Goddess Lakshmi Favorite Zodiac Signs: ಧರ್ಮಗ್ರಂಥಗಳಲ್ಲಿ ತಾಯಿ ಲಕ್ಷ್ಮೀದೇವಿಯನ್ನು ಸಂಪತ್ತಿನ ಅಧಿದೇವತೆ ಎಂದು ಬಣ್ಣಿಸಲಾಗಿದೆ. ಯಾವ ವ್ಯಕ್ತಿಯ ಮೇಲೆ ತಾಯಿ ಲಕ್ಷ್ಮಿಯ ಆಶೀರ್ವಾದವಿರುತ್ತೋ ಅವರು ಜೀವನದಲ್ಲಿ ಸುಖ-ಸಂತೋಷ, ಸಂಪತ್ತಿನ ಜೊತೆಗೆ ಐಷಾರಾಮಿ ಜೀವನವನ್ನು ಅನುಭವಿಸುತ್ತಾರೆ. ಅಂತೆಯೇ, ಲಕ್ಷ್ಮಿಯ ಮುನಿಸಿಗೆ ಕಾರಣವಾದ ವ್ಯಕ್ತಿ ಬೀದಿಗೆ ಬರಲು ಹೆಚ್ಚು ಸಮಯ ಬೇಕಾಗುವುದಿಲ್ಲ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ತಾಯಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಪ್ರಯತ್ನಿಸುತ್ತಾರೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದ್ವಾದಶ ರಾಶಿಗಳಲ್ಲಿ ಐದು ರಾಶಿಯವರನ್ನು ಲಕ್ಷ್ಮಿ ದೇವಿಯ ನೆಚ್ಚಿನ ರಾಶಿಗಳು ಎಂದು ಹೇಳಲಾಗುತ್ತದೆ. ಈ ಐದು ರಾಶಿಯವರ ಮೇಲೆ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯ ಕೃಪಾಕಟಾಕ್ಷ ಸದಾ ಇರುತ್ತದೆ. ಅವರು ಎಂದಿಗೂ ಕೂಡ ಹಣಕಾಸಿನ ತೊಂದರೆಯನ್ನು ಅನುಭವಿಸುವುದಿಲ್ಲ. ಒಂದೊಮ್ಮೆ ಯಾವುದೇ ರೀತಿಯ ಹಣಕಾಸಿನ ಮುಗ್ಗಟ್ಟು ಕಾಣಿಸಿಕೊಂಡರೂ ಕೂಡ ಒಂದಲ್ಲಾ ಒಂದು ರೂಪದಲ್ಲಿ ತಾಯಿ ಅವರಿಗೆ ನೆರವು ನೀಡುತ್ತಾಳೆ ಎಂದು ನಂಬಲಾಗಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 


ಈ ಐದು ರಾಶಿಯವರಿಗೆ ಸದಾ ಇರುತ್ತೆ ತಾಯಿ ಲಕ್ಷ್ಮಿ ಆಶೀರ್ವಾದ:- 
ವೃಷಭ ರಾಶಿ: 

ವೃಷಭ ರಾಶಿಯ ಅಧಿಪತಿ ಗ್ರಹ- ಶುಕ್ರ. ಈ ಗ್ರಹವು ಸಂಪತ್ತು, ಸಮೃದ್ಧಿ ಮತ್ತು ಖ್ಯಾತಿಯ ಅಂಶವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಯಶಸ್ವಿಯಾಗುವುದನ್ನು ಯಾರಿಂದಲೂ ಸಾಧ್ಯವಿಲ್ಲ. ಇದರೊಂದಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ, ವೃಷಭ ರಾಶಿಯನ್ನು ತಾಯಿ ಲಕ್ಷ್ಮಿಯ ಪ್ರಿಯ ರಾಶಿಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಸದಾ ಲಕ್ಷ್ಮಿ ಆಶೀರ್ವಾದಕ್ಕೆ ಪಾತ್ರರಾಗುವ ವೃಷಭ ರಾಶಿಯವರು  ಉದ್ಯೋಗ ಮತ್ತು ವ್ಯವಹಾರ ಎರಡರಲ್ಲೂ ವಿಜಯ ಪತಾಕೆಯನ್ನು ಹಾರಿಸುತ್ತಾರೆ. 


ಇದನ್ನೂ ಓದಿ- Shani Vakri: ನಾಲ್ಕು ದಿನಗಳ ಬಳಿಕ ಈ ರಾಶಿಯವರಿಗೆ ಭರ್ಜರಿ ಧನ ಲಾಭ ನೀಡಲಿದ್ದಾನೆ ವಕ್ರೀ ಶನಿ


ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಜ್ಯೋತಿಷ್ಯದಲ್ಲಿ ಚಂದ್ರನನ್ನು ಸಂತೋಷ, ಶಾಂತಿ, ಧ್ಯಾನ, ಯೋಗ, ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಈ ಚಂದ್ರನ ರಾಶಿಯನ್ನೂ ಕೂಡ ಲಕ್ಷ್ಮಿ ದೇವಿಯ ಪ್ರಿಯ ರಾಶಿ ಎಂದು ಬಣ್ಣಿಸಲಾಗುತ್ತದೆ. ಈ ರಾಶಿಯ ಜನರು ಸಂಪತ್ತಿನ ಅಧಿದೇವತೆಯ ಆಶೀರ್ವಾದದಿಂದಾಗಿ  ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.  


ಸಿಂಹ ರಾಶಿ: 
ಸಿಂಹ ರಾಶಿಯ ಅಧಿಪತಿ ಗ್ರಹಗಳ ರಾಜ ಸೂರ್ಯ ದೇವ. ಈ ಕಾರಣದಿಂದಾಗಿ, ಅವರು ಉತ್ಸಾಹ, ತೀಕ್ಷ್ಣ, ದೃಢನಿರ್ಧಾರ, ಕಠಿಣ ಪರಿಶ್ರಮ ಮತ್ತು ತೀಕ್ಷ್ಣ ಮನಸ್ಸಿನವರಾಗಿದ್ದು, ಇದರಿಂದಲೇ ಸಂಪತ್ತು ಮತ್ತು ಖ್ಯಾತಿ ಎರಡನ್ನೂ ಪಡೆಯುತ್ತಾರೆ. ಈ ರಾಶಿಯವರ ಮೇಲೆ ಸದಾ ಲಕ್ಷ್ಮಿ ಕೃಪೆ ಇರುವುದರಿಂದ ಇವರು ಎಂದಿಗೂ ಕೂಡ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುವುದಿಲ್ಲ. ಒಂದೊಮ್ಮೆ ಯಾವುದೇ ರೀತಿಯ ತೊಂದರೆ ಎದುರಾದರೂ ಕೂಡ ಲಕ್ಷ್ಮಿ ದೇವಿ ಒಂದಲ್ಲಾ ಒಂದು ರೂಪದಲ್ಲಿ ಇವರಿಗೆ ಸಹಾಯ ಮಾಡುತ್ತಾಳೆ ಎಂದು ಹೇಳಲಾಗುತ್ತದೆ. 


ತುಲಾ ರಾಶಿ: 
ತುಲಾ ರಾಶಿಯ ಅಧಿಪತಿಯೂ ಕೂಡ ಶುಕ್ರನೇ. ಮೊದಲೇ ತಿಳಿಸಿದಂತೆ ಸುಖ-ಸಂಪತ್ತು, ಐಷಾರಾಮಿ ಜೀವನ ಕಾರಕನಾದ ಶುಕ್ರನ ಕೃಪೆ ಸದಾ ಇವರ ಮೇಲೆ ಇರುತ್ತದೆ. ಇದರೊಂದಿಗೆ ಲಕ್ಷ್ಮಿಯ ಆಶೀರ್ವಾದದಿಂದ, ಈ ರಾಶಿಯ ಜನರು ಸಂಪತ್ತು, ಸಮೃದ್ಧಿ ಮತ್ತು ಖ್ಯಾತಿಯನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.  


ಇದನ್ನೂ ಓದಿ- Rahu Gochar 2023: ಮೀನ ರಾಶಿಯಲ್ಲಿ ರಾಹು- ಈ ರಾಶಿಯವರಿಗೆ ಬಂಪರ್ ಪ್ರಯೋಜನ


ವೃಶ್ಚಿಕ ರಾಶಿ: 
ವೃಶ್ಚಿಕ ರಾಶಿಯ ಅಧಿಪತಿ ಗ್ರಹ ಮಂಗಳ. ಶೌರ್ಯ, ಶಕ್ತಿ, ಧೈರ್ಯ ಮತ್ತು ಶಕ್ತಿಯ ಅಂಶವಾಗಿದೆ ಎಂದು ನಂಬಲಾಗಿದೆ.  ಇದಲ್ಲದೆ, ಧರ್ಮಗ್ರಂಥಗಳಲ್ಲಿ ಮಂಗಳನನ್ನು ಗ್ರಹಗಳ ಕಮಾಂಡರ್ ಎಂದು ಕರೆಯಲಾಗುತ್ತದೆ. ಈ ರಾಶಿಯವರ ಮೇಲೂ ಸದಾ ಕಾಲ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಇರುತ್ತದೆ. ಹೀಗಾಗಿಯೇ ಇವರು ಶುದ್ಧ ಮನಸ್ಸಿನಿಂದ ಏನಾದರೂ ಕೆಲಸ ಮಾಡಬೇಕು ಎಂದು ಗಟ್ಟಿಯಾಗಿ ನಿರ್ಧರಿಸಿದರೆ ಹೇಗಾದರೂ ಸಂಪತ್ತಿನ ಕ್ರೋಢೀಕರಣವಾಗುತ್ತದೆ. ಇವರ ಒಳ್ಳೆಯ ತನವೇ ಇವರಿಗೆ ದಾರಿ ದೀಪ ಎಂದು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ