Guru Asta 2023 Effect: ವೈದಿಕ ಜ್ಯೋತಿಷ್ಯದಲ್ಲಿ ಬೃಹಸ್ಪತಿಯನ್ನು ಗ್ರಹಗಳ ದೇವಗುರು ಎಂದು ಬಣ್ಣಿಸಲಾಗುತ್ತದೆ. ಮಾತ್ರವಲ್ಲ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಶುಭ ಸ್ಥಾನದಲ್ಲಿದ್ದರೆ ಅವರು ಜೀವನದ ಎಲ್ಲಾ ಸುಖ-ಸೌಕರ್ಯಗಳನ್ನು ಪಡೆಯುತ್ತಾರೆ. ಅವರ ಜೀವಂದಲ್ಲಿ ಯಾವುದಕ್ಕೂ ಸಹ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಅದೇ, ಗುರು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ ಜೀವನದಲ್ಲಿ ನಾನಾ ರೀತಿಯ ಕಷ್ಟ-ಕಾರ್ಪಣ್ಯಗಳು ಎದುರಾಗುತ್ತವೆ ಎಂದು ಸಹ ಹೇಳಲಾಗುತ್ತದೆ. ಇಂತಹ ಗುರು ನಾಳೆ ಎಂದರೆ ಮಾರ್ಚ್ 28ರಂದು ಮೀನ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೀನ ರಾಶಿಯಲ್ಲಿ ಅಸ್ತಮಿಸಿದ ತಕ್ಷಣ ದೇವಗುರು ಬೃಹಸ್ಪತಿಯು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಏಪ್ರಿಲ್ 27ರಂದು ಗುರುದೇವನು ಉದಯಿಸುತ್ತಾನೆ. ಅಲ್ಲಿಯವರೆಗೆ ಅಂದರೆ ಮುಂದಿನ 30 ದಿನಗಳವರೆಗೆ ಗುರು ದುರ್ಬಲನಾಗಿರುತ್ತಾನೆ. ಈ ಸಮಯದಲ್ಲಿ ಗುರು ಎಲ್ಲಾ 12 ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟುಮಾಡುತ್ತಾನೆ. ಆದಾಗ್ಯೂ, ಈ ಒಂದು ತಿಂಗಳು ಐದು ರಾಶಿಯವರು ತುಂಬಾ ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ತಿಳಿಯೋಣ... 


ಮೀನ ರಾಶಿಯಲ್ಲಿ ಗುರು ಅಸ್ತ : ಈ ರಾಶಿಯವರಿಗೆ  ಕಷ್ಟದ ದಿನಗಳು ಆರಂಭ 
ಮೇಷ ರಾಶಿ: 

ಗುರು ಆಸ್ತಮ ಪ್ರಭಾವದಿಂದಾಗಿ ಮೇಷ ರಾಶಿಯವರಿಗೆ ಕೆಲಸಗಳಲ್ಲಿ ತೊಡಕುಂಟಾಗಬಹುದು.  ಇದಲ್ಲದೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಲು ತಯಾರಿ ನಡೆಸುತ್ತಿರುವವರಿಗೂ ನಾನಾ ರೀತಿಯ ಸಂಕಷ್ಟಗಳು ಎದುರಾಗಬಹುದು.  


ಇದನ್ನೂ ಓದಿ- Daan On Akshaya Tritiya: ಅಕ್ಷಯ ತೃತೀಯದಂದು ಈ ವಸ್ತುಗಳನ್ನು ದಾನ ಮಾಡಿದರೆ ಸದಾ ಇರುತ್ತೆ ಲಕ್ಷ್ಮೀ ಕೃಪೆ


ವೃಷಭ ರಾಶಿ: 
ಬೃಹಸ್ಪತಿ ಅಸ್ತನಾಗುವುದರ ಜೊತೆಗೆ ನಿಮ್ಮ ಅದೃಷ್ಟದ ಬಾಗಿಲುಗಳು ಸಹ ಮುಚ್ಚಲಿವೆ. ನೀವು ಸರ್ಕಾರಿ ಉದ್ಯೋಗದಲ್ಲಿದ್ದರೆ ನಿಮ್ಮ ಕೈ ಅನ್ನು ಶುದ್ಧವಾಗಿಟ್ಟುಕೊಳ್ಳಿ, ಇಲ್ಲದಿದ್ದರೆ ಭಾರೀ ನಷ್ಟ ಎದುರಿಸಬೇಕಾಗಬಹುದು. 


ಕರ್ಕಾಟಕ ರಾಶಿ: 
ಉದ್ಯೋಗದಲ್ಲಿ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸ್ವಂತ ವ್ಯವಹಾರ ಮಾಡುವವರಿಗೆ ಆರ್ಥಿಕ ಕೊರತೆ ಕಾಡಬಹುದು. ಆದಾಗ್ಯೂ, ಯಾವುದಕ್ಕೂ ಚಿಂತಿಸದೆ ಮುನ್ನಡೆಯಿರಿ. ದೀರ್ಘವಾದ ಕತ್ತಲು ಕಳೆದ ಮೇಲೆ ಬೆಳಕು ಬರಲೇ ಬೇಕು ಎಂಬುದನ್ನೂ ನೆನಪಿಡಿ. 


ವೃಶ್ಚಿಕ ರಾಶಿ: 
ಅಸ್ತಮಿಸಲಿರುವ ಗುರುವು ವೃಶ್ಚಿಕ ರಾಶಿಯವರ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪ್ರಭಾವ ಬೀರುವನು. ಇದಲ್ಲದೆ, ನೀವು ನಿಮ್ಮ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸುವ ಅವಶ್ಯಕತೆ ಇದ್ದು  ಜಂಕ್ ಫುಡ್ ಗಳಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳಿ.


ಇದನ್ನೂ ಓದಿ- Akshaya Tritiya 2023 : ಈ ಅಕ್ಷಯ ತೃತೀಯ ದಿನ ಇವುಗಳಲ್ಲಿ ಒಂದನ್ನು ಮನೆಗೆ ತನ್ನಿ, ವರ್ಷವಿಡೀ ಆರ್ಥಿಕ ಲಾಭ!


ಧನು ರಾಶಿ: 
ಅಸ್ತಮಿಸಲಿರುವ ಗುರುವು ಈ ರಾಶಿಯವರ ಆತ್ಮವಿಶ್ವಾಸವನ್ನು ಕುಂಡಿಸಲಿದ್ದಾನೆ. ಅನಗತ್ಯ ಚಿಂತೆಗೆ ಕಡಿವಾಣ ಹಾಕುವುದು ಅಗತ್ಯ, ಇಲ್ಲದಿದ್ದರೆ ನಿಮ್ಮ ಭಯದಿಂದಲೇ ನಿಮ್ಮ ಕೆಲಸಗಳಲ್ಲಿ ಎಡವಟ್ಟಾಗುತ್ತದೆ. ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಲು ನಿಮ್ಮ ಸೋಮಾರಿತನವನ್ನು ಬಿಡಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.