2023 ರಲ್ಲಿ ರೂಪುಗೊಳ್ಳುತ್ತಿರುವ ಗಜಲಕ್ಷ್ಮಿ ರಾಜ ಯೋಗದಿಂದ ಮೂರು ರಾಶಿಯವರ ಕೈ ಹಿಡಿಯುವುದು ಅದೃಷ್ಟ
ಗುರು ಗೋಚಾರ ಫಲ 2023 : ಗುರುವಿನ ರಾಶಿ ಬದಲಾವಣೆಯಿಂದಾಗಿ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗುತ್ತಿದೆ. ಈ ಗಜಲಕ್ಷ್ಮಿ ರಾಜಯೋಗದ ಕಾರಣ ಗುರು ಗ್ರಹ ಮೂರು ರಾಶಿಯವರ ಅದೃಷ್ಟವನ್ನು ಬೆಳಗಲಿದ್ದಾರೆ.
ಬೆಂಗಳೂರು : ಜ್ಯೋತಿಷ್ಯದಲ್ಲಿ, ಗುರು ಬೃಹಸ್ಪತಿಯನ್ನು ದೇವ ಗುರು ಎಂದೇ ಕರೆಯಲಾಗುತ್ತದೆ. ಗುರುವು ಅದೃಷ್ಟ, ಮದುವೆ, ಸಂತೋಷ ಮತ್ತು ಸಮೃದ್ಧಿಯ ಪ್ರತೀಕ. ಯಾರ ಜಾತಕದಲ್ಲಿ ಗುರುವು ಮಂಗಳಕರವಾಗಿರುತ್ತಾನೆಯೋ ಅವರ ಪ್ರತಿ ಕೆಲಸದಲ್ಲಿಯೂ ಅದೃಷ್ಟ ಕೈ ಹಿಡಿಯುತ್ತದೆ. ಮಾಡುವ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಗೆ ಕೊರತೆ ಇರುವುದೇ ಇಲ್ಲ. ದೇವಗುರು ಬೃಹಸ್ಪತಿ ಏಪ್ರಿಲ್ 22, 2023 ರಂದು, ರಾಶಿ ಬದಲಾಯಿಸಿ ಮೇಷ ರಾಶಿಯನ್ನು ಪ್ರವೇಶಿಸುತ್ತಾರೆ. ಗುರುವಿನ ರಾಶಿ ಬದಲಾವಣೆಯಿಂದಾಗಿ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗುತ್ತಿದೆ. ಈ ಗಜಲಕ್ಷ್ಮಿ ರಾಜಯೋಗದ ಕಾರಣ ಗುರು ಗ್ರಹ ಮೂರು ರಾಶಿಯವರ ಅದೃಷ್ಟವನ್ನು ಬೆಳಗಲಿದ್ದಾರೆ.
ಆ ಅದೃಷ್ಟ ರಾಶಿಗಳು ಯಾವುವು ಎಂದರೆ :
ಮೇಷ ರಾಶಿ : ಗುರುವಿನ ಸಂಕ್ರಮಣದಿಂದ ಉಂಟಾಗುವ ಗಜಲಕ್ಷ್ಮಿ ರಾಜಯೋಗವು ಮೇಷ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಇಲ್ಲಿ ಗುರುವು ತನ್ನ ರಾಶಿಯನ್ನು ಬದಲಾಯಿಸಿದ ನಂತರ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಹಾಗಾಗಿ ಮೇಷ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಅದ್ಭುತ ಯಶಸ್ಸನ್ನು ಪಡೆಯುವ ಅವಕಾಶಗಳಿವೆ. ಉದ್ಯೋಗದಲ್ಲಿರುವವರು ಉನ್ನತ ಸ್ಥಾನಕ್ಕೆ ಏರುತ್ತಾರೆ. ಉದ್ಯಮಿಗಳಿಗೂ ಲಾಭವಾಗುತ್ತದೆ. ಮಗುವಿನ ಕಡೆಯಿಂದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹಳೆಯ ಎಲ್ಲಾ ಸಮಸ್ಯೆಗಳು ಮಂಜಿನಂತೆ ಕರಗಿ ಹೋಗುತ್ತದೆ.