Ugadi Horoscope : ಈ ರಾಶಿಯವರ ಜೀವನದಲ್ಲಿ ಕಹಿ ಅಳಿಸಿ ಸಿಹಿಯನ್ನೇ ತುಂಬಲಿದೆ ಯುಗಾದಿ!
Ugadi Horoscope : ಹಿಂದೂ ಸಂಪ್ರದಾಯದ ಹೊಸ ವರ್ಷ ಶುಭಕೃತ್ ನೂತನ ನಾಮ ಸಂವತ್ಸರ ಇಂದಿನಿಂದ ಆರಂಭ. ಹಿಂದೂ ಹೊಸ ವರ್ಷದ ಆರಂಭದೊಂದಿಗೆ, ಅನೇಕ ರಾಶಿಯವರ ಜೀವನದಲ್ಲಿಯೂ ಹೊಸ ಯುಗ ಆರಂಭವಾಗಲಿದೆ.
ಬೆಂಗಳೂರು : ಇಂದು ಯಗಾದಿ ಹಬ್ಬ. ಇಂದಿನಿಂದ ಹಿಂದೂ ಹೊಸ ವರ್ಷ ಆರಂಭ. ಹಿಂದೂ ನಂಬಿಕೆಗಳ ಪ್ರಕಾರ ಯುಗಾದಿಯಿಂದ ಜಾತಕ ಫಲ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. ಜಾತಕ ಫಲ ಬದಲಾಗುವುದು ಎಂದರೆ ಅದೃಷ್ಟ ಬದಲಾಗುವುದು. ಯುಗಾದಿ ರಾಶಿ ಭವಿಷ್ಯ ಕೆಲವರ ಪಾಲಿಗೆ ಶುಭಾವಾಗಿದ್ದರೆ ಇನ್ನು ಕೆಲವರ ಪಾಲಿಗೆ ಅಶುಭಾವಾಗಿರಬಹುದು. ಜ್ಯೋತಿಷ್ಯದ ಪ್ರಕಾರ ಬುಧ ಈ ಹೊಸ ವರ್ಷದ ರಾಜ ಮತ್ತು ಶುಕ್ರ ಈ ಹೊಸ ವರ್ಷದ ಮಂತ್ರಿ. ಈ ಬಾರಿಯ ಯುಗಾದಿ ಮೂರು ರಾಶಿಯವರ ಜೀವನದಲ್ಲಿ ಕೇವಲ ಸಿಹಿಯನ್ನೇ ಹೊತ್ತು ತಂದಿದೆ.
ಹಿಂದೂ ಸಂಪ್ರದಾಯದ ಹೊಸ ವರ್ಷ ಶುಭಕೃತ್ ನೂತನ ನಾಮ ಸಂವತ್ಸರ ಇಂದಿನಿಂದ ಆರಂಭ. ಹಿಂದೂ ಹೊಸ ವರ್ಷದ ಆರಂಭದೊಂದಿಗೆ, ಅನೇಕ ರಾಶಿಯವರ ಜೀವನದಲ್ಲಿಯೂ ಹೊಸ ಯುಗ ಆರಂಭವಾಗಲಿದೆ. ಹಿಂದೂ ಹೊಸ ವರ್ಷ ಎಲ್ಲಾ ರಾಶಿಯವರಿಗೂ ವಿಶೇಷವಾಗಿರಲಿದೆ. ಅದರಲ್ಲೂ ಮೂರು ರಾಶಿಯವರ ಜೀವನದ ಶುಭ ಘಳಿಗೆ ಇಂದಿನಿದಲೇ ಆರಂಭ.
ಇದನ್ನೂ ಓದಿ : Astro Tips: ಈ 5 ವಸ್ತುಗಳು ಮನೆಯಲ್ಲಿ ಸುಖ-ಸಂತೋಷ, ಶಾಂತಿ ಮತ್ತು ಅಪಾರ ಹಣ ತರುತ್ತವೆ!
ಸಿಂಹ ರಾಶಿ : ಇಂದಿನಿಂದ ಸಿಂಹ ರಾಶಿಯವರ ಜೀವನದಲ್ಲಿ ಸಂತೋಷ ನು ಹೆಚ್ಚಲಿದೆ. ಈ ಸಮಯದಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸವೂ ಕೈ ಗೂಡಲಿದೆ. ಅದೃಷ್ಟ ಬೆನ್ನಿಗಿರಲಿದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವ ಜನರು ಲಾಭವನ್ನು ಪಡೆಯುತ್ತಾರೆ. ಹಳೆಯ ಹೂಡಿಕೆಗಳಿಂದ ಈ ಸಮಯದಲ್ಲಿ ಪ್ರಯೋಜನವಾಗಲಿದೆ.
ಮಿಥುನ ರಾಶಿ : ಯುಗಾದಿ ನಿಮ್ಮ ಪಾಲಿಗೆ ಅದೃಷ್ಟವನ್ನೇ ಹೊತ್ತು ತರಲಿದೆ. ಯಾವ ವ್ಯವಹಾರವೇ ಆಗಿರಲಿ ಅದರಲ್ಲಿ ಅದೃಷ್ಟ ಒಲಿದು ಬರಲಿದೆ. ಈ ವರ್ಷ ಪೂರ್ತಿ ಮಿಥುನ ರಾಶಿಯವರು ಶುಭ ಫಲಿತಾಂಶಗಳನ್ನೇ ಪಡೆಯಲಿದ್ದಾರೆ. ಸೂರ್ಯ ಕೂಡಾ ಈ ರಾಶಿಯವರ ಜಾತಕದಲ್ಲಿ ಅನುಕೂಲಕರ ಸ್ಥಾನದಲ್ಲಿದ್ದು ಶುಭ ಫಲ ನೀಡಲಿದ್ದಾನೆ. ಈ ಸಮಯದಲ್ಲಿ ನೀವು ಮಾಡುವ ಹೂಡಿಕೆಯಿಂದ ಲಾಭವಾಗುವುದು. ಹೊಸ ವ್ಯಾಪಾರ ಒಪ್ಪಂದ ಅಂತಿಮವಾಗಬಹುದು.
ಇದನ್ನೂ ಓದಿ : Ugadi 2023: ಮನೆಯಲ್ಲಿ ಹಣದ ಕೊರತೆಯನ್ನು ಶಾಶ್ವತವಾಗಿ ದೂರ ಮಾಡಲು ಯುಗಾದಿಯಂದು ಈ ವಸ್ತುಗಳನ್ನು ಖರೀದಿಸಿ
ಧನು ರಾಶಿ: ಯುಗಾದಿ ಧನು ರಾಶಿಯವರಿಗೆ ಅನುಕೂಲಕರವಾಗಿರಲಿದೆ. ಬಹಳ ಸಮಯದಿಂದ ನಿರೀಕ್ಷಿಸುತ್ತಿದ್ದ ಒಳ್ಳೆಯ ಸುದ್ದಿ ಕೇಳಿ ಬರಲಿದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಲಿದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ಅಧಿಕಾರಿಗಳಿಂದ ಬೆಂಬಲ ಮತ್ತು ಪ್ರೋತ್ಸಾಹ ಸಿಗಲಿದೆ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಜೀವನದಲ್ಲಿ ಎದುರಾಗುತ್ತಿದ್ದ ಎಲ್ಲಾ ರೀತಿಯ ಅಡೆ ತಡೆಗಳು ನಿವಾರಣೆಯಾಗುವುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.