Daan On Guru Purnima: ಹಿಂದೂ ಧರ್ಮ ಗ್ರಂಥಗಳಲ್ಲಿ ಅಮಾವಾಸ್ಯೆ, ಹುಣ್ಣಿಮೆ ತಿಥಿಗಳಿಗೆ ವಿಶೇಷ ಮಹತ್ವವಿದೆ. ಈ ದಿನ ಮುಂಜಾನೆ ನಿತ್ಯ ಕರ್ಮಗಳನ್ನು ಮುಗಿಸಿ ಸ್ನಾನ ಮಾಡಿ, ದೇವರ ಪೂಜೆ ಬಳಿಕ ದಾನ ಮಾಡುವುದನ್ನು ಪುಣ್ಯದ ಕೆಲಸ ಎಂದು ಭಾವಿಸಲಾಗುತ್ತದೆ. ಅದರಲ್ಲೂ, ಆಷಾಢ ಮಾಸದ ಹುಣ್ಣಿಮೆಯಂದು ಆಚರಿಸಲ್ಪಡುವ ಗುರು ಪೂರ್ಣಿಮೆಯ ದಿನ ನಿಮ್ಮ ರಾಶಿಚಕ್ರಕ್ಕೆ ಅನುಸಾರವಾಗಿ ಅಗತ್ಯವಿರುವವರಿಗೆ ಕೆಲವು ವಸ್ತುಗಳನ್ನು ದಾನ ಮಾಡುವುದನ್ನು ತುಂಬಾ ಶ್ರೇಷ್ಠ ಎಂದು ಭಾವಿಸಲಾಗಿದೆ. ಮಾತ್ರವಲ್ಲ, ಈ ದಿನ ದಾನ ಮಾಡುವುದರಿಂದ ಜೀವನದಲ್ಲಿ ಎದುರಾಗಿರುವ ಅಡೆತಡೆಗಳು ದೂರವಾಗಿ, ಹಣಕಾಸಿನ ಹರಿವು ಹೆಚ್ಚಾಗುತ್ತದೆ. ಇದರಿಂದ ಜೀವನದಲ್ಲಿ ಸಂಪತ್ತಿನ ಸುರಿಮಳೆಯ ಜೊತೆಗೆ ಸುಖ-ಸಮೃದ್ಧಿಯ ಜೀವನವನ್ನು ಅನುಭವಿಸಬಹುದು ಎಂಬುದು ನಂಬಿಕೆ ಆಗಿದೆ. 


COMMERCIAL BREAK
SCROLL TO CONTINUE READING

ಗುರು ಪೂರ್ಣಿಮೆಯಂದು ನಿಮ್ಮ ರಾಶಿಗೆ ಅನುಗುಣವಾಗಿ ಯಾವ ವಸ್ತುಗಳನ್ನು ದಾನ ಮಾಡಬೇಕು ತಿಳಿಯಿರಿ... 
ಮೇಷ ರಾಶಿ: 

ಇಂದು ಗುರು ಪೂರ್ಣಿಮೆಯ ದಿನ ಮೇಷ ರಾಶಿಯವರು ಬೆಲ್ಲದಿಂದ ತಯಾರಿಸಿದ ಸಿಹಿತಿಂಡಿಗಳು ಮತ್ತು  ಕೆಂಪು ಅಥವಾ ಕಿತ್ತಳೆ ಬಣ್ಣದ ಬಟ್ಟೆಗಳನ್ನು ದಾನ ಮಾಡುವುದು ಒಳ್ಳೆಯದು. 


ವೃಷಭ ರಾಶಿ: 
ಗುರು ಪೂರ್ಣಿಮೆಯಂದು ವೃಷಭ ರಾಶಿಯವರಿಗೆ  ಅಗತ್ಯವಿದ್ದವರಿಗೆ ಸಕ್ಕರೆ ಅಥವಾ ಅಕ್ಕಿಯನ್ನು ದಾನ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಯಾಗಲಿದೆ. 


ಮಿಥುನ ರಾಶಿ: 
ಮಿಥುನ ರಾಶಿಯವರು ಗುರು ಪೂರ್ಣಿಮೆಯ ಈ ದಿನ ಹಸುವಿಗೆ ಹಸಿರು ಮೇವನ್ನು ತಿನ್ನಿಸಿ. ಬಳಿಕ ಬೆಂಡೆಕಾಯಿಯನ್ನು ಬಡವರಿಗೆ ದಾನವಾಗಿ ನೀಡಿ. 


ಕರ್ಕ ರಾಶಿ: 
ಕರ್ಕಾಟಕ ರಾಶಿಯವರು ಇಂದು ಗುರು ಪೂರ್ಣಿಮೆಯಂದು ನಿರ್ಗತಿಕರಿಗೆ ಹಾಲನ್ನು ದಾನ ಮಾಡುವುದರಿಂದ ಶುಭ ಫಲ. 


ಇದನ್ನೂ ಓದಿ- Guru Purnima 2023: ಇಂದು ಮುಸ್ಸಂಜೆ ವೇಳೆ ಈ ಕೆಲಸ ಮಾಡಿದರೆ ವರ್ಷವಿಡೀ ಇರುತ್ತೆ ಲಕ್ಷ್ಮೀ ಕೃಪೆ


ಸಿಂಹ ರಾಶಿ: 
ಸಿಂಹ ರಾಶಿಯ ಜನರು ಗುರು ಪೂರ್ಣಿಮೆಯ ದಿನ ಅಗತ್ಯವಿರುವವರಿಗೆ ಗೋಧಿಯನ್ನು ದಾನ ಮಾಡುವುದರಿಂದ ಒಳ್ಳೆಯ ಫಲಗಳು ಪ್ರಾಪ್ತಿಯಾಗುತ್ತವೆ. 


ಕನ್ಯಾ ರಾಶಿ: 
ಕನ್ಯಾ ರಾಶಿಯ ಜನರು ಗುರು ಪೂರ್ಣಿಮೆಯ ದಿನ ಬ್ರಾಹ್ಮಣರನ್ನು ಕರೆದು ಊಟ ಹಾಕುವುದು ಒಳ್ಳೆಯದು. 


ತುಲಾ ರಾಶಿ: 
ಗುರು ಪೂರ್ಣಿಮೆಯ ದಿನ ತುಲಾ ರಾಶಿಯವರು ಇನ್ನೂ ಮದುವೆಯಾಗದ ಕನ್ಯೆಯರನ್ನು ಕರೆದು ಅವರಿಗೆ ಕುಂಕುಮ ಹಚ್ಚಿ ಹಾಲಿನಿಂದ ತಯಾರಿಸಿದ ಖೀರ್ ಅನ್ನು ನೀಡಬೇಕು. ಈ ರೀತಿ ಮಾಡುವುದರಿಂದ ಮನೆಗೆ ಧನಾಗಮನವಾಗುತ್ತದೆ.  


ವೃಶ್ಚಿಕ ರಾಶಿ: 
ಗುರು ಪೂರ್ಣಿಮಯ ದಿನ ವೃಶ್ಚಿಕ ರಾಶಿಯವರು ವಾನರರಿಗೆ ಬೆಲ್ಲ ಮತ್ತು ಕಾಳುಗಳನ್ನು ಆಹಾರವಾಗಿ ನೀಡಿ.  ಜೊತೆಗೆ ಅಗತ್ಯವಿರುವ ಮಕ್ಕಳಿಗೆ ಪುಸ್ತಕ ಮತ್ತು ಬೋಧನಾ ಸಾಮಗ್ರಿಗಳನ್ನು ದಾನವಾಗಿ ನೀಡುವುದರಿಂದ ನಿಮಗೆ ಲಾಭವಾಗಲಿದೆ. 


ಇದನ್ನೂ ಓದಿ- Weekly Horoscope: ಜುಲೈ ತಿಂಗಳ ಮೊದಲ ವಾರ ಯಾರ ಭವಿಷ್ಯ ಹೇಗಿದೆ


ಧನು ರಾಶಿ: 
ಗುರು ಪೂರ್ಣಿಮೆಯಂದು ಧನು ರಾಶಿಯ ಜನರು ಬೇಳೆಕಾಳು, ತುಪ್ಪ, ಸಕ್ಕರೆಯನ್ನು ಬಡವರಿಗೆ ದಾನ ಮಾಡಲು ಸಲಹೆ ನೀಡಲಾಗುತ್ತದೆ. 


ಮಕರ ರಾಶಿ: 
ಮಕರ ರಾಶಿಯವರು ಗುರು ಪೂರ್ಣಿಮೆಯಂದು ಬಡವರು ಮತ್ತು ಅಸಹಾಯಕರಿಗೆ ಹೊದಿಕೆ ಅಥವಾ ವಸ್ತ್ರಗಳನ್ನು ದಾನ ಮಾಡಲು ಸೂಚಿಸಲಾಗುತ್ತದೆ. 


ಕುಂಭ ರಾಶಿ: 
ಇಂದು ಗುರು ಪೂರ್ಣಿಮೆಯಂದು ಕುಂಭ ರಾಶಿಯವರು ವೃದ್ಧಾಶ್ರಮಕ್ಕೆ ಆಹಾರ ಮತ್ತು ವಸ್ತ್ರ ದಾನ ಮಾಡುವುದನ್ನು ಒಳಿತು ಎಂದು ಹೇಳಲಾಗುತ್ತದೆ. ಇಲ್ಲವೇ, ದೇವಸ್ಥಾನದಲ್ಲಿ ಕಪ್ಪು ಉದ್ದಿನ ಬೇಳೆಯನ್ನು ದಾನವಾಗಿ ನೀಡಿ. 


ಮೀನ ರಾಶಿ: 
ಇಂದು ಗುರು ಪೂರ್ಣಿಮೆಯಂದು ಮೀನ ರಾಶಿಯವರು ಹಳದಿ ಆಹಾರ ಧಾನ್ಯಗಳನ್ನು ದಾನವಾಗಿ ನೀಡಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.