ವರ್ಷದ ಕೊನೆಯ ದಿನ ಈ ರಾಶಿಯವರಿಗೆ ಸಿಗಲಿದೆ ಶನಿ ದೆಸೆಯಿಂದ ಮುಕ್ತಿ.!

ವರ್ಷದ ಕೊನೆಯ ದಿನವಾದ ಡಿಸೆಂಬರ್ 31ರ ಶನಿವಾರದಂದು ಈ ವಿಶೇಷ ಪರಿಹಾರವನ್ನು ಮಾಡುವುದರಿಂದ ವ್ಯಕ್ತಿಯು ಸಾಡೇ ಸಾತಿ ಮತ್ತು ಧೈಯ್ಯಾದಿಂದ ಮುಕ್ತಿ ಪಡೆಯುವುದರ ಜೊತೆಗೆ ಇನ್ನೂ ಹೆಚ್ಚಿನ ಪರಿಹಾರವನ್ನು ಪಡೆಯಬಹುದು. 

Written by - Ranjitha R K | Last Updated : Dec 19, 2022, 03:32 PM IST
  • ಗ್ರಹವು ಒಂದು ನಿರ್ದಿಷ್ಟ ಸಮಯದ ನಂತರ ತನ್ನ ಪಥವನ್ನು ಬದಲಿಸುತ್ತದೆ.
  • ನೇರ ಅಥವಾ ಹಿಮ್ಮುಖ ಚಲನೆ ಹೀಗೆ ಗ್ರಹಗಳು ತಮ ಪಥವನ್ನು ಬದಲಿಸುತ್ತವೆ.
  • ಜನವರಿ 17 ರಂದು, ಕುಂಭ ರಾಶಿಯನ್ನು ಪ್ರವೆಶಿಸಲಿದ್ದಾನೆ ಶನಿ
ವರ್ಷದ ಕೊನೆಯ ದಿನ ಈ ರಾಶಿಯವರಿಗೆ ಸಿಗಲಿದೆ ಶನಿ ದೆಸೆಯಿಂದ ಮುಕ್ತಿ.! title=

ಬೆಂಗಳೂರು : ಹಿಂದೂ ಪಂಚಾಂಗದ ಪ್ರಕಾರ, ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಸಮಯದ ನಂತರ ತನ್ನ ಪಥವನ್ನು ಬದಲಿಸುತ್ತದೆ. ನೇರ ಅಥವಾ ಹಿಮ್ಮುಖ ಚಲನೆ ಹೀಗೆ ಗ್ರಹಗಳು ತಮ ಪಥವನ್ನು ಬದಲಿಸುತ್ತವೆ. ಗ್ರಹಗಳ ಬದಲಾವಣೆಯು ದ್ವಾದಶ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಶನಿಯು ಪ್ರಸ್ತುತ ಮಕರ ರಾಶಿಯಲ್ಲಿದ್ದಾನೆ. ಜನವರಿ 16 ರವರೆಗೆ  ಮಕರ ರಾಶಿಯಲ್ಲಿಯೇ ಇರಲಿರುವ ಶನಿ ಗ್ರಹ ಜನವರಿ 17 ರಂದು,  ಕುಂಭ ರಾಶಿಯನ್ನು ಪ್ರವೆಶಿಸಲಿದ್ದಾನೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನವರಿ 16ರ ವರೆಗೆ ಮಕರ, ಕುಂಭ, ಧನು ರಾಶಿಯವರಿಗೆ ಏಳೂವರೆ ಶನಿ ದೆಸೆ ಹಾಗೂ ಮಿಥುನ, ತುಲಾ ರಾಶಿಯವರಿಗೆ  ಎರಡೂವರೆ ವರ್ಷದ ಶನಿ ದೆಸೆ ನಡೆಯುತ್ತಿರುತ್ತದೆ. ವರ್ಷದ ಕೊನೆಯ ದಿನವಾದ ಡಿಸೆಂಬರ್ 31ರ ಶನಿವಾರದಂದು ಈ ವಿಶೇಷ ಪರಿಹಾರವನ್ನು ಮಾಡುವುದರಿಂದ ವ್ಯಕ್ತಿಯು ಸಾಡೇ ಸಾತಿ ಮತ್ತು ಧೈಯ್ಯಾದಿಂದ ಮುಕ್ತಿ ಪಡೆಯುವುದರ ಜೊತೆಗೆ ಇನ್ನೂ ಹೆಚ್ಚಿನ ಪರಿಹಾರವನ್ನು ಪಡೆಯಬಹುದು. 

ಇದನ್ನೂ ಓದಿ : Lucky Gemstone: ಈ ರಾಶಿಯವರು ಈ ರತ್ನವನ್ನು ಧರಿಸಿದರೆ ರಾಜಯೋಗ ಪಡೆಯುತ್ತೀರಿ

ಶನಿ ಸ್ತೋತ್ರದ ಪಠಣ : 
ನಮಃ: ಕೃಷ್ಣ ನಿಲಯ ಶಿತಿಕಾಂತ ನಿಭಾಯ ​​ಚ.
ನಮಃ: ಕಾಲಾಗ್ನಿರೂಪಾಯ ಕೃತಾಂತಾಯ ಚ ವೈ ನಮಃ. 1
ನಮಃ: ಕೃಷ್ಣ ನಿಲಯ ಶಿತಿಕಾಂತ ನಿಭಾಯ ​​ಚ.
ನಮಃ: ಕಾಲಾಗ್ನಿರೂಪಾಯ ಕೃತಾಂತಾಯ ಚ ವೈ ನಮಃ. 1 

ಶನಿ  ಸ್ತೋತ್ರದ ಮಹತ್ವ :
ಧರ್ಮಗ್ರಂಥಗಳ ಪ್ರಕಾರ, ಶನಿ ದೇವನನ್ನು ಮೆಚ್ಚಿಸಲು ರಾಜ ದಶರಥನು ಶನಿ ಸ್ತೋತ್ರವನ್ನು ಪಠಿಸುತ್ತಾನೆ. ಇದನ್ನು ಪಠಿಸುವ ಮೂಲಕ ರಾಜ ದಶರಥ ಶನಿದೇವನ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ದಶರಥನ ಮೆಚ್ಚುಗೆಗೆ ಪಾತ್ರನಾದ ಶನಿದೇವನು ದಶರಥನ ಬಳಿ ತನಗೆ ಬೇಕಾದ ವರವನ್ನು ಕೇಳುವಂತೆ ಸೂಚಿಸುತ್ತಾನೆ.  ಆಗ ದಶರಥನು ತನ್ನ ರಾಜ್ಯಭಾರದಲ್ಲಿ ರಾಕ್ಷಸ, ಮನುಷ್ಯ, ಪ್ರಾಣಿ ಮತ್ತು ಪಕ್ಷಿಗಳಿಗೆ ನೋವು ನೀಡುವುದನ್ನು ನಿಲ್ಲಿಸಬೇಕೆಂದು  ಕೋರುತ್ತಾನೆ. ರಾಜ ದಶರಥನ ಈ ಆಸೆಯನ್ನು ಕೇಳಿ ಸಂತೋಷಪಟ್ಟ ಶನಿ ಮಹಾರಾಜ ಅವನ ಆಸೆಯನ್ನು ಪೂರೈಸುವ ವರವನ್ನು  ಕರುನಿಸುತ್ತಾನೆಯಂತೆ. 

ಹೀಗಾಗಿ ಈ ಶನಿ ಸ್ತೋತ್ರವನ್ನು ಪರಿಸುವ ಮೂಲಕ ಜೀವನದ ಎಲ್ಲಾ ಕಶಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ : Bats : ಬಾವಲಿಗಳು ಮನೆಗೆ ಬರುವುದು ಶುಭವೋ! ಅಶುಭವೋ?

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News