Shukra Gochar November 2022 : ಸಂಪತ್ತು, ಐಶ್ವರ್ಯವನ್ನು ಕರುಣಿಸುವ ಶುಕ್ರನ ಸ್ಥಾನದಲ್ಲಿ ಆಗುವ ಸಣ್ಣ ಬದಲಾವಣೆಗಳು ಕೂಡಾ, ವ್ಯಕ್ತಿಯ ಜಾತಕದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಇಂದು, ಅಂದರೆ ನವೆಂಬರ್ 11, 2022, ಶುಕ್ರವಾರದಂದು ಶುಕ್ರ ಗ್ರಹ ತನ್ನ ರಾಶಿಯನ್ನು ಬದಲಾಯಿಸುತ್ತಿದೆ. ತನ್ನ ರಾಶಿಯನ್ನು ಬದಲಿಸಿ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತದೆ. ಶುಕ್ರನ ಈ ರಾಶಿಪರಿವರ್ತನೆಯು ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ಹಾಗಿದ್ದರೆ ವೃಶ್ಚಿಕ ರಾಶಿಯಲ್ಲಿ ಶುಕ್ರನ ಸಂಚಾರದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ  ನೋಡೋಣ. 


COMMERCIAL BREAK
SCROLL TO CONTINUE READING

ಈ ರಾಶಿಯವರಿಗೆ ಶುಕ್ರ ಸಂಕ್ರಮಣ ಶುಭ :  
ಸಿಂಹ ರಾಶಿ : ಶುಕ್ರನ ಸಂಕ್ರಮಣವು ಸಿಂಹ ರಾಶಿಯವರಿಗೆ ಬಲವಾದ  ಆರ್ಥಿಕ ಲಾಭವನ್ನು ನೀಡುತ್ತದೆ. ಸೌಕರ್ಯಗಳು ಹೆಚ್ಚಾಗಲಿವೆ. ಜೀವನದಲ್ಲಿ ಸಂತೋಷ ಮತ್ತು ಐಷಾರಾಮ ಹೆಚ್ಚುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ. ಉದ್ಯೋಗಾಕಾಂಕ್ಷಿಗಳು ಬಡ್ತಿ ಮತ್ತು ಇನ್ಕ್ರಿಮೆಂಟ್ ಪಡೆಯಬಹುದು. 


ಇದನ್ನೂ ಓದಿ : Astro Tips : ಸಕ್ಕರೆಯ ಈ ಸರಳ ಪರಿಹಾರದಿಂದ ನಿಮ್ಮ ಅದೃಷ್ಟದ ಹಾದಿ ತೆರೆಯುತ್ತದೆ


ತುಲಾ ರಾಶಿ : ತುಲಾ ರಾಶಿಯ ಅಧಿಪತಿ ಶುಕ್ರ . ನವೆಂಬರ್ 11, 2022 ರಂದು ಶುಕ್ರನ ರಾಶಿ ಬದಲಾವಣೆಯು ತುಲಾ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಹಣವನ್ನು ಪಡೆಯಬಹುದು. ಆದಾಯ ಹೆಚ್ಚಾಗಬಹುದು. ಆರ್ಥಿಕ ಸ್ಥಿತಿ ಸದೃಢವಾಗಿರಲಿದೆ. ಸಾಲ ಮರುಪಾವತಿ ಮಾಡುವಲ್ಲಿ ಯಶಸ್ವಿಯಾಗುವಿರಿ. ಹೂಡಿಕೆಗೆ ಉತ್ತಮ ಸಮಯ.


ಕುಂಭ ರಾಶಿ : ಶುಕ್ರ ಸಂಕ್ರಮಣವು ಕುಂಭ ರಾಶಿಯವರಿಗೆ ತುಂಬಾ ಫಲಕಾರಿಯಾಗಿದೆ. ವ್ಯಾಪಾರ ಚೆನ್ನಾಗಿ ನಡೆಯುತ್ತದೆ.  ನಿಮ್ಮ ಕೆಲಸದಿಂದ ಕಚೇರಿಯಲ್ಲಿ ಮೇಲಾಧಿಕಾರಿಗಳು ಸಂತೋಷಗೊಳ್ಳುತ್ತಾರೆ. ವ್ಯಾಪಾರಸ್ಥರ ವ್ಯಾಪಾರ ವೃದ್ಧಿಯಾಗಲಿದೆ. ಅಂದು ಕೊಂಡ ಕೆಲಸವನ್ನು ಸಾಧಿಸಲು ಉತ್ತಮ ಸಮಯ. ಆದಾಯ ಹೆಚ್ಚಲಿದೆ. 


ಇದನ್ನೂ ಓದಿ : ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲಿದ್ದಾನೆ ಶುಕ್ರ


ಮಕರ ರಾಶಿ :  ಶುಕ್ರ ಗ್ರಹದ ರಾಶಿ ಪರಿವರ್ತನೆ ಮಕರ ರಾಶಿಯವರಿಗೆ ಶುಭ ಫಲ ನೀಡಲಿದೆ.  ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಹೊಸ ಮನೆ-ಕಾರು ಖರೀದಿಸುವ ಯೋಗ ಕೂಡಿ ಬರಲಿದೆ. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.