ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹದ ರಾಶಿ ಬದಲಾವಣೆಯ ಸಮಯ ವಿಭಿನ್ನವಾಗಿರುತ್ತದೆ. ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುವಂತೆ, ಶನಿಯು ಗರಿಷ್ಠ ಎರಡೂವರೆ ವರ್ಷಗಳಲ್ಲಿ ಮತ್ತು ಚಂದ್ರನು ಕನಿಷ್ಠ 3 ದಿನಗಳಲ್ಲಿ ರಾಶಿ  ಬದಲಾಯಿಸುತ್ತಾನೆ. ಗುರುಗ್ರಹವು ಒಂದು ವರ್ಷದಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಬೆಳೆಸುತ್ತಾನೆ. ಈ ವರ್ಷ ಗುರು ಗ್ರಹವು ಸಂಕ್ರಮಣ ಮಾಡುವ ಮೂಲಕ ಮೇಷ ರಾಶಿಯನ್ನು ಪ್ರವೇಶಿಸಿತ್ತು. ಮೇ 1, 2024 ರವರೆಗೆ ಗುರುವು ಮೇಷ ರಾಶಿಯಲ್ಲಿ ಇರುತ್ತಾನೆ. ಇನ್ನು ಚಂದ್ರ ಕೂಡಾ ಆಗಸ್ಟ್ 22 ರಂದು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಹೀಗೆ ಮೇಷ ರಾಶಿಯಲ್ಲಿ ಗುರು ಮತ್ತು ಚಂದ್ರನ ಸಂಯೋಗದಿಂದ ಗಜಕೇಸರಿ ರಾಜಯೋಗ ರೂಪುಗೊಳ್ಳಲಿದೆ. ಗಜಕೇಸರಿ ರಾಜಯೋಗಕ್ಕೆ ಜ್ಯೋತಿಷ್ಯದಲ್ಲಿ ಬಹಳ ಮಹತ್ವವಿದೆ.  


COMMERCIAL BREAK
SCROLL TO CONTINUE READING

ಈ ಬಾರಿಯೂ ಸಹ ಮೇಷ ರಾಶಿಯಲ್ಲಿ ಗುರು ಮತ್ತು ಚಂದ್ರ ಸಂಯೋಗದಿಂದ ಗಜಕೇಸರಿ ರಾಜಯೋಗ ನಿರ್ಮಾಣವಾಗುತ್ತಿದೆ. ಗಜಕೇಸರಿ ರಾಜಯೋಗವು ಕೆಲವು ರಾಶಿಯವರಿಗೆ ಅಪಾರ ಸಂಪತ್ತು, ಗೌರವ, ಪ್ರಚಾರ, ಪ್ರಗತಿ ಮತ್ತು ಸಂತೋಷವನ್ನು ನೀಡುತ್ತದೆ. ಗಜಕೇಸರಿ ರಾಜಯೋಗವು ಕೆಲವು ರಾಶಿಯವರಿಗೆ ಬಹಳಷ್ಟು ಮಂಗಳಕರವಾಗಲಿದೆ.   


ಇದನ್ನೂ ಓದಿ : ಇನ್ನೆರಡು ತಿಂಗಳ ಬಳಿಕ ಈ ರಾಶಿಯವರಿಗೆ ಧನಿಕರಾಗುವ ಯೋಗ ! ಎರಡು ವರ್ಷದವರೆಗೆ ಸಿರಿ ಸಂಪತ್ತಿಗೆ ಕೊರತೆಯೇ ಇರುವುದಿಲ್ಲ


ಗಜಕೇಸರಿ ಯೋಗವು ಈ ರಾಶಿಯವರಿಗೆ ತುಂಬಾ ಮಂಗಳಕರ :
ಮೇಷ ರಾಶಿ : ಗಜಕೇಸರಿ ರಾಜಯೋಗವು ಮೇಷ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಈ ರಾಶಿಯವರ ವ್ಯಕ್ತಿತ್ವದಲ್ಲಿ ವಿಭಿನ್ನ ಹೊಳಪು ಕಾಣಿಸುತ್ತದೆ. ಜೀವನ ಸಂತೋಷದಿಂದ ಕೂಡಿರುವುದು. ಆತ್ಮವಿಶ್ವಾಸ ಹೆಚ್ಚುತ್ತಲೇ ಇರುತ್ತದೆ. ಗಳಿಕೆ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಕುಟುಂಬದಲ್ಲಿ ಸಂತೋಷ ನೆಲೆಯಾಗುತ್ತದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೆ ಲಾಭವಾಗಲಿದೆ. 


ಮಿಥುನ ರಾಶಿ : ಗಜಕೇಸರಿ ರಾಜಯೋಗವು ಮಿಥುನ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಆದಾಯ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಹಣ ಗಳಿಕೆಗೆ ಹೊಸ ಮಾರ್ಗಗಳು ಕಂಡುಬರುತ್ತವೆ. ಹಳೆಯ ಹೂಡಿಕೆಯಿಂದ  ಲಾಭವಾಗಲಿದೆ. ವಿದೇಶಕ್ಕೆ ಹೋಗುವ ಆಸೆ ಈಡೇರಬಹುದು. ಕೌಟುಂಬಿಕ ಜೀವನದ ಸಮಸ್ಯೆಗಳು ದೂರವಾಗುತ್ತವೆ. 


ಇದನ್ನೂ ಓದಿ : Weekly Horoscope: ಈ ವಾರದ ದ್ವಾದಶ ರಾಶಿಗಳ ಫಲಾಫಲ ಹೇಗಿದೆ!


ಕರ್ಕಾಟಕ ರಾಶಿ: ಗಜಕೇಸರಿ ರಾಜಯೋಗವು ಕರ್ಕಾಟಕ ರಾಶಿಯವರಿಗೆ ವೃತ್ತಿ-ವ್ಯವಹಾರ ಮತ್ತು ವೈಯಕ್ತಿಕ ಜೀವನದಲ್ಲಿ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯ ಜನರು ಹೊಸ ಉದ್ಯೋಗಗಳನ್ನು ಪಡೆಯಬಹುದು. ಪ್ರಸ್ತುತ ಕೆಲಸದಲ್ಲಿ ಬಡ್ತಿ ಪಡೆದು ವೇತನ ಹೆಚ್ಚಾಗಬಹುದು. ಕುಟುಂಬ ವ್ಯವಹಾರಕ್ಕೆ ಸಂಬಂಧಿಸಿದ ಜನರಿಗೆ ಇದು ಅನುಕೂಲಕರ ಸಮಯ. ಹಣಕಾಸಿನ ಪ್ರಯೋಜನವಾಗಲಿದೆ.  ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.