ಬೆಂಗಳೂರು : ಶುಕ್ರ ಗ್ರಹವನ್ನು ಸಂಪತ್ತು, ವೈಭವ, ಐಶ್ವರ್ಯ, ಐಷಾರಾಮಿ ಜೀವನ, ದೈಹಿಕ ಸಂತೋಷ, ಪ್ರೀತಿ, ಸೌಂದರ್ಯದ ಅಂಶ ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಶುಕ್ರನ ಚಲನೆಯಲ್ಲಿನ ಬದಲಾವಣೆಯು ಎಲ್ಲಾ ಜನರ ಜೀವನದ ಮತ್ತು ಎಲ್ಲಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ. ಶುಕ್ರ ಗ್ರಹ ಕೆಲವು ತಿಂಗಳುಗಳ ಕಾಲ ಹಿಮ್ಮುಖವಾಗಿ ಚಲಿಸುತ್ತಿತ್ತು. ಇತ್ತೀಚೆಗೆ, ಅಂದರೆ ಸೆಪ್ಟೆಂಬರ್ 4, 2023 ರಿಂದ, ಮತ್ತೆ ನೇರ ನಡೆಗೆ ಮರಳಿದ್ದಾನೆ. ಶುಕ್ರನ ನೇರ ಚಲನೆಯು ಕೆಲವು ರಾಶಿಯವರ ಮೇಲೆ  ಸಂಪತ್ತಿನ ಮಳೆಯನ್ನೇ ಸುರಿಸಲಿದೆ. ಶುಕ್ರನ ನೇರ ಚಲನೆಯು ಕೆಲವು ರಾಶಿಯವರಿಗೆ  ಭಾರೀ ಪ್ರಯೋಜನಗಳನ್ನು ನೀಡುತ್ತದೆ. ಈ ಜನರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಜೀವನದಲ್ಲಿ ಸಂತೋಷ ಮತ್ತು ಸೌಕರ್ಯಗಳು ಹೆಚ್ಚಾಗುತ್ತವೆ. 


COMMERCIAL BREAK
SCROLL TO CONTINUE READING

ಈ ರಾಶಿಯವರ ಜೀವನದಲ್ಲಿ ಹಣದ ಮಳೆಗರೆಯುವನು ಶುಕ್ರ : 
ಕರ್ಕಾಟಕ ರಾಶಿ : ಶುಕ್ರ ಗ್ರಹವು ಕರ್ಕಾಟಕ ರಾಶಿಯಲ್ಲಿ ನೇರ ನಡೆಗೆ ಮರಳಿದ್ದಾನೆ. ಕರ್ಕಾಟಕ ರಾಶಿಯವರು ಶುಕ್ರನ ನೇರ ಚಲನೆಯಿಂದ ಸಾಕಷ್ಟು ಲಾಭವನ್ನು ಪಡೆಯುತ್ತಾರೆ. ಈ  ರಾಶಿಯವರ ಎಲ್ಲಾ ಯೋಜನೆಗಳು ಯಶಸ್ವಿಯಾಗಲು ಪ್ರಾರಂಭಿಸುತ್ತವೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಹೂಡಿಕೆಯಿಂದ ಲಾಭ ಸಿಗಲಿದೆ. ಆದಾಯವು ಹೆಚ್ಚಾಗಬಹುದು. ಖರ್ಚು ಕೂಡಾ ಹೆಚ್ಚಾಗಬಹುದು. ಆದರೆ ಹಣದ ಕೊರತೆ ಮಾತ್ರ ಎದುರಾಗುವುದಿಲ್ಲ. 


ಇದನ್ನೂ ಓದಿ :  ಈ ರಾಶಿಯಲ್ಲಿ ರಾಜಯೋಗ: ಒದಗಿ ಬರುವುದು ಧನ ಕನಕ ! ಪ್ರಾಪ್ತಿಯಾಗುವುದು ಸುಖ ಸಮೃದ್ದಿಯ ಬದುಕು


ಸಿಂಹ ರಾಶಿ : ಶುಕ್ರನ ನೇರ ಸಂಚಾರವು ಸಿಂಹ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಈ ರಾಶಿಯವರ ಧೈರ್ಯ ಹೆಚ್ಚಾಗುತ್ತದೆ. ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಹಣ ಗಳಿಸುವುದು ಸಾಧ್ಯವಾಗುವುದು. ಹೊಸ ಉದ್ಯೋಗಾವಕಾಶಗಳು ಎದುರಾಗಬಹುದು. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವುದು ಸಾಧ್ಯವಾಗುವುದು. 


ಕನ್ಯಾ ರಾಶಿ : ಶುಕ್ರನ ನೇರ ಸಂಚಾರವು ಕನ್ಯಾ ರಾಶಿಯವರಿಗೆ ಆದಾಯದ ವಿಷಯದಲ್ಲಿ ಲಾಭವನ್ನು ಹೆಚ್ಚಿಸಲಿದೆ. ಆದಾಯದ ಹೆಚ್ಚಳವು ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಉದ್ಯಮಿಗಳಿಗೆ ಇದು ಉತ್ತಮ ಸಮಯ. ಸಾಕಷ್ಟು ಪ್ರಮಾಣದ ಲಾಭವಾಗುವುದು. ಎದುರಿಗಿರುವ  ಜನರು ನಿಮ್ಮಿಂದ ಪ್ರಭಾವಿತರಾಗುತ್ತಾರೆ. 


ಇದನ್ನೂ ಓದಿ :  Tulsi Niyam: ತುಳಸಿ ಸಸ್ಯದ ಬಳಿ ಈ ವಸ್ತುಗಳಿದ್ದರೆ ಈಗಲೇ ತೆಗೆಯಿರಿ, ಇಲ್ಲವೇ...


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.