ದಿನಭವಿಷ್ಯ 04-12-2024: ಬುಧವಾರದಂದು `ಗಂಡ ಯೋಗ`, ಈ ರಾಶಿಯವರು ಮಾತಿಗೆ ಕಡಿವಾಣ ಹಾಕದಿದ್ದರೆ ಆಪತ್ತು..!
Today Horoscope 04th December 2024: ಈ ದಿನ ಬುಧವಾರ ಪೂ.ಷಾ. ನಕ್ಷತ್ರ, ಗಂಡ ಯೋಗ, ವಣಿಜ ಕರಣ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ ಶುಕ್ಲ ಪಕ್ಷ, ತೃತೀಯ ತಿಥಿಯ ಈ ದಿನ ಬುಧವಾರ ಪೂ.ಷಾ. ನಕ್ಷತ್ರ, ಗಂಡ ಯೋಗ, ವಣಿಜ ಕರಣ. ಇಂದಿನ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ಮಿಶ್ರ ಫಲಪ್ರದವಾದ ದಿನ. ಕೆಲಸದಲ್ಲಿ ನಿಮ್ಮ ಎದುರಾಳಿಗಳು ಕೆಲಸದಲ್ಲಿ ಅಡೆತಡೆಗಳನ್ನು ಉಂಟು ಮಾಡಬಹುದು. ಯಾವುದೇ ಕೆಲಸದಲ್ಲಿ ಆತುರವನ್ನು ತಪ್ಪಿಸಿ. ಮಕ್ಕಳ ಕಡೆಯಿಂದ ಶುಭ ಸುದ್ದಿ ಸ್ವೀಕರಿಸಬಹುದು. ಹೆತ್ತವರ ಸೇವೆ ಮಾಡಲು ಹಿಂಜರಿಯಬೇಡಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ಧನಾತ್ಮಕ ಫಲಿತಾಂಶಗಳನ್ನು ಪಡೆಯುವಿರಿ. ಒಂದರ ನಂತರ ಒಂದರಂತೆ ಶುಭ ಸುದ್ದಿಗಳನ್ನು ಕೇಳುವಿರಿ. ಕುಟುಂಬದ ಸದಸ್ಯರಿಂದ ನೀವು ಆಶ್ಚರ್ಯಕರ ಉಡುಗೊರೆಯನ್ನು ಸ್ವೀಕರಿಸುವಿರಿ. ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ಪಡೆಯುತ್ತೀರಿ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ನೀವಿಂದು ಪ್ರತಿ ಕೆಲಸದಲ್ಲೂ ತೊಡಕುಗಳನ್ನು ಕಾಣಬಹುದು. ನೀವು ಕೆಲವು ಕೆಲಸಗಳಲ್ಲಿ ಹೂಡಿಕೆ ಮಾಡಿದರೆ ಮಾತ್ರ ನಿರೀಕ್ಷಿತ ಫಲ ಪಡೆಯುವಿರಿ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಪಾಲುದಾರಿಕೆಯಲ್ಲಿ ಯಾವುದೇ ಒಪ್ಪಂದವನ್ನು ಅಂತಿಮಗಳಿಸಲು ಹೆಚ್ಚಿನ ಶ್ರಮವಹಿಸಬೇಕಾಗಬಹುದು.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಶಕ್ತಿಯುತವಾದ ದಿನವನ್ನು ನೀವಿಂದು ಅನುಭವಿಸುವಿರಿ. ನಿಮ್ಮ ಜವಾಬ್ದಾರಿಗಳನ್ನು ಸುಲಭವಾಗಿ ಪೂರೈಸುತ್ತೀರಿ. ನಿಮ್ಮ ಸಂಗಾತಿಯು ಕೆಲವು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಯಾವುದೇ ವಹಿವಾಟುಗಳನ್ನು ಅಂತಿಮಗೊಳಿಸಬಹುದು. ಆದರೆ, ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಯೋಚಿಸಿ ನಿರ್ಧರಿಸಿ.
ಇದನ್ನೂ ಓದಿ- ನವಪಂಚಮ ಯೋಗದಿಂದ ಈ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಬಂಪರ್ ಧನಲಾಭ, ಮುಟ್ಟಿದ್ದೆಲ್ಲಾ ಚಿನ್ನವಾಗುವ ಪರ್ವಕಾಲ!
ಸಿಂಹ ರಾಶಿಯವರ ಭವಿಷ್ಯ (Leo Horoscope):
ನಿಮಗಿಂದು ಪ್ರಮುಖ ದಿನವಾಗಿದೆ. ನಿಮ್ಮ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ಇಲ್ಲವೇ ಭಾರೀ ನಷ್ಟವನ್ನು ಎದುರಿಸಬೇಕಾಗುತ್ತದೆ. ವ್ಯವಹಾರದಲ್ಲಿ ಕಣ್ಣು ಮುಚ್ಚಿ ಬೇರೆಯವರನ್ನು ನಂಬಬೇಡಿ. ಮಕ್ಕಳೊಂದಿಗೆ ಕೋಪಗೊಳ್ಳುವುದನ್ನು ತಪ್ಪಿಸಿ. ಹೊಸ ವಾಹನ ಖರೀದಿಸುವ ಯೋಗವೂ ಇದೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಂದು ಪ್ರಗತಿಯ ದಿನವಾಗಿರುತ್ತದೆ. ನಿಮ್ಮ ಆದಾಯ ಹೆಚ್ಚಾಗಲಿದ್ದು ಇದು ಮನೆಯವರ ಸಂತೋಷವನ್ನು ಹೆಚ್ಚಿಸಲಿದೆ. ಪೋಷಕರು ನಿಮಗೆ ಕೆಲಸದ ಬಗ್ಗೆ ನೀಡುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಿಮ್ಮ ಇಮೇಜ್ ಸುಧಾರಿಸುತ್ತದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ನಿಮಗೆ ಮೋಜಿನ ದಿನವಾಗಿರುತ್ತದೆ. ನಿಮ್ಮ ಜವಾಬ್ದಾರಿಗಳ ಬಗ್ಗೆ ನೀವು ಸಂಪೂರ್ಣ ಗಮನಹರಿಸಬೇಕು. ಕುಟುಂಬದ ಸದಸ್ಯರ ಆರೋಗ್ಯದಲ್ಲಿ ಕ್ಷೀಣತೆ ಉಂಟಾಗಬಹುದು. ಇದರಿಂದಾಗಿ ಮನಸ್ಸು ತಲ್ಲಣಗೊಳ್ಳಬಹುದು. ಪ್ರೀತಿಯ ಜೀವನದಲ್ಲಿ ಶುಭ ಸುದ್ದಿ ಕೇಳಬಹುದು.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಕಾನೂನಾತ್ಮಕ ವಿಷಯಗಳಲ್ಲಿ ಇಂದು ವಿಜಯ ಸಾಧಿಸುವಿರಿ. ಪೂರ್ವಜರ ಆಸ್ತಿಯಿಂದ ಲಾಭವಾಗಲಿದೆ. ನೀವು ಕುಟುಂಬದ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕಾಗುತ್ತದೆ. ನಿಮ್ಮ ಮಗುವಿನ ಶಿಕ್ಷಣದ ಬಗ್ಗೆ ಸ್ವಲ್ಪ ಕಡಿಮೆ ಗಮನ ಹರಿಸುವುದು ನಿಮ್ಮ ಉದ್ವೇಗವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ- ತುಳಸಿ ಗಿಡಕ್ಕೆ ಈ ದಿನದಂದು ತಪ್ಪಿಯೂ ನೀರು ಹಾಕಬೇಡಿ.. ಲಕ್ಷ್ಮೀಯ ಕೋಪಕ್ಕೆ ಗುರಿಯಾಗಿ ಸಂಪತ್ತು ನಾಶವಾಗುವುದು!
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ನೀವು ಚಿಂತನಶೀಲವಾಗಿ ಕೆಲಸಗಳನ್ನು ಮಾಡುವ ದಿನವಾಗಿರುತ್ತದೆ. ನಿಮ್ಮ ಕೆಲಸಕ್ಕಿಂತ ಇತರರ ಕೆಲಸಗಳ ಮೇಲೆ ಹೆಚ್ಚು ಗಮನಹರಿಸುತ್ತೀರಿ. ಇದು ಕೆಲಸದ ಸ್ಥಳದಲ್ಲಿ ನಿಮ್ಮ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನಿಮ್ಮ ಬಾಸ್ ನಿಮಗೆ ಕೆಲವು ದೊಡ್ಡ ಜವಾಬ್ದಾರಿಗಳನ್ನು ನೀಡಬಹುದು.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ನಿಮಗೆ ಸಂಪತ್ತು ಹೆಚ್ಚಾಗಲಿದೆ. ಹೆತ್ತವರ ಆಶೀರ್ವಾದದಿಂದ ನಿಮ್ಮ ಯಾವುದೇ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಬಹುದು. ನಿಮ್ಮ ಕುಟುಂಬದ ಜವಾಬ್ದಾರಿಗಳ ಬಗ್ಗೆ ನೀವು ಸಂಪೂರ್ಣ ಗಮನಹರಿಸಬೇಕು. ನಿಮ್ಮ ಮಾತಿನ ಮೇಲೆ ಕಂಟ್ರೋಲ್ ಇರಲಿ. ಇಲ್ಲವೇ, ಸಮಸ್ಯೆಗಳು ಹೆಚ್ಚಾಗುತ್ತವೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ನೀವು ಮಿಶ್ರ ಫಲಗಳನ್ನು ಅನುಭವಿಸುವಿರಿ. ಕುಟುಂಬ ಸದಸ್ಯರು ಕೆಲಸದ ನಿಮಿತ್ತ ಮನೆಯಿಂದ ದೂರ ತೆರಳಬೇಕಾಗಬಹುದು. ಈ ಸಂದರ್ಭದಲ್ಲಿ ನೀವೂ ಧೈರ್ಯವಾಗಿದ್ದು, ಅವರಿಗೂ ಧೈರ್ಯ ತುಂಬಿರಿ. ನಿಮ್ಮ ನೆಚ್ಚಿನ ವಸ್ತುಗಳು ಕಳುವಾಗುವ ಸಂಭವವಿರುವುದರಿಂದ ಈ ಬಗ್ಗೆ ಜಾಗರೂಕರಾಗಿರಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ನಿಮಗೆ ಒಳ್ಳೆಯ ದಿನವಾಗಿರಲಿದೆ. ಯಾವುದೇ ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಹೆಚ್ಚಿನ ಪರಿಹಾರವನ್ನು ಪಡೆಯುತ್ತೀರಿ. ತಂದೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ನೀಡಬಹುದು. ಆದರೆ, ವ್ಯವಹಾರದಲ್ಲಿ ಬೇರೆಯವರನ್ನು ಸುಲಭವಾಗಿ ನಂಬಬೇಡಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.