Mahayog On Buddha Purnima 2024: ವೈಶಾಖ ಮಾಸದ ಹುಣ್ಣಿಮೆಯನ್ನು ವೈಶಾಖ ಪೂರ್ಣಿಮಾ ಅಥವಾ ಬುದ್ಧ ಪೂರ್ಣಿಮಾ (Buddha Purnima) ಎಂದು ಕರೆಯಲಾಗುತ್ತದೆ. ಈ ವರ್ಷ 23 ಮೇ 2024, ಗುರುವಾರದಂದು ಬುದ್ದ ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ಬುದ್ಧನ ಜನನವಾಯಿತು ಎಂದು ಹೇಳಲಾಗುತ್ತದೆ. ಅಲ್ಲದೆ, ವೈಶಾಖ ಪೂರ್ಣಿಮಾ ದಿನದಂದು ಭಗವಾನ್ ಬುದ್ಧನು ಬೋಧಗಯಾದಲ್ಲಿ ಜ್ಞಾನೋದಯವನ್ನು ಪಡೆದರು ಎಂಬ ನಂಬಿಕೆಯೂ ಇದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬುದ್ಧ ಪೂರ್ಣಿಮೆಯ ದಿನ ವೃಷಭ ರಾಶಿಯಲ್ಲಿ ಗುರು-ಶುಕ್ರರ ಸಂಯೋಗದಿಂದ (Guru Shukra Yuti) ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಗಜಲಕ್ಷ್ಮಿ ಯೋಗ ರಚನೆಯಾಗುತ್ತಿದೆ. ಈ ಯೋಗದ ಪರಿಣಾಮ ಎಲ್ಲಾ 12 ರಾಶಿಯವರ ಜೀವನದ ಮೇಲೂ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದರೆ, ಇದು ನಾಲ್ಕು ರಾಶಿಯವರ ಜೀವನದಲ್ಲಿ ಬಂಗಾರದ ಸಮಯವನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 


ಬುದ್ಧ ಪೂರ್ಣಿಮೆಯಂದು ಗಜಲಕ್ಷ್ಮಿ ರಾಜಯೋಗ: 4 ರಾಶಿಯವರಿಗೆ ಅದೃಷ್ಟ: 
ವೃಷಭ ರಾಶಿ: 

ಬುದ್ಧ ಪೂರ್ಣಿಮೆಯ ದಿನ ನಿರ್ಮಾಣವಾಗುತ್ತಿರುವ ಗಜಲಕ್ಷ್ಮಿ ರಾಜಯೋಗವು (Gajalakshmi Rajyoga) ವೃಷಭ ರಾಶಿಯವರ ಜೀವನದಲ್ಲಿ ಸುವರ್ಣ ದಿನಗಳನ್ನು ತರಲಿದೆ. ಈ ಜನರು ವೃತ್ತಿ ಬದುಕಿನಲ್ಲಿ ಊಹಿಸಲೂ ಸಾಧ್ಯವಾಗದಷ್ಟು ಕೀರ್ತಿ, ಯಶಸ್ಸನ್ನು ಪಡೆಯುತ್ತಾರೆ. ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ. 


ಇದನ್ನೂ ಓದಿ- Buddha Purnima: ಬುದ್ಧ ಪೂರ್ಣಿಮೆಯಂದು ಈ ಕೆಲಸ ಮಾಡುವುದರಿಂದ ಪೂರ್ವಜರ ಆಶೀರ್ವಾದ, ಶುಭ ಫಲ


ಕರ್ಕಾಟಕ ರಾಶಿ: 
ಗಜಲಕ್ಷ್ಮಿ ರಾಜಯೋಗವು ಕರ್ಕಾಟಕ ರಾಶಿಯವರಿಗೆ ಕೆಲಸದಲ್ಲಿ ಪ್ರಮೋಷನ್, ವ್ಯವಹಾರದಲ್ಲಿ ಲಾಭವನ್ನು ನೀಡಲಿದೆ. ಕೌಟುಂಬಿಕ ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳು ದೂರವಾಗಿ ಸುಖವಾದ ಜೀವನವನ್ನು ಅನುಭವಿಸುವಿರಿ. 


ಸಿಂಹ ರಾಶಿ: 
ಈ ವರ್ಷದ ಬುದ್ಧ ಪೂರ್ಣಿಮಾ ಸಿಂಹ ರಾಶಿಯವರಿಗೆ ಅದರಲ್ಲೂ ವಿಶೇಷವಾಗಿ ಈ ರಾಶಿಯ ವ್ಯಾಪಾರಸ್ಥರಿಗೆ ಹೆಚ್ಚು ಫಲಪ್ರದವಾಗಿದೆ. ಬಹಳ ಸಮಯದಿಂದ ಕಾಯುತ್ತಿದ್ದ ನಿಮ್ಮ ಕನಸೊಂದು ನನಸಾಗುವ ಸಮಯ. ಧನಲಾಭದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. 


ಇದನ್ನೂ ಓದಿ- ಬುದ್ಧ ಪೂರ್ಣಿಮಾ 2024: ಬುದ್ಧ ಪೂರ್ಣಿಮೆ ಯಾವಾಗ? ಸ್ನಾನ, ದಾನ & ಪೂಜಾ ಸಮಯ ತಿಳಿಯಿರಿ


ತುಲಾ ರಾಶಿ: 
ಬುದ್ಧ ಪೂರ್ಣಿಮೆಯ ದಿನ ನಿರ್ಮಾಣವಾಗುತ್ತಿರುವ ಗಜಲಕ್ಷ್ಮಿ ರಾಜಯೋಗವು ತುಲಾ ರಾಶಿಯವರಿಗೆ ದಿಢೀರ್ ಲಾಭವನ್ನು ತರಲಿದೆ. ಇದರಿಂದಾಗಿ ನಿಮ್ಮ ಬಹುತೇಕ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಲಿವೆ. ವ್ಯಾಪಾರಸ್ಥರು ಬಂಪರ್ ಲಾಭವನ್ನು ನಿರೀಕ್ಷಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.