Plant to worship in the month of Shravana: ಭಾರತದ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಾದ ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ತಮಿಳುನಾಡು ಭಾಗಗಳಲ್ಲಿ ಈ ಬಾರಿ ಶ್ರಾವಣ ಮಾಸವು 18 ಜುಲೈ 2023 ರಿಂದ ಪ್ರಾರಂಭವಾಗಿ, 15 ಸೆಪ್ಟೆಂಬರ್ 2023 ರಂದು ಕೊನೆಗೊಳ್ಳುತ್ತದೆ. ಇನ್ನು ಈ ಬಾರಿಯ ಶ್ರಾವಣ, ಎರಡು ತಿಂಗಳು ಇರುವುದರಿಂದ ಭಕ್ತರು ಶಿವನ ಆಶೀರ್ವಾದ ಪಡೆಯಲು ಎರಡು ಪಟ್ಟು ಸಮಯವನ್ನು ಪಡೆಯುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಮೃಣಾಲ್..! ಸೀತಾ.. ಫೋಟೋಸ್‌ ನೋಡಿ


ಶ್ರಾವಣ ಮಾಸ ಈ ಬಾರಿ 59 ದಿನಗಳಿರುತ್ತದೆ. ಈ ಸಂದರ್ಭದಲ್ಲಿ ಮಾಡುವ ಶುಭ ಕಾರ್ಯಗಳು ಬಹಳಷ್ಟು ಲಾಭವನ್ನು ನೀಡುತ್ತವೆ. ಅಷ್ಟೇ ಅಲ್ಲದೆ, ಈ ಸಮಯದಲ್ಲಿ ಶಿವನಿಗೆ ಪ್ರಿಯವಾದ ಕೆಲಸಗಳನ್ನು ಮಾಡುತ್ತಾ, ಸೋಮವಾರದಂದು ಉಪವಾಸ ಮತ್ತು ಪೂಜೆಯನ್ನು ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಮಾಡಬೇಕು.


ಇನ್ನು ಧರ್ಮದ ಹೊರತಾಗಿ, ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯದಲ್ಲಿಯೂ ಶ್ರಾವಣ ಮಾಸಕ್ಕೆ ಸಂಬಂಧಿಸಿದಂತೆ ಕೆಲವು ವಿಶೇಷ ಕ್ರಮಗಳನ್ನು ನೀಡಲಾಗಿದೆ. ಶ್ರಾವಣ ಮಾಸದಲ್ಲಿ ನೆಡಬೇಕಾದ ಮಂಗಳಕರ ಸಸ್ಯಗಳು ಇದರಲ್ಲಿ ಸೇರಿವೆ. ಶಿವನಿಗೆ ಪ್ರಿಯವಾದ ಈ ಗಿಡಗಳನ್ನು ಶ್ರಾವಣ ಮಾಸದಲ್ಲಿ ಮನೆಯಲ್ಲಿ ನೆಟ್ಟರೆ ಅಪಾರ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಮಳೆಗಾಲದಲ್ಲಿ ಈ ಗಿಡಗಳನ್ನು ನೆಟ್ಟರೆ ಅದೃಷ್ಟ ಬರುತ್ತದೆ.


ಬಿಲ್ವಪತ್ರೆ ಗಿಡ: ಬಿಲ್ವಪತ್ರೆ ಎಂದರೆ ಶಿವನಿಗೆ ಬಹಳ ಪ್ರಿಯ. ಅದಕ್ಕಾಗಿಯೇ ಶಿವಲಿಂಗದ ಮೇಲೆ ಬಿಲ್ವಪತ್ರೆಯನ್ನು ಅರ್ಪಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಬಿಲ್ವಪತ್ರೆ ಇದ್ದರೆ, ಅದು ಎಲ್ಲಾ ವಾಸ್ತು ದೋಷಗಳನ್ನು ನಿವಾರಿಸುತ್ತದೆ. ಬಿಲ್ವಪತ್ರೆ ಮರ, ಗಿಡ ಇರುವ ಮನೆಯಲ್ಲಿ ಹಣದ ಕೊರತೆಯಿರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ, ಲಕ್ಷ್ಮಿ ಮಾತೆಯ ಆಶೀರ್ವಾದ ಯಾವಾಗಲೂ ಇರುತ್ತದೆ.


ತುಳಸಿ ಗಿಡ: ಶಿವನಿಗೆ ತುಳಸಿ ನೈವೇದ್ಯ ಮಾಡುವುದು ನಿಷಿದ್ಧವಾದರೂ ಬಿಲ್ವಪತ್ರೆ ಮಾಸದಲ್ಲಿ ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದು ತುಂಬಾ ಶ್ರೇಯಸ್ಕರ. ತುಳಸಿಯನ್ನು ಪ್ರತಿನಿತ್ಯ ಪೂಜಿಸುವುದರಿಂದ ತುಂಬಾ ಪ್ರಯೋಜನವಾಗುತ್ತದೆ. ಇದಲ್ಲದೆ, ಕಾರ್ತಿಕ ಮಾಸವು ತುಳಸಿ ಗಿಡವನ್ನು ಮನೆಯಲ್ಲಿ ನೆಡಲು ಸಹ ಬಹಳ ಪ್ರಶಸ್ತವಾಗಿದೆ.


ಬಾಳೆ ಗಿಡ: ಬಾಳೆ ಗಿಡವನ್ನು ಪೂಜಿಸುವುದರಿಂದ ಭಗವಾನ್ ವಿಷ್ಣು ಪ್ರಸನ್ನನಾಗುತ್ತಾನೆ. ಶ್ರಾವಣ ಮಾಸದ ಯಾವುದೇ ಏಕಾದಶಿಯಂದು ಮನೆಯಲ್ಲಿ ಬಾಳೆ ಗಿಡವನ್ನು ನೆಟ್ಟು ಪೂಜಿಸಿ. ಹೀಗೆ ಮಾಡುವುದರಿಂದ ಪ್ರತಿಯೊಂದು ಕೆಲಸದಲ್ಲೂ ಅದೃಷ್ಟವು ನಿಮ್ಮನ್ನು ಬೆಂಬಲಿಸಲು ಪ್ರಾರಂಭಿಸುತ್ತದೆ.


ಶಮಿ ಗಿಡ: ಶ್ರಾವಣ ಮಾಸದ ಯಾವುದೇ ಶನಿವಾರದಂದು ಮನೆಯಲ್ಲಿ ಶಮಿ ಗಿಡವನ್ನು ನೆಟ್ಟರೆ ಶಿವ ಹಾಗೂ ಶನಿ ದೇವರ ಆಶೀರ್ವಾದ ದೊರೆಯುತ್ತದೆ. ಈ ರೀತಿ ಮಾಡುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ನೀವು ಬಹಳಷ್ಟು ಸಂಪತ್ತು ಮತ್ತು ಪ್ರಗತಿಯನ್ನು ಪಡೆಯುತ್ತೀರಿ.


ಆಲದ ಗಿಡ: ಶ್ರಾವಣ ಮಾಸದಲ್ಲಿ ಆಲದ ಗಿಡಕ್ಕೆ ಪ್ರತಿದಿನ ನೀರು ಹಾಕುವುದು ಕೂಡ ತುಂಬಾ ಮಂಗಳಕರ. ಪ್ರತಿ ಶನಿವಾರ ಸಂಜೆ ಈ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ಹೀಗೆ ಮಾಡುವುದರಿಂದ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ.


ಇದನ್ನೂ ಓದಿ: 1 ವರ್ಷ ಈ ರಾಶಿಯವರ ಯಶಸ್ಸನ್ನು ತಡೆಯುವವರೇ ಇಲ್ಲ: ಉದ್ಯೋಗದಲ್ಲಿ ಬಡ್ತಿ, ಕಾಣುವರು ಸಾಲು ಸಾಲು ಗೆಲುವು!


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3COfPCC 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.