Weekly Horoscope: ಈ ವಾರದ ದ್ವಾದಶ ರಾಶಿಗಳ ಫಲಾಫಲ ಹೇಗಿದೆ!

Weekly Horoscope From July 24th to July 30th:   ಜುಲೈ 24ರಿಂದ ಜುಲೈ 30ರವರೆಗೆ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ. ಈ ವಾರ ಯಾವ ರಾಶಿಯವರಿಗೆ ಶುಭ ಫಲಗಳು ಲಭ್ಯವಾಗಲಿವೆ. ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯೋಣ...  

Written by - Yashaswini V | Last Updated : Jul 24, 2023, 08:34 AM IST
  • ಈ ವಾರದ ನಿಮ್ಮ ರಾಶಿಫಲ ಹೇಗಿದೆ
  • ಈ ವಾರ ಯಾರಿಗೆ ಶುಭ
  • ಈ ವಾರ ಯಾರಿಗೆ ಎಚ್ಚರಿಕೆ ಅಗತ್ಯ
Weekly Horoscope: ಈ ವಾರದ ದ್ವಾದಶ ರಾಶಿಗಳ ಫಲಾಫಲ ಹೇಗಿದೆ! title=

Weekly Horoscope in  Kannada July 24th to July 30th: ಜುಲೈ ಕೊನೆಯ ವಾರ ಯಾವ ರಾಶಿಯವರ ಭವಿಷ್ಯ ಹೇಗಿದೆ. ಈ ವಾರ ಯಾವ ರಾಶಿಯವರಿಗೆ ಶುಭಕರ? ಯಾವ ರಾಶಿಯವರು ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕು ತಿಳಿಯಿರಿ.  

ಮೇಷ ರಾಶಿಯವರ ವಾರ ಭವಿಷ್ಯ:  
ಮೇಷ ರಾಶಿಯವರು ಈ ವಾರ ನಿಮ್ಮ ನಿರೀಕ್ಷಿತ ಫಲಗಳನ್ನು ಪಡೆಯಲು ಕಷ್ಟಪಟ್ಟು ಕೆಲಸ ಮಾಡಬೇಕು. ಇದಕ್ಕಾಗಿ, ನಿಮ್ಮ ನಿಗದಿತ ಕೆಲಸಗಳಿಗೆ ಮೊದಲೇ ವೇಳಾಪಟ್ಟಿಯನ್ನು ರೂಪಿಸಿ ಕಾರ್ಯೋನ್ಮುಖರಾಗಿರಿ. ಆರ್ಥಿಕ ದೃಷ್ಟಿಯಿಂದ ಈ ವಾರ ಮಂಗಳಕರವಾಗಿದೆ. ಆದಾಗ್ಯೂ, ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಬ್ಯುಸಿನೆಸ್ ಸಂಬಂಧ ನೀವು ದೂರದ ಊರುಗಳಿಗೆ ದಿಢೀರ್ ಪ್ರಯಾಣ ಕೈಗೊಳ್ಳಬೇಕಾಗಬಹುದು. ಇದಕ್ಕಾಗಿ ಮಾನಸಿಕವಾಗಿ ಸಿದ್ಧರಾಗಿರಿ. 

ವೃಷಭ ರಾಶಿಯವರ ವಾರ ಭವಿಷ್ಯ:  
ಈ ವಾರ ವೃಷಭ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರಗಳು ಹೆಚ್ಚಿನ ಲಾಭವನ್ನು ತರಲಿವೆ. ನಿಮ್ಮ ಆಪ್ತರ ಸಹಾಯದಿಂದ ವ್ಯವಹಾರವು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಕಷ್ಟಪಟ್ಟು ದುಡಿಯುವ ನಿಮ್ಮ ಸ್ವಭಾವವೂ ಇತರರಿಗೂ ದಾರಿ ದೀಪವಾಗಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಈ ವಾರ ಯಶಸ್ಸು ಪ್ರಾಪ್ತಿಯಾಗಲಿದ್ದು ಇದು ನಿಮ್ಮ ಆತ್ಮವಿಶ್ವಾಸವನ್ನೂ ಕೂಡ ಹೆಚ್ಚಿಸಲಿದೆ. ಒಟ್ಟಾರೆಯಾಗಿ ಈ ವಾರ ನಿಮಗೆ ಮಂಗಳಕರವಾರ ಎಂದು ಸಾಬೀತುಪಡಿಸಲಿದೆ. 

ಮಿಥುನ ರಾಶಿಯವರ ವಾರ ಭವಿಷ್ಯ:   
ಉದ್ಯೋಗ ಸ್ಥಳದಲ್ಲಿ ಕೆಲವರಿಗೆ ನಿಮ್ಮ ಅಗತ್ಯವಿದ್ದು ಕಿರಿಯರೇ ಆದರೂ ಸಹ ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ. ಅವರಿಗೆ ಉತ್ತಮ ಮಾರ್ಗದರ್ಶನವನ್ನು ನೀಡಿ. ಹಣಕಾಸಿನ ವಿಷಯದಲ್ಲಿ ಅದೃಷ್ಟ ನಿಮ್ಮೊಂದಿಗಿದ್ದು ಸಂಪತ್ತು ವೃದ್ಧಿಯಾಗಲಿದೆ. ನೀವು ದೀರ್ಘ ಸಮಯದಿಂದ ಕಾತುರರಾಗಿ ಕಾಯುತ್ತಿದ್ದ ಪ್ರವಾಸವನ್ನು ಈ ವಾರ ಯೋಜಿಸಬಹುದು. ಇದು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಮೂಡಿದ್ದ ಭಿನ್ನಾಭಿಪ್ರಾಯಗಳಿಂದ ಪರಿಹಾರ ಪಡೆಯಲು ಸಹಕಾರಿ ಆಗಲಿದೆ. ಆದಾಗ್ಯೂ, ಈ ವಾರ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ತುಂಬಾ ಅಗತ್ಯವಾಗಿದೆ. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ: 
ಕರ್ಕಾಟಕ ರಾಶಿಯವರಿಗೆ ನಿಮ್ಮ ನಾಯಕತ್ವದ ಗುಣವೇ ನಿಮಗೆ ಉತ್ತಮ ಯಶಸ್ಸನ್ನು ಕರುಣಿಸಲಿದೆ. ನಿಮ್ಮ ಸಂವಾಹನ ಸಾಮರ್ಥ್ಯವು ಆರ್ಥಿಕ ಭದ್ರತೆಯನ್ನು ತರಲು ಭರವಸೆ ನೀಡುತ್ತದೆ. ಪ್ರತಿಕೂಲ ಪರಿಸ್ಥಿತಿಗಳ ವಿರುದ್ಧ ಧೈರ್ಯ ಮತ್ತು ವಿಶ್ವಾಸದಿಂದ ಹೋರಾಡಲು ನಿಮ್ಮ ಸುಪ್ತ ಪ್ರತಿಭೆಯನ್ನು ನೀವು ಬಳಸಬೇಕಾಗುತ್ತದೆ. ನೀವು ಹೊಸ ಆಲೋಚನೆಗಳು ಮತ್ತು ಯೋಜನೆಗಳ ಮೇಲೆ ಕೆಲಸ ಮಾಡಿದರೆ ಹಣ ಸಂಪಾದಿಸುವ ಪ್ರಯತ್ನಗಳು ಲಾಭದಾಯಕವಾಗುತ್ತವೆ. 

ಇದನ್ನೂ ಓದಿ- ಶನಿ ದೇವನ ಪ್ರಿಯ ರಾಶಿಗಳಿವು: ಇವರಿಗೆ ಜೀವನದಲ್ಲಿ ಸೋಲೆಂಬುದೇ ಇಲ್ಲ

ಸಿಂಹ ರಾಶಿಯವರ ವಾರ ಭವಿಷ್ಯ:  
ಸಿಂಹ ರಾಶಿಯವರು ಈ ವಾರ ಹೊಸ ಆಲೋಚನೆಗಳಿಗೆ ಒತ್ತು ನೀಡಿದರೆ ಹೆಚ್ಚು ಪ್ರಯೋಜನಕಾರಿ ಆಗಲಿದೆ. ಕೌಶಲ್ಯ ಹೆಚ್ಚಿಸುವ ಕೋರ್ಸ್‌ಗಳಿಗೆ ಸೇರಲು ಬಯಸುವವರಿಗೆ ಈ ವಾರ ಲಾಭದಾಯಕ ವಾರವಾಗಲಿದೆ.  ಗುಂಪಿನಲ್ಲಿ ಎದ್ದು ಕಾಣುವ ನಿಮ್ಮ ಸಾಮರ್ಥ್ಯವು ನಿಮಗೆ ಜನಪ್ರಿಯತೆ ಮತ್ತು ಮನ್ನಣೆಯನ್ನು ತರುತ್ತದೆ. ನಿಮಗೆ ವಿಶ್ರಾಂತಿ ಮತ್ತು ಮನರಂಜನೆಯನ್ನು ನೀಡುವ ಕೆಲಸಗಳನ್ನು ಮಾಡಲು ಇದು ಅತ್ಯುತ್ತಮ ಸಮಯವಾಗಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಿ. 

ಕನ್ಯಾ ರಾಶಿಯವರ ವಾರ ಭವಿಷ್ಯ: 
ಈ ವಾರ ನಿಮಗೆ ಉತ್ತಮ ಆದಾಯ ಲಭ್ಯವಾಗಲಿದೆ. ಆದರೂ, ಭವಿಷ್ಯಕ್ಕಾಗಿ ಹಣ ಕೂಡಿಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಯಾವುದೇ ಕೆಲಸವಿರಲಿ ಗಮನ ಕೇಂದ್ರೀಕರಿಸುವುದರಿಂದ ಮಾತ್ರವೇ ನೀವು ಆ ಕೆಲಸದಲ್ಲಿ ಲಾಭವನ್ನು ಪಡೆಯಬಹುದು.  ಸಂತೋಷದ ಪ್ರವಾಸಗಳಿಂದ ಉತ್ತಮ ಪಾಠವನ್ನು ಕಲಿಯುವ ಸಾಧ್ಯತೆಯೂ ಇದೆ.  ಲಾಭದಾಯಕ ಹೂಡಿಕೆ ಯೋಜನೆಗಳು ನಿಮ್ಮನ್ನು ಆಕರ್ಷಿಸುತ್ತವೆ.  ಸದಾ ಧನಾತ್ಮಕವಾಗಿ ಯೋಚಿಸಿ, ಒಳ್ಳೆಯದನ್ನು ಯೋಚಿಸಿದರೆ ಒಳ್ಳೆಯದೇ ಆಗಲಿದೆ ಎಂಬುದನ್ನು ನೆನಪಿನಲ್ಲಿಡಿ. 

ತುಲಾ ರಾಶಿಯವರ ವಾರ ಭವಿಷ್ಯ: 
ತುಲಾ ರಾಶಿಯವರಿಗೆ ಈ ವಾರ ಅದೃಷ್ಟದ ವಾರವಾಗಿದ್ದು ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರದ ಪ್ರಯಾಣ ಕೈಗೊಳ್ಳಬೇಕಾಗಬಹುದು. ಇದು ನಿಮ್ಮ ಪ್ರಗತಿಯ ಹಾದಿಯನ್ನು ತೆರೆಯಲಿದೆ. ಈ ರಾಶಿಯ ಜನರಿಗೆ ಈ ವಾರ ಹೆಚ್ಚುವರಿ ಆದಾಯ ದೊರೆಯಲಿದ್ದು ಸಂಪತ್ತು ವೃದ್ಧಿಯಾಗಲಿದೆ. ವಾರದ ಮಧ್ಯದಲ್ಲಿ, ನಿಮ್ಮ ಪ್ರೀತಿಯ ಸಂಗಾತಿ ಅಥವಾ ಜೀವನ ಸಂಗಾತಿಯಿಂದ ನೀವು ಆಶ್ಚರ್ಯಕರ ಉಡುಗೊರೆಯನ್ನು ಕೂಡ ಸ್ವೀಕರಿಸುವಿರಿ. ಭೂ-ಕಟ್ಟಡಕ್ಕೆ ಸಂಬಂಧಿಸಿದ ವಿವಾದಗಳು ಬಗೆಹರಿಯುತ್ತವೆ. 

ವೃಶ್ಚಿಕ ರಾಶಿಯವರ ವಾರ ಭವಿಷ್ಯ:  
ವೃಶ್ಚಿಕ ರಾಶಿಯ ಉದ್ಯೋಗಿಗಳಿಗೆ ವಾರದ ಆರಂಭದಲ್ಲಿ ಕೆಲಸದ ಒತ್ತಡ ಹೆಚ್ಚಿರುತ್ತದೆ. ಇದೇ ವೇಳೆ ಸಹೋದ್ಯೋಗಿಗಳಿಂದ ಅಪೇಕ್ಷಿತ ಸಹಕಾರ ದೊರೆಯದೆ ಮನಸ್ಸು ತಲ್ಲಣಗೊಳ್ಳಬಹುದು. ಆದರೆ, ದೃತಿಗೆಡಬೇಡಿ. ನಿಮ್ಮ ಸ್ವಂತ ಬಲದಿಂದ ನೀವು ಎಲ್ಲಾ ಕೆಲಸಗಳನ್ನು ಖಂಡಿತ ಪೂರ್ಣಗೊಳಿಸುವಿರಿ. ವಾರದ ದ್ವಿತೀಯಾರ್ಧದಲ್ಲಿ ನಿಮ್ಮ ಸಮಸ್ಯೆಗಳು ನಿಧಾನವಾಗಿ ಬಗೆಹರಿಯಲಿವೆ. ಆದಾಗ್ಯೂ, ನೀವು ಈ ವಾರ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಿ. 

ಇದನ್ನೂ ಓದಿ- Ketu Gochara 2023: ಅಕ್ಟೋಬರ್‌ನಿಂದ ಈ ರಾಶಿಯವರ ಅದೃಷ್ಟವೇ ಬದಲಾಗಲಿದೆ

ಧನು ರಾಶಿಯವರ ವಾರ ಭವಿಷ್ಯ:  
ಈ ವಾರ ಧನು ರಾಶಿಯವರಿಗೆ ಅದೃಷ್ಟದ ವಾರ ಎಂತಲೇ ಹೇಳಬಹುದು. ಈ ವಾರ, ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸುವ ಅವಕಾಶಗಳು ಒದಗಿ ಬರಲಿವೆ. ಹಿರಿಯರ ಆಶೀರ್ವಾದದಿಂದ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಉದ್ಯೋಗಸ್ಥ ಮಹಿಳೆಯರ ಸ್ಥಾನಮಾನದ ಹೆಚ್ಚಳದೊಂದಿಗೆ, ಅವರ ಕೆಲಸದ ಸ್ಥಳದಲ್ಲಿ ಗೌರವ, ಕೀರ್ತಿ ಹೆಚ್ಚಾಗುತ್ತದೆ. ನೀವು ವಿದೇಶಕ್ಕೆ ಸಂಬಂಧಿಸಿದ ವ್ಯವಹಾರವನ್ನು ಮಾಡುತ್ತಿದ್ದರೆ ಅಥವಾ ವಿದೇಶದಲ್ಲಿ ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುತ್ತಿದ್ದರೆ, ಈ ವಾರ ನಿಮ್ಮ ದಾರಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ.

ಮಕರ ರಾಶಿಯವರ ವಾರ ಭವಿಷ್ಯ:  
ಮಕರ ರಾಶಿಯವರು ಯಾವುದೇ ಕೆಲಸ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಅದರಲ್ಲೂ ಮುಖ್ಯವಾಗಿ ವಾಹನ ಚಾಲನೆ ವೇಳೆ, ವ್ಯಾಪಾರ-ವ್ಯವಹಾರದಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ ಈ ಮಾತನ್ನು ನೆನಪಿನಲ್ಲಿಡಬೇಕು. ಯಾವುದೇ ಕೆಲಸದಲ್ಲಿ ಉದಾಸೀನತೆಯನ್ನು ತಪ್ಪಿಸಿ. ಇಲ್ಲದಿದ್ದರೆ, ಇದೇ ನಿಮಗೆ ಮುಳುವಾಗಬಹುದು. ವಾರದ ಮಧ್ಯದಲ್ಲಿ, ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸದ ಹೊರೆ ಇರುತ್ತದೆ, ಇದರಿಂದಾಗಿ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿಯುವ ಸಾಧ್ಯತೆಯೂ ಇದೆ. 

ಕುಂಭ ರಾಶಿಯವರ ವಾರ ಭವಿಷ್ಯ:  
ಈ ವಾರ ಕುಂಭ ರಾಶಿಯವರು ತಮ್ಮ ಕೆಲಸದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತಪ್ಪಿಸಬೇಕು. ವಾರದ ಆರಂಭದಲ್ಲಿ, ನೀವು ಕೆಲಸಕ್ಕೆ ಸಂಬಂಧಿಸಿದಂತೆ ದೂರದ ಪ್ರಯಾಣವನ್ನು ಮಾಡಬೇಕಾಗಬಹುದು. ಪ್ರಯಾಣವು ಸ್ವಲ್ಪ ಆಯಾಸವಾಗಿದ್ದರೂ ಕೂಡ ಇದರಿಂದ ಉತ್ತಮ ಲಾಭವನ್ನು ಪಡೆಯುವಿರಿ. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ, ಈ ಸಮಯವು ನಿಮಗೆ ತುಂಬಾ ಒಳ್ಳೆಯದು. ಆದಾಗ್ಯೂ, ಹಣದ ವಹಿವಾಟು ಮತ್ತು ಕಾಗದದ ಕೆಲಸ ಮಾಡುವಾಗ ನೀವು ತುಂಬಾ ಎಚ್ಚರಿಕೆಯಿಂದ ಇರಿ. 

ಮೀನ ರಾಶಿಯವರ ವಾರ ಭವಿಷ್ಯ: 
ಮೀನ ರಾಶಿಯವರಿಗೆ ಅವರ ಸೋಮಾರಿತನವೇ ಈ ವಾರ ಮುಳುವಾಗಲಿದೆ. ನಿಮ್ಮ ಸೋಮಾರಿತನದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ಇರುತ್ತದೆ. ಭೂ-ಕಟ್ಟಡಕ್ಕೆ ಸಂಬಂಧಿಸಿದ ವಿವಾದಗಳು ನಿಮ್ಮ ಕಾಳಜಿಗೆ ಪ್ರಮುಖ ಕಾರಣವಾಗಬಹುದು. ಆದರೆ, ಯಾವುದೇ ಕಾರಣಕ್ಕೂ ತರಾತುರಿಯಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ, ಇಲ್ಲವೇ ಭವಿಷ್ಯದಲ್ಲಿ ಪಶ್ಚಾತಾಪ ಪಡಬೇಕಾದೀತು ಎಚ್ಚರ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News