Shani Nakshtra Transit Effect 2024 : ಜ್ಯೋತಿಷ್ಯದಲ್ಲಿ, ಶನಿದೇವನನ್ನು  ನ್ಯಾಯದ ದೇವರು ಅಥವಾ ಕರ್ಮ ಫಲದಾತ ಎಂದು ಕರೆಯಲಾಗುತ್ತದೆ. ವ್ಯಕ್ತಿಯು ತನ್ನ ಕಾರ್ಯಗಳಿಗೆ ಅನುಗುಣವಾಗಿ ಜೀವನದಲ್ಲಿ ಫಲ ಪಡೆಯುತ್ತಾನೆ. ಕಾರ್ಯಗಳ ಪ್ರಕಾರ ಫಲ ಕರುಣಿಸುವ ಶನಿ ಮಹಾತ್ಮ ಇಂದಿನಿಂದ ಶತಭಿಷಾ ನಕ್ಷತ್ರದ ಎರಡನೇ ಹಂತವನ್ನು ಪ್ರವೇಶಿಸುತ್ತಾನೆ. ಶನಿಯ ಸಂಚಾರದಲ್ಲಿನ ಈ ಬದಲಾವಣೆ  ಮೂರು  ರಾಶಿಯವರ ಜೀವನದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ.  


COMMERCIAL BREAK
SCROLL TO CONTINUE READING

ತುಲಾ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಶತಭಿಷಾ ನಕ್ಷತ್ರಕ್ಕೆ ಪ್ರವೇಶ ಮಾಡುವುದರಿಂದ ತುಲಾ ರಾಶಿಯವರಿಗೆ ಶುಭ ಫಲ ದೊರೆಯುತ್ತದೆ. ಈ ಅವಧಿಯಲ್ಲಿ,ಕೆಲಸದ ಸ್ಥಳದಲ್ಲಿ ವಿಶೇಷ ಬದಲಾವಣೆಗಳು ಕಂಡುಬರುತ್ತವೆ. ಉದ್ಯೋಗಿಗಳಿಗೆ ವೇತನದ ಬಗ್ಗೆ ಒಳ್ಳೆಯ ಸುದ್ದಿ ಸಿಗಬಹುದು.ಆದಾಯದಲ್ಲಿ ಹೆಚ್ಚಳವಾಗುವ ಎಲ್ಲಾ ಸಾಧ್ಯತೆಗಳಿವೆ.ವ್ಯಾಪಾರ ಮಾಡುವ ಜನರ ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ. ವ್ಯಾಪಾರಕ್ಕಾಗಿ ಮಾಡುವ ಪ್ರಯಾಣವು ಲಾಭದಾಯಕವಾಗಿರಲಿದೆ. 


ಇದನ್ನೂ ಓದಿ :  ಇಂದು ವರ್ಷದ ಮೊದಲ ಅಮವಾಸ್ಯೆ:ತುಳಸಿಗೆ ಸಂಬಂಧಿಸಿದ ಈ ಪರಿಹಾರವು ಲಕ್ಷಾಧಿಪತಿಯನ್ನಾಗಿ ಮಾಡುತ್ತದೆ..!  
 
ಮಕರ ರಾಶಿ :
ಶನಿಯ ರಾಶಿಯ ಬದಲಾವಣೆಯಿಂದಾಗಿ, ಮಕರ ರಾಶಿಯ ಉದ್ಯೋಗಿಗಳು ತಮ್ಮ ಕಚೇರಿ ಕಾರ್ಯಗಳಲ್ಲಿ ಮೇಲಾಧಿಕಾರಿಗಳ ಬೆಂಬಲವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಸ್ನೇಹಿತರಿಂದ ಆರ್ಥಿಕ ಲಾಭವಾಗುವ ಸಾಧ್ಯತೆಯಿದೆ.ಈ ರಾಶಿಯವರು ತಮ್ಮ ಶ್ರಮದ ಸಂಪೂರ್ಣ ಫಲವನ್ನು ಪಡೆಯುತ್ತಾರೆ. ಹೂಡಿಕೆಯಿಂದ ಆರ್ಥಿಕ ಲಾಭವಾಗುವುದು.  


ಕುಂಭ ರಾಶಿ : 
ಪ್ರಸ್ತುತ ಶನಿಯು ಕುಂಭ ರಾಶಿಯಲ್ಲಿದ್ದು ಶತಭಿಷಾ ನಕ್ಷತ್ರದ ಎರಡನೇ ಹಂತವನ್ನು ಪ್ರವೇಶಿಸಿದ್ದಾನೆ. ಶನಿಯ ನಕ್ಷತ್ರ ಬದಲಾವಣೆಯು ಕುಂಭ ರಾಶಿಯ ಜನರ ಜೀವನದಲ್ಲಿ ಮಂಗಳಕರವಾಗಿರಲಿದೆ. ಈ ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ಸ್ಥಿತಿ  ಉತ್ತಮವಾಗಿರುತ್ತದೆ. ಪ್ರಯಾಣದಿಂದಲೇ ಈ ರಾಶಿಯವರಿಗೆ ಹಣಕಾಸಿನ ಲಾಭವಾಗುವುದು.  


ಇದನ್ನೂ ಓದಿ : ಇನ್ನು ನಾಲ್ಕು ತಿಂಗಳು ಈ ರಾಶಿಯವರ ಬಾಳು ಬಂಗಾರ ! ಹಣ, ಪ್ರತಿಷ್ಠೆ, ಸ್ಥಾನಮಾನ ಕರುಣಿಸುತ್ತಾನೆ ಗುರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ