Daan On Akshaya Tritiya: ಅಕ್ಷಯ ತೃತೀಯದಂದು ಈ ವಸ್ತುಗಳನ್ನು ದಾನ ಮಾಡಿದರೆ ಸದಾ ಇರುತ್ತೆ ಲಕ್ಷ್ಮೀ ಕೃಪೆ

Akshaya Tritiya 2023: ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯದಂದು ಕೆಲವು ವಸ್ತುಗಳನ್ನು ಖರೀದಿಸುವುದು ತುಂಬಾ ಶುಭ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಈ ದಿನ ಕೆಲವು ವಸ್ತುಗಳನ್ನು ದಾನ ಮಾಡುವುದರಿಂದಲೂ ಶುಭ ಫಲಗಳು ಪ್ರಾಪ್ತಿಯಾಗುತ್ತವೆ ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Mar 27, 2023, 03:10 PM IST
  • ಅಕ್ಷಯ ತೃತೀಯದ ದಿನ ಚಿನ್ನ, ಬೆಳ್ಳಿಯನ್ನು ಖರೀದಿಸುವುದು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.
  • ಒಂದೊಮ್ಮೆ ಚಿನ್ನ, ಬೆಳ್ಳಿಯಂತಹ ವಸ್ತುಗಳನ್ನು ಖರೀದಿಸಲು ಸಾಧ್ಯವಾಗದಿದ್ದರೆ ಬಾರ್ಲಿಯನ್ನು ಸಹ ಖರೀದಿಸಬಹುದು.
  • ಮಾತ್ರವಲ್ಲ, ಈ ದಿನ ಬಾರ್ಲಿಯನ್ನು ಎಂದರೆ ಜವೆಗೋಧಿಯನ್ನು ಅಗತ್ಯವಿರುವವರಿಗೆ ದಾನ ಮಾಡುವುದರಿಂದ ಅಂತಹ ಮನೆಯಲ್ಲಿ ತಾಯಿ ಮಹಾಲಕ್ಷ್ಮೀ ಸದಾ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ.
Daan On Akshaya Tritiya: ಅಕ್ಷಯ ತೃತೀಯದಂದು ಈ ವಸ್ತುಗಳನ್ನು ದಾನ ಮಾಡಿದರೆ ಸದಾ ಇರುತ್ತೆ ಲಕ್ಷ್ಮೀ ಕೃಪೆ  title=
Daan On Akshaya Tritiya

Daan On Akshaya Tritiya: ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯನ್ನು ಅಕ್ಷಯ ತೃತೀಯ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ, ಅಕ್ಷಯ ತೃತೀಯ ದಿನದಂದು ಕೆಲವು ವಸ್ತುಗಳನ್ನು ಮನೆಗೆ ತರುವುದರಿಂದ ಸಂಪತ್ತು ವೃಡ್ಡಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ, ಅಕ್ಷಯ ತೃತೀಯದ ದಿನ ಕೆಲವು ವಸ್ತುಗಳನ್ನು ದಾನ ಮಾಡುವುದರಿಂದಲೂ ಸಂಪತ್ತಿನ ಅಧಿದೇವತೆಯಾದ ತಾಯಿ ಮಹಾ ಲಕ್ಷ್ಮೀ ಕೃಪೆಗೆ ಪಾತ್ರರಾಗಬಹುದು ಎಂಬ ನಂಬಿಕೆಯೂ ಇದೆ. 

ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯದ ದಿನ ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ವ್ಯಕ್ತಿಯ ಅದೃಷ್ಟದ ಬಾಗಿಲುಗಳು ತೆರೆಯುತ್ತವೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಅಕ್ಷಯ ತೃತೀಯದಂದು ಯಾವ ವಸ್ತುಗಳನ್ನು ದಾನ ಮಾಡುವುದು ಶ್ರೇಷ್ಠ ಎಂದು ತಿಳಿಯೋಣ...

ಅಕ್ಷಯ ತೃತೀಯದಂದು ಇವುಗಳನ್ನು ದಾನ ಮಾಡಿದರೆ ಜೀವನ ಪರ್ಯಂತ ದಯೆ ತೋರುತ್ತಾಳೆ ತಾಯಿ ಲಕ್ಷ್ಮೀ:
ಬಾರ್ಲಿ/ಜವೆ ಗೋಧಿ:

ಅಕ್ಷಯ ತೃತೀಯದ ದಿನ ಚಿನ್ನ, ಬೆಳ್ಳಿಯನ್ನು ಖರೀದಿಸುವುದು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಒಂದೊಮ್ಮೆ ಚಿನ್ನ, ಬೆಳ್ಳಿಯಂತಹ ವಸ್ತುಗಳನ್ನು ಖರೀದಿಸಲು ಸಾಧ್ಯವಾಗದಿದ್ದರೆ ಬಾರ್ಲಿಯನ್ನು ಸಹ ಖರೀದಿಸಬಹುದು. ಮಾತ್ರವಲ್ಲ, ಈ ದಿನ ಬಾರ್ಲಿಯನ್ನು ಎಂದರೆ ಜವೆಗೋಧಿಯನ್ನು ಅಗತ್ಯವಿರುವವರಿಗೆ ದಾನ ಮಾಡುವುದರಿಂದ ಅಂತಹ ಮನೆಯಲ್ಲಿ ತಾಯಿ ಮಹಾಲಕ್ಷ್ಮೀ ಸದಾ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. 

ಇದನ್ನೂ ಓದಿ- Akshaya Tritiya 2023 : ಈ ಅಕ್ಷಯ ತೃತೀಯ ದಿನ ಇವುಗಳಲ್ಲಿ ಒಂದನ್ನು ಮನೆಗೆ ತನ್ನಿ, ವರ್ಷವಿಡೀ ಆರ್ಥಿಕ ಲಾಭ!

ಆಹಾರ ಪದಾರ್ಥಗಳ ದಾನ: 
ವೈಶಾಖ ಮಾಸದ ತೃತೀಯ ದಿನ ಅಂದರೆ ಅಕ್ಷಯ ತೃತೀಯದಂದು  ಜವೆಗೋಧಿ ಮಾತ್ರವಲ್ಲದೆ,  ಬೆಲ್ಲ, ಬೇಳೆ, ತುಪ್ಪ, ಉಪ್ಪು, ಎಳ್ಳು, ಸೌತೆಕಾಯಿ, ಅಕ್ಕಿ, ಹಿಟ್ಟು, ಉದ್ದಿನಬೇಳೆ ಮುಂತಾದ ಆಹಾರ ಪದಾರ್ಥಗಳನ್ನು ದಾನ ಮಾಡುವುದನ್ನು ತುಂಬಾ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ದಿನ ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ದಾನ ಮಾಡುವುದರಿಂದ ನಿಮ್ಮ ಮನೆಯಲ್ಲಿ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. 

ವಸ್ತ್ರ ದಾನ: 
ಶಾಸ್ತ್ರಗಳಲ್ಲಿ ಅಕ್ಷಯ ತೃತೀಯ ದಿನದಂದು ವಸ್ತ್ರ ಎಂದರೆ ಬಟ್ಟೆಗಳನ್ನು ದಾನ ಮಾಡುವುದನ್ನು ಸಹ ತುಂಬಾ ಮಂಗಳಕರ ಎಂದು ಭಾವಿಸಲಾಗಿದೆ. ವೈಶಾಖ ಮಾಸದ ತೃತೀಯ ದಿನ ಅಂದರೆ ಅಕ್ಷಯ ತೃತೀಯದಂದು  ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅಗತ್ಯವಿರುವವರಿಗೆ ವಸ್ತ್ರವನ್ನು ದಾನ ಮಾಡಿದರೆ ತಾಯಿ ಲಕ್ಷ್ಮೀ ದೇವಿಯ ಅಪಾರ ಆಶೀರ್ವಾದ ದೊರೆಯುತ್ತದೆ. 

ಇದನ್ನೂ ಓದಿ- Gold Purchase Vastu Tips: ಈ ದಿನ ಅಪ್ಪಿ ತಪ್ಪಿಯೂ ಚಿನ್ನ ಖರೀದಿಸಬೇಡಿ!

ತಾಮ್ರದ ಪಾತ್ರೆಯಲ್ಲಿ ನೀರು ದಾನ ಮಾಡಿ: 
ಅಕ್ಷಯ ತೃತೀಯದ ದಿನ ತಾಮ್ರದ ತಂಬಿಗೆ ಇಲ್ಲವೇ ಹೂಜಿಯಲ್ಲಿ ನೀರು ತುಂಬಿ ದಾನ ಮಾಡುವುದನ್ನು ಸಹ ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ಈ ಕೆಲಸದ್ದ್ನ ತಾಯಿ ಮಹಾಲಕ್ಷ್ಮೀ ಪ್ರಸನ್ನಳಾಗಿ ಸಂಪತ್ತಿನ ಹೊಳೆಯನ್ನು ಹರಿಸುವಳು ಎಂದು ನಂಬಲಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News