ಇಂದು ರಾತ್ರಿಯಿಂದಲೇ ಈ ರಾಶಿಯಲ್ಲಿ ಗಜಕೇಸರಿ ಯೋಗ! ಇನ್ನು ಇವರು ಹೋದಲೆಲ್ಲಾ ಹಣ
ಜನವರಿ 25 ರಂದು, ಚಂದ್ರ ಸಂಕ್ರಮಿಸಿದ ನಂತರ, ಮೀನ ರಾಶಿಯನ್ನು ಪ್ರವೇಶಿಸುತ್ತದೆ. ಗುರು ಈಗಾಗಲೇ ಈ ರಾಶಿಯಲ್ಲಿದೆ. ಇದರಿಂದ ಗಜಕೇಸರಿ ಯೋಗ ಸೃಷ್ಟಿಯಾಗುತ್ತಿದೆ.
ಬೆಂಗಳೂರು : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಎರಡೂ ಗ್ರಹಗಳು ಒಂದೇ ರಾಶಿಯಲ್ಲಿ ಕುಳಿತಾಗ ಅದನ್ನು ಯುತಿ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಅನೇಕ ಶುಭ ಮತ್ತು ಅಶುಭ ಯೋಗಗಳು ಸೃಷ್ಟಿಯಾಗುತ್ತವೆ. ಚಂದ್ರ ಗ್ರಹವು ಪ್ರತಿ ಮೂರು ದಿನಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಜನವರಿ 25 ರಂದು, ಚಂದ್ರ ಸಂಕ್ರಮಿಸಿದ ನಂತರ, ಮೀನ ರಾಶಿಯನ್ನು ಪ್ರವೇಶಿಸುತ್ತದೆ. ಗುರು ಈಗಾಗಲೇ ಈ ರಾಶಿಯಲ್ಲಿರುವುದರಿಂದ ಗಜಕೇಸರಿ ಯೋಗ ಸೃಷ್ಟಿಯಾಗುತ್ತಿದೆ.
ವೃಷಭ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗಜಕೇಸರಿ ರಾಜಯೋಗವು ವೃಷಭ ರಾಶಿಯವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಲಿದೆ. ವೃಷಭ ರಾಶಿಯ ಕರ್ಮ ಸ್ಥಳದಲ್ಲಿ ಈ ರಾಜಯೋಗವು ರೂಪುಗೊಳ್ಳಲಿದೆ. ಇದರಿಂದಾಗಿ ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಸಂಪತ್ತು ವೃದ್ಧಿಯಾಗಲಿದೆ. ಈ ರಾಶಿಯವರ ಗೌರವ ಹೆಚ್ಚಾಗುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಈ ಸಮಯ ಅನುಕೂಲಕರವಾಗಿದೆ.
ಇದನ್ನೂ ಓದಿ : ಅಕ್ಟೋಬರ್ ತಿಂಗಳಿಂದ ಈ ರಾಶಿಯವರ ಜೀವನದಲ್ಲಿ ಧನಾಗಮನ
ಕರ್ಕಾಟಕ ರಾಶಿ :
ಗಜಕೇಸರಿ ರಾಜಯೋಗವು ಈ ರಾಶಿಯ ಒಂಭತ್ತನೇ ಮನೆಯಲ್ಲಿ ರೂಪುಗೊಳ್ಳಲಿದೆ. ಇದನ್ನು ತ್ರಿಕೋನ ಮನೆ ಎಂದೂ ಕರೆಯಲಾಗುತ್ತದೆ. ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಇರಲಿದೆ. ರಾಜಕೀಯಕ್ಕೆ ಸಂಬಂಧಿಸಿದವರು ಉನ್ನತ ಸ್ಥಾನಕ್ಕೆ ಏರಲಿದ್ದಾರೆ. ಈ ಅವಧಿಯಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ.
ಕನ್ಯಾರಾಶಿ:
ಕನ್ಯಾ ರಾಶಿಯವರಿಗೆ ಗಜಕೇಸರಿ ರಾಜಯೋಗವು ಶುಭ ಮತ್ತು ಫಲದಾಯಕವಾಗಿರುತ್ತದೆ. ಈ ರಾಶಿಯ ಏಳನೇ ಮನೆಯಲ್ಲಿ ಈ ರಾಜಯೋಗವು ರೂಪುಗೊಳ್ಳಲಿದೆ. ಪಾಲುದಾರಿಕೆಯಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಿದರೆ ಲಾಭವಾಗುವುದು. ವ್ಯವಹಾರವನ್ನು ವಿಸ್ತರಿಸಲು ಸಾಧ್ಯವಾಗುತ್ತದೆ. ಹೊರಗುಳಿದಿರುವ ಹಣ ಕೈ ಸೇರುತ್ತದೆ. ಈ ಸಂದರ್ಭದಲ್ಲಿ ಯಾವ ಕೆಲಸ ಮಾಡಿದರೂ ಯಶಸ್ಸು ಕಟ್ಟಿಟ್ಟ ಬುತ್ತಿ.
ಇದನ್ನೂ ಓದಿ : Naga Sadhu: ಮಹಿಳೆಯರು ನಾಗಾಸಾಧು ಆಗುವ ಪ್ರಕ್ರಿಯೆಯೇ ಬಹಳ ವಿಚಿತ್ರ.! ನಿಗೂಢ ಲೋಕದ ವಿಸ್ಮಯಕಾರಿ ವಿಚಾರ ಇಲ್ಲಿದೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.