ಬೆಂಗಳೂರು : ನ್ಯಾಯದ ದೇವರು ಎಂದೇ ಕರೆಸಿಕೊಳ್ಳುವ ಶನಿ ಮಹಾತ್ಮ  30 ವರ್ಷಗಳ ನಂತರ ಕುಂಭ ರಾಶಿ ಪ್ರವೇಶಿಸುತ್ತಿದ್ದಾರೆ. ಜನವರಿ 17 ರಂದು ರಾತ್ರಿ 8:02 ಕ್ಕೆ ಮಕರ ರಾಶಿಯಿಂದ ಕುಂಭ ರಾಶಿಗೆ ಶನಿಯ ಪ್ರವೇಶವಾಗಲಿದೆ. ಧನಿಷ್ಠ ನಕ್ಷತ್ರದಲ್ಲಿ ಶನಿಯ ಈ ರಾಶಿ ಬದಲಾವಣೆಯಾಗಲಿದೆ. ಶನಿ ಸಂಕ್ರಮಿಸಿದ ತಕ್ಷಣ, 5 ರಾಶಿಯವರ ಜೀವನದಲ್ಲಿ ಕಷ್ಟಗಳ ಸರಮಾಲೆ ಆರಂಭವಾಗಲಿದೆ. ಇವರ ಜಾತಕದಲ್ಲಿ ಸಾಡೇಸಾತಿ ಮತ್ತು ಧೈಯ್ಯಾ ಹಂತವು ಪ್ರಾರಂಭವಾಗುತ್ತದೆ. 


COMMERCIAL BREAK
SCROLL TO CONTINUE READING

ಮಕರ ರಾಶಿ : 
ಶನಿ ಸಂಕ್ರಮಣದೊಂದಿಗೆ, ಈ ರಾಶಿಯವರ ಜೀವನದಲ್ಲಿ ಶನಿ ಸಾಡೇಸಾತಿ ಆರಂಭವಾಗಲಿದೆ. ಇದು ಮಕರ ರಾಶಿಯವರ ಜಾತಕದ ಸಾಡೇಸಾತಿಯ ಕೊನೆಯ ಹಂತವಾಗಿರುತ್ತದೆ. ಈ ಹಂತದಲ್ಲಿ ಯಾವುದೇ ವಿಷಯದಲ್ಲಿ ನಿರ್ಲಕ್ಷ್ಯ ತೋರಲೇಬಾರದು. ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು. ಈ ಹಂತದಲ್ಲಿ ಗೌರವಕ್ಕೆ ಧಕ್ಕೆಯಾಗಬಹುದು.


ಇದನ್ನೂ ಓದಿ : Horoscope predictions : ಹಣಕಾಸಿನ ವಿಚಾರದಲ್ಲಿ ತುಂಬಾ ಜಾಗರೂಕರಾಗಿರಬೇಕು ಈ 3 ರಾಶಿಯವರು!


ವೃಶ್ಚಿಕ ರಾಶಿ :
ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ ಕೂಡಲೇ ವೃಶ್ಚಿಕ ರಾಶಿಯಲ್ಲಿ ಶನಿ ಧೈಯ್ಯಾ ಆರಂಭವಾಗುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ವಿವಾದ ಉಂಟಾಗಬಹುದು. ಕುಟುಂಬದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಲಿದೆ. ಹಣಕಾಸಿನ ಸಮಸ್ಯೆಗಳು ಉಂಟಾಗಬಹುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.


ಕುಂಭ ರಾಶಿ :
ಶನಿಯು 30 ವರ್ಷಗಳ ನಂತರ ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ.  ಈ ರಾಶಿಯವರಿಗೆ ಎರಡನೇ ಹಂತದ ಸಾಡೇಸಾತಿ ಶುರುವಾಗಲಿದೆ. ಎರಡನೇ ಹಂತ ಆರೋಗ್ಯದ ದೃಷ್ಟಿಯಿಂದ ಮುಖ್ಯವಾಗಿರುತ್ತದೆ. ಈ ರಾಶಿಯವರು ಈ ಅವಧಿಯಲ್ಲಿ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. 


ಇದನ್ನೂ ಓದಿ : Lucky Girls for Husband: ಈ ರೀತಿಯ ಹೆಂಡತಿಯರು ಗಂಡನ ಪಾಲಿಗೆ ಅದೃಷ್ಟವಂತರು! 


ಕರ್ಕಾಟಕ ರಾಶಿ :
ಶನಿಯ ರಾಶಿ ಬದಲಾವಣೆಯ ಪರಿಣಾಮವು ಕರ್ಕಾಟಕ ರಾಶಿಯವರ ಮೇಲೂ  ಬೀರಲಿದೆ. ಈ ರಾಶಿಯವರ ಜಾತಕದಲ್ಲಿ ಎರಡೂವರೆ ವರ್ಷದ ಶನಿ ದೆಸೆ ಆರಂಭವಾಗಲಿದೆ. ಇದರ ಪರಿಣಾಮವಾಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು. ಕೆಲಸದ ಸ್ಥಳದಲ್ಲಿ ಕಷ್ಟಕರ ಸಂದರ್ಭಗಳು ಎದುರಾಗಬಹುದು. ಹಣದ ನಷ್ಟದಿಂದಾಗಿ, ಆರ್ಥಿಕ ಬಿಕ್ಕಟ್ಟನ್ನು ಅನುಭವಿಸಬೇಕಾಗಬಹುದು.


ಮೀನ ರಾಶಿ :
ಶನಿ ಸಂಕ್ರಮಿಸಿದ ತಕ್ಷಣ ಮೀನ ರಾಶಿಯವರ ಜಾತಕದಲ್ಲಿ ಸಾಡೇಸಾತಿಯ ಮೊದಲ ಹಂತ ಶುರುವಾಗುತ್ತದೆ. ಈ ಸಮಯದಲ್ಲಿ, ಈ ರಾಶಿಯ ಜನರು ಬಹಳ ಎಚ್ಚರಿಕೆಯಿಂದ ನಡೆಯಬೇಕು. ಮಾತು ಮತ್ತು ಕೋಪದಲ್ಲಿ ಹಿಡಿತವಿರಲಿ, ಇಲ್ಲದಿದ್ದರೆ ಅನಗತ್ಯ ವಿವಾದಗಳಲ್ಲಿ ಸಿಲುಕಿಕೊಳ್ಳಬೇಕಾಗಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ವ್ಯಾಪಾರದಲ್ಲಿ ನಷ್ಟವನ್ನು ಎದುರಿಸಬೇಕಾಗುತ್ತದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.