Garuda Purana: ಗರುಡ ಪುರಾಣದ ಪ್ರಕಾರ ಸಾವು ಸಮೀಪಿಸಿದ ವ್ಯಕ್ತಿಗೆ ಈ ರೀತಿ ಅನುಭವವಾಗುತ್ತದೆ!

Astrology In Garuda Purana: ಸಾವು ಬಂದ ತಕ್ಷಣ ಒಂದು ಬಾಗಿಲು ತೆರೆಯುತ್ತದೆ. ಅಲ್ಲಿ ಕೆಲವರಿಗೆ ಜ್ವಾಲೆ ಕಂಡರೆ ಮತ್ತೆ ಕೆಲವರಿಗೆ ಪ್ರಕಾಶಮಾನವಾದ ಬೆಳಕು ಕಂಡುಬರುತ್ತದೆ. ಅವರವರ ಕರ್ಮಗಳಿಗೆ ಅನುಸಾರವಾಗಿ ಹೀಗೆ ಕಂಡುಬರುತ್ತದೆ ಎಂದು ಗರುಡಪುರಾಣದಲ್ಲಿ ವಿವರಿಸಲಾಗಿದೆ.

Astrology In Garuda Purana: ಗರುಡ ಪುರಾಣದಲ್ಲಿ ಮನುಷ್ಯನ ಸಾವಿನ ಬಗ್ಗೆ ಉಲ್ಲೇಖಿಸಲಾಗಿದೆ. ಯಾವುದೇ ವ್ಯಕ್ತಿಗೆ ಸಾವು ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಮತ್ತ ಸಾವಿನ ನಂತರ ಏನೆಲ್ಲಾ ಆಗುತ್ತದೆ ಅಂತಾ ವಿವರವಾಗಿ ತಿಳಿಸಲಾಗಿದೆ. ವ್ಯಕ್ತಿಯ ಸಾವಿನ ಬಗ್ಗೆ ಗರುಡ ಪುರಾಣದಲ್ಲಿ ಹೇಳಲಾಗಿರುವ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
  

1 /5

ಗರುಡ ಪುರಾಣದ ಪ್ರಕಾರ ಸಾವು ಸಮೀಪಿಸುವಾಗ ವ್ಯಕ್ತಿಗೆ ಅದರ ಸೂಚನೆ ಲಭಿಸುತ್ತದೆ. ಸಾವಿನ ಕೆಲವೇ ಸಮಯದ ಮೊದಲು ಆತ ತನ್ನ ಜೀವನದಲ್ಲಿ ಮಾಡಿದ ತಪ್ಪುಗಳು ಮತ್ತು ತನ್ನ ಬಾಲ್ಯದಿಂದ ಹಿಡಿದು ಇಲ್ಲಿಯವರೆಗಿನ ಬದುಕಿನ ಬಗ್ಗೆ ಮೆಲುಕು ಹಾಕಲು ಪ್ರಯತ್ನಿಸುತ್ತಾನೆ.

2 /5

ಸಾವಿನ ಕೆಲವೇ ಕ್ಷಣಗಳ ಮೊದಲು ಯಾವುದೇ ಒಬ್ಬ ವ್ಯಕ್ತಿ ಕೆಲವೊಂದು ಅರ್ಥವೇ ಆಗದಂತಹ ಮಾತುಗಳನ್ನು ಆಡುತ್ತಾನೆ. ಕೆಲವರು ತಮ್ಮ ತಪ್ಪುಗಳ ಬಗ್ಗೆ ಪಶ್ಚಾತ್ತಾಪ ಪಟ್ಟುಕೊಂಡರೆ ಮತ್ತೆ ಕೆಲವರು ತಾವು ಮಾಡಿದ ಕರ್ಮಗಳನ್ನು ನೆನೆಸಿಕೊಳ‍್ಳುತ್ತಾರೆ. 

3 /5

ಸಾವು ಸಮೀಪಿಸುವ ಸಂದರ್ಭದಲ್ಲಿ ಯಾವುದೇ ಒಬ್ಬ ವ್ಯಕ್ತಿಗೆ ಪೂರ್ವಜರು ಕನಸಿನಲ್ಲಿ ಬರುತ್ತಾರೆಂದು ನಂಬಲಾಗಿದೆ. ಕೆಲವೊಮ್ಮೆ ಪೂರ್ವಜರು ನಗುತ್ತಿರುವಂತೆ ಮತ್ತೆ ಕೆಲವರಿಗೆ ರೋಧಿಸುತ್ತಿರುವಂತೆ ಕಂಡುಬರುತ್ತದೆ.

4 /5

ಸಾವು ಸಮೀಪ ಬಂದಾಗ ವ್ಯಕ್ತಿಯು ಯಮದೂತರನ್ನು ನೋಡುತ್ತಾನೆ. ಕೆಲವರು ಆತನನ್ನು ನೋಡಿ ನಕ್ಕರೆ ಮತ್ತೆ ಕೆಲವರು ಬೇಸರಗೊಳ್ಳುತ್ತಾರೆ.

5 /5

ಸಾವು ಬಂದ ತಕ್ಷಣ ಒಂದು ಬಾಗಿಲು ತೆರೆಯುತ್ತದೆ. ಅಲ್ಲಿ ಕೆಲವರಿಗೆ ಜ್ವಾಲೆ ಕಂಡರೆ ಮತ್ತೆ ಕೆಲವರಿಗೆ ಪ್ರಕಾಶಮಾನವಾದ ಬೆಳಕು ಕಂಡುಬರುತ್ತದೆ. ಅವರವರ ಕರ್ಮಗಳಿಗೆ ಅನುಸಾರವಾಗಿ ಹೀಗೆ ಕಂಡುಬರುತ್ತದೆ ಎಂದು ಗರುಡಪುರಾಣದಲ್ಲಿ ವಿವರಿಸಲಾಗಿದೆ.