Ganesh Chaturthi 2023: ‘ಗಣಪತಿ ಬಪ್ಪ ಮೋರ್ಯ’ ಎನ್ನುವುದೇಕೆ? ಇದರ ಹಿಂದಿನ ಕಥೆ ತಿಳಿಯಿರಿ
Ganesh Chaturthi 2023: ಗಣಪತಿ ಮೂರ್ತಿಯನ್ನು ನಿಮಜ್ಜನ ಮಾಡುವಾಗ ‘ಗಣಪತಿ ಬಪ್ಪಾ ಮೋರಯಾ, ಮುಂದಿನ ವರ್ಷ ಬಾ ಬೇಗ ಬಾರಯ್ಯಾ’ ಎಂಬ ಘೋಷಣೆ ಮೊಳಗುತ್ತದೆ.
ಗಣೇಶ ಚತುರ್ಥಿ 2023: ಗಣೇಶ ಚತುರ್ಥಿಯಂದು ಕಿವಿಯಲ್ಲಿ ಒಂದೇ ಒಂದು ಪ್ರತಿಧ್ವನಿ ಕೇಳಿಸುತ್ತದೆ. ಅದು ‘ಗಣಪತಿ ಬಪ್ಪ ಮೋರಯಾʼ... ಎಂಬುದು. ಈ 3 ಪದಗಳ ಅರ್ಥವನ್ನು ನೀವು ಎಂದಾದರೂ ತಿಳಿದುಕೊಳ್ಳಲು ಪ್ರಯತ್ನಿಸಿದ್ದೀರಾ? ಅಷ್ಟಕ್ಕೂ ಗಣಪತಿಯನ್ನು ಮೋರಯಾ ಎಂದು ಏಕೆ ಕರೆಯುತ್ತಾರೆ? ಈ ಪದಗಳ ಅರ್ಥ ನಿಮಗೆ ತಿಳಿದಿಲ್ಲದಿದ್ದರೆ ಇಲ್ಲಿದೆ ಅದಕ್ಕೆ ಉತ್ತರ. ಇದರಿಂದ ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಕುತೂಹಲಕ್ಕೆ ಫುಲ್ ಸ್ಟಾಪ್ ಸಿಗುತ್ತದೆ.
ಗಣೇಶನ ಅವತಾರ
ಗಣೇಶ ಪುರಾಣದ ಪ್ರಕಾರ ಪ್ರಾಚೀನ ಕಾಲದಲ್ಲಿ ಸಿಂಧು ಎಂಬ ಅತ್ಯಂತ ಶಕ್ತಿಶಾಲಿ ರಾಕ್ಷಸ ಇದ್ದನು. ಶಕ್ತಿಯುತವಾಗಿರುವುದರ ಜೊತೆಗೆ ಆತ ತುಂಬಾ ಕೆಟ್ಟ ಪ್ರವೃತ್ತಿಯನ್ನು ಹೊಂದಿದ್ದ. ಜನರಿಗೆ ತೊಂದರೆ ಕೊಡುವ ಮೂಲಕ ಆತ ಉಪಟಳ ನೀಡುತ್ತಿದ್ದ. ಆತನ ದೌರ್ಜನ್ಯಕ್ಕೆ ಎಲ್ಲರೂ ಬೇಸತ್ತು ಹೋಗಿದ್ದರು. ಅವನ ದಬ್ಬಾಳಿಕೆಯ ಮತ್ತು ಕ್ರೂರಿ ಸ್ವಭಾವದಿಂದ ಮನುಷ್ಯರು ಮಾತ್ರವಲ್ಲದೆ ದೇವ-ದೇವತೆಗಳೂ ಸಹ ಬೇಸರಗೊಂಡಿದ್ದರು. ಋಷಿಮುನಿಗಳಿಗೆ ಯಾಗ ಇತ್ಯಾದಿಗಳನ್ನು ಮಾಡುವುದು ಕಷ್ಟವಾಯಿತು. ಎಲ್ಲರೂ ಆತನ ಕಷ್ಟ ತಪ್ಪಿಸಲು ದಾರಿ ಹುಡುಕುತ್ತಿದ್ದರು. ಅವನಿಂದ ರಕ್ಷಣೆ ಪಡೆಯಲು ದೇವತೆಗಳು ಗಣೇಶನನ್ನು ಆರಾಧಿಸಿದರು.
ಇದನ್ನೂ ಓದಿ: ಈ ರಾಶಿಯಲ್ಲಿ ಏಕಕಾಲಕ್ಕೆ 2 ರಾಜಯೋಗಗಳ ನಿರ್ಮಾಣ, ಶನಿ ಕೃಪೆಯಿಂದ ಈ ಜನರ ಮೇಲೆ ಅಪಾರ ಧನವೃಷ್ಟಿ!
ದೇವತೆಗಳು ಸಿಂಧು ಎಂಬ ರಾಕ್ಷಸನನ್ನು ಕೊಲ್ಲುವಂತೆ ಗಣಪನಿಗೆ ಒತ್ತಾಯಿಸಿದರು. ಅವನು ಈ ಜಗತ್ತಿನಲ್ಲಿದ್ದಾಗ ಯಾರೂ ಶಾಂತಿಯಿಂದ ಬದುಕಲು ಸಾಧ್ಯವಿಲ್ಲವೆಂದು ಸಹ ಹೇಳಿದರು. ಗಣಪತಿಯು ಆ ರಾಕ್ಷಸನಿಂದ ತೊಂದರೆಗೊಳಗಾದ ಜನರ ದುಃಖ ಹೋಗಲಾಡಿಸಲು ಅವತರಿಸಿದನು. ಆತನನ್ನು ನಾಶಮಾಡಲು ನವಿಲನ್ನು ತನ್ನ ವಾಹನವಾಗಿ ಆರಿಸಿಕೊಂಡನು ಜೊತೆಗೆ 6 ತೋಳುಗಳನ್ನು ಹೊಂದಿರುವ ರೂಪ ಪಡೆದನು. ಗಣಪತಿಯು ಘೋರ ಯುದ್ಧದಲ್ಲಿ ಆ ರಾಕ್ಷಸನನ್ನು ಕೊಂದು ಜನರನ್ನು ರಕ್ಷಿಸಿದನು. ಅಂದಿನಿಂದ ಜನರು ಅವರ ಈ ಅವತಾರವನ್ನು "ಗಣಪತಿ ಬಪ್ಪಾ ಮೋರಯಾ " ಎಂಬ ಘೋಷಣೆಯೊಂದಿಗೆ ಪೂಜಿಸುತ್ತಾರೆ. ಗಣಪತಿಯು ಕುಟುಂಬ ಮತ್ತು ಸಮಾಜದಲ್ಲಿನ ದಬ್ಬಾಳಿಕೆಗಾರರನ್ನು ನಾಶಪಡಿಸುತ್ತಾನೆ ಮತ್ತು ಭಗವಂತನ ಭಕ್ತಿಯಲ್ಲಿ ಮಗ್ನರಾಗಿರಲು ವಾತಾವರಣವನ್ನು ಸೃಷ್ಟಿಸುತ್ತಾನೆಂಬ ನಂಬಿಕೆ ಜನರಲ್ಲಿದೆ.
ಇದೇ ಕಾರಣಕ್ಕೆ ಗಣಪತಿ ಮೂರ್ತಿಯನ್ನು ನಿಮಜ್ಜನ ಮಾಡುವಾಗ ‘ಗಣಪತಿ ಬಪ್ಪಾ ಮೋರಯಾ, ಮುಂದಿನ ವರ್ಷ ಬಾ ಬೇಗ ಬಾರಯ್ಯಾ’ ಎಂಬ ಘೋಷಣೆ ಮೊಳಗುತ್ತದೆ. ಗಣೇಶನ ಮಯೂರೇಶ್ವರ ರೂಪವು ಗಣಪತಿ ಬಪ್ಪಾಗೆ ಸಂಬಂಧಿಸಿದ ಮೋರಿಯಾ ಪದದ ಹಿಂದೆ ಇದೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿದ್ದವಾಗ್ತಿದೆ ಕೋಟಿ ಕೋಟಿ ನೋಟು- ಲಕ್ಷ ಲಕ್ಷ ನಾಣ್ಯಗಳ ಅಲಂಕಾರ ಗಣಪತಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.