ನವದೆಹಲಿ: ಕೆಲವು ವಿಶೇಷ ರಾಜಯೋಗಗಳು ರೂಪುಗೊಳ್ಳುವುದರಿಂದ ವ್ಯಕ್ತಿಯ ಬದುಕಿನಲ್ಲಿ ಹೊಸ ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತದೆ. ಅದರಂತೆ ಶೀಘ್ರವೇ ಗಜಲಕ್ಷ್ಮಿ ರಾಜಯೋಗವು ರೂಪುಗೊಳ್ಳುತ್ತಿದ್ದು, ಕೆಲವು ರಾಶಿಯವರಿಗೆ ಅಪಾರ ಸಂಪತ್ತು ದೊರೆಯಲಿದೆ. ಜಾತಕದ ಅನುಸಾರವೇ ನಮ್ಮ ಭವಿಷ್ಯವು ನಿರ್ಧಾರವಾಗುತ್ತದೆ.


COMMERCIAL BREAK
SCROLL TO CONTINUE READING

ವ್ಯಕ್ತಿಯ ಜಾತಕದಲ್ಲಿ ಯಾವ ಗ್ರಹವು ಎಲ್ಲಿರುತ್ತದೆ ಎಂಬುದರ ಮೇಲೆ ಭವಿಷ್ಯವು ನಿರ್ಧಾರವಾಗುತ್ತದೆ ಅನ್ನೋದನ್ನು ನಾವು ಊಹಿಸಬಹುದು. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಗ್ರಹಗಳ ಸಂಚಾರದಿಂದ ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿಯ ಜೀವನದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಈಗಾಗಲೇ ಹಿಮ್ಮಖ ಚಲನೆ ಆರಂಭಿಸಿರುವ ಶುಕ್ರನಿಂದ ಗಜಲಕ್ಷ್ಮಿ ರಾಜಯೋಗವು ರೂಪುಗೊಳ್ಳುತ್ತದೆ. ಇದು 4 ರಾಶಿಯವರಿಗೆ ಅಪಾರ ಸಂಪತ್ತನ್ನು ನೀಡುತ್ತದೆ. ಆ ಅದೃಷ್ಟದ 4 ರಾಶಿಗಳ ಬಗ್ಗೆ ತಿಳಿದುಕೊಳ್ಳಿರಿ.


ಇದನ್ನೂ ಓದಿ: ನಾಳೆಯಿಂದ ಈ ರಾಶಿಯವರ ಭಾಗ್ಯೋದಯ ! ಒಲಿದು ಬರುವಳು ವಿಜಯಲಕ್ಷ್ಮೀ ! ತುಂಬಿ ತುಳುಕುವುದು ಸುಖ ಸಂಪತ್ತು


ಮಕರ ರಾಶಿ: ಇಷ್ಟುದಿನ ನಿಮಗೆ ಸಮಸ್ಯೆಗಳನ್ನು ತಂದಿದ್ದ ಕಷ್ಟಗಳು ಮಾಯವಾಗುತ್ತವೆ. ಸುಖ-ಸಂತೋಷದ ಜೊತೆಗೆ ಐಷಾರಾಮಿ ಜೀವನ ನಿಮ್ಮದಾಗುತ್ತದೆ. ಹಿಂದೆ ಮಾಡಿದ್ದ ಹೂಡಿಕೆಗಳಿಂದ ನಿಮಗೆ ಭರ್ಜರಿ ಲಾಭವಾಗಲಿದೆ. ನೀವು ಆರ್ಥಿಕವಾಗಿ ಮತ್ತಷ್ಟು ಸದೃಢರಾಗುತ್ತೀರಿ.


ಧನು ರಾಶಿ: ಗಜಲಕ್ಷ್ಮಿ ರಾಜಯೋಗದಿಂದ ನಿಮಗೆ ಹಲವಾರು ಉತ್ತಮ ಅವಕಾಶಗಳು ದೊರೆಯುತ್ತವೆ. ಆಸ್ತಿ ಖರೀದಿ ಸಾಧ್ಯತೆ ಇದ್ದು, ನಿಮ್ಮ ಸಂಪತ್ತು ಹೆಚ್ಚಾಗಲಿದೆ. ನಿಮ್ಮ ಕೌಟುಂಬಿಕ ಜೀವನದಲ್ಲಿ ಸುಖ-ಸಂತೋಷ ಮತ್ತಷ್ಟು ಹೆಚ್ಚಾಗುತ್ತದೆ.


ಕುಂಭ ರಾಶಿ: ಗಜಲಕ್ಷ್ಮಿ ರಾಜಯೋಗವು ಕುಂಭ ರಾಶಿಯ ಜನರಿಗೆ ಉತ್ತಮ ಫಲಿತಾಂಶ ನೀಡಲಿದೆ. ನೀವು ಬಡ್ತಿ ಪಡೆಯಬಹುದು. ಹೊಸ ವ್ಯವಹಾರ ಆರಂಭಿಸಲು ಇದು ಸಕಾಲ. ನಿಮ್ಮ ಎಲ್ಲಾ ಕಲಸದಲ್ಲಿಯೂ ಯಶಸ್ಸು ಸಿಗಲಿದೆ. ಸುಖ-ಸಂಪತ್ತು ಸಮೃದ್ಧಿ ನಿಮ್ಮದಾಗಲಿದೆ.   


ಮೇಷ ರಾಶಿ: ನಿಮಗೆ ಮಕ್ಕಳಿಂದ ಸಂತಸದ ಸುದ್ದಿ ದೊರೆಯಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ನೀವು ಭರ್ಜರಿ ಲಾಭ ಗಳಿಸಬಹುದು. ನಿಮ್ಮ ಎಲ್ಲಾ ಯೋಜನೆಗಳು ಯಶಸ್ವಿಯಾಗುತ್ತವೆ. ನಿಮ್ಮ ಜೀವನದ ಪ್ರತಿಯೊಂದು ಕಷ್ಟಗಳಿಂದಲೂ ಮುಕ್ತಿ ದೊರೆತು ಸುಖ-ಸಂತೋಷ ನಿಮ್ಮದಾಗಲಿದೆ.


ಇದನ್ನೂ ಓದಿ: ಕರ್ಕ ರಾಶಿಯಲ್ಲಿ ಶುಕ್ರನ ವಕ್ರನಡೆ, 3 ರಾಶಿಗಳ ಜನರಿಗೆ ಅಪಾರ ಧನಲಾಭ-ಸ್ಥಾನಮಾನ-ಪ್ರತಿಷ್ಠೆಯ ಯೋಗ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.