ಅಕ್ಟೋಬರ್ ತಿಂಗಳಿಂದ ಈ ರಾಶಿಯವರ ಜೀವನದಲ್ಲಿ ಧನಾಗಮನ

ಈ ವರ್ಷ ಅಕ್ಟೋಬರ್ 30 ರಂದು ರಾಹು ಸಂಕ್ರಮಿಸಲಿದ್ದಾನೆ. ರಾಹು ಮೇಷ ಮತ್ತು ಕೇತು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾರೆ. ಕೇತು ಸಂಕ್ರಮಿಸಿದ ತಕ್ಷಣ, ಕೆಲವು ರಾಶಿಯವರ ಅದೃಷ್ಟವೇ ಬದಲಾಗುತ್ತದೆ.

Written by - Ranjitha R K | Last Updated : Jan 25, 2023, 04:08 PM IST
  • ಜ್ಯೋತಿಷ್ಯದ ಪ್ರಕಾರ ರಾಹು-ಕೇತು ಛಾಯಾ ಗ್ರಹಗಳು
  • ಇವರಿಬ್ಬರು ಯಾವಾಗಲೂ ಹಿಮ್ಮುಖವಾಗಿಯೇ ಚಲಿಸುತ್ತಾರೆ.
  • ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು ಒಂದೂವರೆ ವರ್ಷ ಬೇಕಾಗುತ್ತದೆ
ಅಕ್ಟೋಬರ್ ತಿಂಗಳಿಂದ ಈ ರಾಶಿಯವರ ಜೀವನದಲ್ಲಿ ಧನಾಗಮನ  title=

ಬೆಂಗಳೂರು : ಪ್ರತಿಯೊಂದು ಗ್ರಹವು ತನ್ನ ಚಲನೆಯನ್ನು ಬದಲಾಯಿಸುತ್ತಲೇ ಇರುತ್ತದೆ. ಜ್ಯೋತಿಷ್ಯದಲ್ಲಿ ರಾಹು-ಕೇತುಗಳನ್ನು ಛಾಯಾ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಇವರಿಬ್ಬರು ಯಾವಾಗಲೂ ಹಿಮ್ಮುಖವಾಗಿಯೇ ಚಲಿಸುತ್ತಾರೆ. ಈ ಎರಡು ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲು ಒಂದೂವರೆ ವರ್ಷ ತೆಗೆದುಕೊಳ್ಳುತ್ತದೆ. ಜಾತಕದಲ್ಲಿ ರಾಹು-ಕೇತುಗಳು ಅಶುಭ ಸ್ಥಾನದಲ್ಲಿದ್ದರೆ, ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ವರ್ಷ ಅಕ್ಟೋಬರ್ 30 ರಂದು ರಾಹು ಸಂಕ್ರಮಿಸಲಿದ್ದಾನೆ. ರಾಹು ಮೇಷ ಮತ್ತು ಕೇತು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾರೆ. ಕೇತು ಸಂಕ್ರಮಿಸಿದ ತಕ್ಷಣ, ಕೆಲವು ರಾಶಿಯವರ ಅದೃಷ್ಟವೇ ಬದಲಾಗುತ್ತದೆ.

ಧನು ರಾಶಿ : 
ತುಲಾ ರಾಶಿಯಲ್ಲಿ ಕೇತು ಸಂಕ್ರಮಿಸಿದ ತಕ್ಷಣ ಧನು ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಈ ಸಮಯದಲ್ಲಿ, ಸಾಕಷ್ಟು ಲಾಭವಾಗುತ್ತದೆ. ವೃತ್ತಿ ಜೀವನದಲ್ಲಿಯೂ ಉತ್ತಮ ಯಶಸ್ಸನ್ನು ಸಾಧಿಸಬಹುದು. ವ್ಯಾಪಾರಸ್ಥರು ವ್ಯಾಪಾರದಲ್ಲಿ ಲಾಭ ಗಳಿಸುವರು.

ಇದನ್ನೂ ಓದಿ : Guru Ast 2023: ಶೀಘ್ರದಲ್ಲಿಯೇ ದೇವಗುರು ಬೃಹಸ್ಪತಿ ಅಸ್ತ, ದ್ವಾದಶ ರಾಶಿಗಳ ಮೇಲೆ ಏನು ಪ್ರಭಾವ?

ವೃಷಭ ರಾಶಿ : 
ವೃಷಭ ರಾಶಿಯವರಿಗೆ ಕೇತು ಸಂಕ್ರಮಣ ಶುಭ ಸುದ್ದಿ ತರಲಿದೆ. ಇವರು ಅನುಭವಿಸುತ್ತಿದ್ದ ಕಷ್ಟಗಳಿಂದ ಪರಿಹಾರ ಸಿಗಲಿದೆ. ಮಾನಸಿಕ ಒತ್ತಡ ಮತ್ತು ಸಂಕಟದಿಂದ ಮುಕ್ತಿ ಸಿಗುತ್ತದೆ. ಆರೋಗ್ಯ ಸುಧಾರಿಸಲಿದೆ. ಸಾಕಷ್ಟು ಧನಲಾಭವಾಗಲಿದ್ದು, ಈ ಕಾರಣದಿಂದಾಗಿ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. 

ಮಕರ  ರಾಶಿ : 
ಕೇತು ಸಂಕ್ರಮಣದಿಂದ ಮಕರ ರಾಶಿಯವರಿಗೆ ಹೆಚ್ಚಿನ ಲಾಭವಾಗಲಿದೆ. ಈ ಸಮಯದಲ್ಲಿ, ಗಳಿಕೆಗೆ ಹೆಚ್ಚಿನ ಅವಕಾಶವಿರುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಉದ್ಯೋಗದಲ್ಲಿರುವವರು ಉನ್ನತ ಹುದ್ದೆಗೆ ಏರಬಹುದು. ಉದ್ಯಮಿಗಳು ಹೆಚ್ಚಿನ ಲಾಭವನ್ನು ಗಳಿಸುವರು.

ಇದನ್ನೂ ಓದಿ : ಈ ನಾಲ್ಕು ರಾಶಿಗಳ ಜನರ ಮೇಲೆ ಶನಿಯ ಸಾಡೆಸಾತಿ ಪ್ರಭಾವ ಶೂನ್ಯಕ್ಕೆ ಸಮಾನ

ಸಿಂಹ ರಾಶಿ :
ಅಕ್ಟೋಬರ್‌ನಲ್ಲಿ ಕೇತು ಸಂಕ್ರಮಿಸಿದ ತಕ್ಷಣ, ಸಿಂಹ ರಾಶಿಯವರ ಅದೃಷ್ಟ ಬದಲಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಈ ಸಮಯದಲ್ಲಿ ಆಸ್ತಿಯಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಾಗಬಹುದು.  ಕುಟುಂಬ ಸದಸ್ಯರೊಂದಿಗೆ ಸಂಬಂಧವು ಉತ್ತಮವಾಗಿರುತ್ತದೆ.

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News