ಬೆಂಗಳೂರು : ಶುಕ್ರ ಗ್ರಹವನ್ನು ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಆಕರ್ಷಣೆಯ ಅಂಶವೆಂದು ಪರಿಗಣಿಸಲಾಗುತ್ತದೆ. ವೃಷಭ ಮತ್ತು ತುಲಾ ರಾಶಿಯ ಅಧಿಪತಿ ಶುಕ್ರ. ನವೆಂಬರ್‌ನಲ್ಲಿ ಅನೇಕ ಗ್ರಹಗಳು ರಾಶಿಯನ್ನು ಬದಲಾಯಿಸುತ್ತವೆ. ಅದೇ ರೀತಿ ನವೆಂಬರ್ 11 ರಂದು ಶುಕ್ರ ಗ್ರಹ ಕೂಡಾ ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಸಾಗಲಿದ್ದಾನೆ. ಒಂದು ಗ್ರಹ ತನ್ನ ರಾಶಿಯನ್ನು ಬದಲಿಸಿದಾಗ ಅದರ ಪರಿಣಾಮ ದ್ವಾದಶ ರಾಶಿಗಳ ಮೇಲೂ ಬೀರುತ್ತದೆ. ಹಾಗೆಯೇ ಶುಕ್ರ ತನ್ನ ರಾಶಿ ಬದಲಾಯಿಸುತ್ತಿದ್ದು, ಮೂರು ರಾಶಿಯವರ ಜೀವನದ ಮೇಲೆ ಭಾರೀ ಪರಿಣಾಮ ಬೀರಲಿದೆ.
ತುಲಾ ರಾಶಿ :
ಈ ಬಾರಿಯ ಶುಕ್ರ ಸಂಕ್ರಮಣದಿಂದ ತುಲಾ ರಾಶಿಯವರು ತೊಂದರೆ ಎದುರಿಸಬೇಕಾಗುತ್ತದೆ. ಈ ರಾಶಿಯವರ ಜಾತಕದಲ್ಲಿ, ಶುಕ್ರನು ಎರಡನೇ ಮನೆಯಲ್ಲಿ ಕುಳಿತುಕೊಳ್ಳುತ್ತಾನೆ. ಇದರಿಂದಾಗಿ ಆರ್ಥಿಕ ನಷ್ಟ ಉಂಟಾಗಬಹುದು. ಹೀಗಿರುವಾಗ ಹೂಡಿಕೆಯಿಂದ ದೂರವಿರುವುದು ಅವಶ್ಯಕ.
ಇದನ್ನೂ ಓದಿ : ಅಷ್ಟಲಕ್ಷ್ಮಿ ರಾಜಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟ.! ಹರಿಯುವುದು ಹಣದ ಹೊಳೆ
ಮಿಥುನ ರಾಶಿ :
ಶುಕ್ರನ ರಾಶಿ ಬದಲಾವಣೆಯಿಂದ ಮಿಥುನ ರಾಶಿಯವರಿಗೆ ಸಮಸ್ಯೆಗಳು ಹೆಚ್ಚಾಗಬಹುದು. ಈ ಸಮಯದಲ್ಲಿ ಬಹಳಷ್ಟು ಖರ್ಚು ಇರುತ್ತದೆ. ಇದರಿಂದಾಗಿ ಅವರು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅವಶ್ಯಕತೆಯಿದೆ.
ವೃಶ್ಚಿಕ ರಾಶಿ :
ಶುಕ್ರ ಸಂಕ್ರಮಣದ ನಂತರ ಅದು ವೃಶ್ಚಿಕ ರಾಶಿಯ ಮೊದಲ ಮನೆಯಲ್ಲಿ ಉಳಿಯುತ್ತದೆ. ಇದರಿಂದ ಈ ರಾಶಿಯ ಜನರು ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ. ಖರ್ಚು ಜಾಸ್ತಿಯಾಗುತ್ತದೆ.
ಇದನ್ನೂ ಓದಿ : Baby Girl Names: 'A' ನಿಂದ ಶುರುವಾಗುವ ಮಕ್ಕಳ ಕ್ಯೂಟ್ ಹೆಸರುಗಳು ಇಲ್ಲಿವೆ ನೋಡಿ
ಕಟಕ ರಾಶಿ :
ಕರ್ಕಾಟಕ ರಾಶಿಯವರ ಜಾತಕದಲ್ಲಿ ಶುಕ್ರನ ಸಂಕ್ರಮಣವು ಐದನೇ ಮನೆಯಲ್ಲಿ ಸಂಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಚಕ್ರದ ಜನರಿಗೆ ಈ ಸಂಕ್ರಮವು ಶುಭವಾಗಿರುವುದಿಲ್ಲ. ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ವಿಶೇಷವಾಗಿ ವೈವಾಹಿಕ ಜೀವನದಲ್ಲಿ ಕೆಲವು ವ್ಯತ್ಯಾಸಗಳಾಗಬಹುದು.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.