ ಬಲವಾದ ಅವಕಾಶಗಳಿವೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. 


ಸಿಂಹ ರಾಶಿ : ಸಿಂಹ ರಾಶಿಯವರಿಗೆ ಶುಕ್ರನ ಸಂಕ್ರಮಣದಿಂದ ವೃತ್ತಿಯಲ್ಲಿ ಪ್ರಗತಿಯಾಗಿ ಹಣಕಾಸಿನ ಲಾಭವಾಗುವುದು. ಈ ರಾಶಿಯವರ ಆದಾಯ ಹೆಚ್ಚಾಗಬಹುದು. ಕೆಲಸ ಬದಲಾಯಿಸಲು ಇದು ಸರಿಯಾದ ಸಮುಯ. ಹೊಸ ವ್ಯಾಪಾರ ಪ್ರಾರಂಭಿಸಬಹುದು. ಕೆಲವು ಉತ್ತಮ ಅವಕಾಶಗಳು ಬಂದೊದಗಲಿವೆ. ಸರಿಯಾಗಿ ಬಳಸಿದರೆ ಲಾಭವಾಗುವುದು ಗ್ಯಾರಂಟಿ.  


ಇದನ್ನೂ ಓದಿ : Akshaya Tritiya 2023 : ಈ ಅಕ್ಷಯ ತೃತೀಯ ದಿನ ಇವುಗಳಲ್ಲಿ ಒಂದನ್ನು ಮನೆಗೆ ತನ್ನಿ, ವರ್ಷವಿಡೀ ಆರ್ಥಿಕ ಲಾಭ!



https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.